Advertisement
ದೀಪಾ ನರ್ಸಿಂಗ್ ಹೋಂ ಮುಖ್ಯರಸ್ತೆ ಹಾಗೂ ಚರಂಡಿಯನ್ನು ನಗರಸಭೆ ದುರಸ್ತಿ ಮಾಡುತ್ತಿದೆ. ಆದರೆ, ಗುತ್ತಿಗೆದಾರ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡುತ್ತಿದ್ದು, ಶಂಕರಪುರ 4ನೇ ಹಾಗೂ 5ನೇ ತಿರುವುಗಳಲ್ಲಿ ನೀರು ಒಳ ರಸ್ತೆಗಳಲ್ಲಿ ನುಗ್ಗುವ ರೀತಿ ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ದೂರಿದರು.
ತಿಂಗಳಿಂದ ಅಮೃತ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಈ ಬಡಾವಣೆಯ ನಾಗರಿಕರು ನೀರು ಮತ್ತು ರಸ್ತೆಯ ಸೌಕರ್ಯವಿಲ್ಲದೇ ಜೀವನ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಚರಂಡಿ, ರಸ್ತೆ ಹಾಗೂ ಇಲ್ಲಿನ ಕಲುಷಿತ ವಾತಾವರಣದಿಂದ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದ್ದು ಗುತ್ತಿಗೆದಾರರು, ಅಧಿಕಾರಿಗಳು, ಜನಪ್ರತಿನಿಧಿಗಳ ಜವಾಬ್ದಾರಿತನದಿಂದ ಒಂದು ತಿಂಗಳು ಕಳೆದರು ತಿಂಗಳಾದರು ಚರಂಡಿಯ ಒಂದು ಬದಿಯ ಸ್ಲ್ಯಾಬ್ ನಿರ್ಮಿಸಲು
ಸಾಧ್ಯವಾಗಿಲ್ಲ. ಈ ರಸ್ತೆಯಲ್ಲಿ ವೃದ್ಧರು, ವಿಕಲಚೇತನರು, ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಗೆ ಸಾಗುವ ಆ್ಯಂಬುಲೆನ್ಸ್‌ಗಳು ಈ ಮಾರ್ಗವನ್ನು ಓಡಾಡುವರಾಗಿದ್ದು, ಗುತ್ತಿಗೆದಾರ ಕಾಮಗಾರಿ ವಿಳಂಬ ಮಾಡುತ್ತಿರುವುದರಿಂದ ಬಡಾವಣೆಯ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.
Related Articles
Advertisement
ಮನವಿ ಪತ್ರ ನೀಡಿ ನಗರಸಭೆ ಎ.ಇ.ಇ ಗವಿರಂಗಪ್ಪರವರೊಂದಿಗೆ ಸ್ಥಳ ಪರಶೀಲನೆ ನಡೆಸಲಾಯಿತು. ಇನ್ನು ಒಂದು ತಿಂಗಳ ಒಳಗಾಗಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ದಲಿತ ಜನ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸ್ವರ್ಣಗೌರಿ, ಶ್ರೀರಾಮ್ ಸೇನೆ ಜಿಲ್ಲಾಧ್ಯಕ್ಷರಾದ ರಂಜಿತ್ ಶೆಟ್ಟಿ, ಸ್ವಸ್ಥಭೂಮಿ ಪ್ರತಿಷ್ಠಾನ ಗೌರವ ಅಧ್ಯಕ್ಷ ಗುರುಮೂರ್ತಿ, ಸವಿತಾ ಸಮಾಜ ಮೀಸಲಾತಿ ಒಕ್ಕೂಟದ ತಾಲೂಕು ಅಧ್ಯಕ್ಷ ಜೆ. ಸತ್ಯನಾರಾಯಣ, ಶಂಕರಪುರ ಲಕ್ಷ್ಮೀಶ ನಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಆನಂದ್ ಮೂರ್ತಿ, ತಿಲಕ್ ದತ್, ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.