ಚಿಕ್ಕಮಗಳೂರು : ಕ್ರೀಡಾಂಗಣದಲ್ಲಿ ಸಿಕ್ಕ ಬ್ರಾಸ್ ಲೈಟನ್ನ ಯುವಕನೋರ್ವ ಎರಡು ದಿನಗಳ ಬಳಿಕ ವಾರಸುದಾರರಿಗೆ ಹಿಂದಿರುಗಿಸಿ ಯುವಕನೋರ್ವ ಪ್ರಾಮಾಣಿಕತೆ ಮೆರೆದ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಪತ್ನಿ ಜೊತೆ ವಾಯುವಿಹಾರಕ್ಕೆಂದು ಹೋದ ಸಂದರ್ಭದಲ್ಲಿ ಮೂಡಿಗೆರೆ ನಿವಾಸಿ ಪವನ್ ಎಂಬುವರು ಕೈಯಲ್ಲಿದ್ದ 11 ಗ್ರಾಂ ತೂಕದ ಬ್ರಾಸ್ ಲೈಟ್ ಕಳೆದುಕೊಂಡಿದ್ದರು. ಎರಡು ದಿನಗಳ ಕಾಲ ಎಷ್ಟೆ ಹುಡುಕಾಡಿದರೂ ಬ್ರಾಸ್ ಲೈಟ್ ಲೈಟ್ ಸಿಕ್ಕಿರಲಿಲ್ಲ. ಹುಡುಕಾಡುವಷ್ಟು ಹುಡುಕಾಡಿ ಪವನ್ ಸುಮ್ಮನಾಗಿದ್ದರು. ಆದರೆ, ಎರಡು ದಿನದ ಬಳಿಕ ಅದೇ ಬ್ರಾಸ್ ಲೈಟ್ ಪ್ರದೀಪ್ ಎಂಬ ಯುವಕನಿಗೆ ಸಿಕ್ಕಿದೆ. ತಕ್ಷಣ ಆ ಯುವಕ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರನ್ನ ಕೇಳಿದ್ದಾನೆ. ಯಾರಾದರೂ ಬ್ರಾಸ್ ಲೈಟ್ ಕಳೆದುಕೊಂಡು ಹುಡುಕುತ್ತಿದ್ದಾರಾ ಎಂದು ಕೇಳಿದ್ದಾನೆ. ಆಗ ಕ್ರಿಕೆಟ್ ಆಡುತ್ತಿದ್ದ ಹುಡುಗರು ಪವನ್ ಕಳೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಳಿಕ ಬ್ರಾಸ್ ಲೈಟ್ ಸಿಕ್ಕ ಯುವಕ ಪವನ್ ರಿಂದ ಡಿಸೈನ್ ಹಾಗೂ ತೂಕದ ಮಾಹಿತಿ ಪಡೆದು ಬ್ರಾಸ್ ಲೈಟ್ ಕಳೆದುಕೊಂಡಿದ್ದ ಪವನ್ ಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾನೆ.
ಇಂದು ಬೆಳಗ್ಗೆ ಕ್ರೀಡಾಂಗಣದಲ್ಲಿ ಪವನ್ ದಂಪತಿಗೆ ಪ್ರದೀಪ್ ಬ್ರಾಸ್ ಲೈಟ್ ಹಿಂದಿರುಗಿಸಿದ್ದಾರೆ. ಬ್ರಾಸ್ ಲೈಟ್ ಬೆಲೆ ಸುಮಾರು 70 ಸಾವಿರ ಬೆಲೆ ಬಾಳಲಿದೆ. ಆಧುನಿಕ ಜಗತ್ತಿನಲ್ಲಿ ಹಣ, ಚಿನ್ನಕ್ಕಾಗಿ ದರೋಡೆ, ಕೊಲೆ, ಕಳ್ಳತನ ನಡೆಯುತ್ತಿವೆ. ಈಗಿರುವಾಗ ಚಿನ್ನದ ಬೆಲೆ ಗಗನ ಮುಟ್ಟಿರುವಾಗ ಕೈಗೆ ಸಿಕ್ಕ ಚಿನ್ನವನ್ನ ವಾರಸುದಾರರನ್ನ ಹುಡುಕಿ ಹಿಂದಿರುಗಿಸಿರೋ ಯುವಕ ಪ್ರದೀಪ್ ನಡೆ ಸಮಾಜಕ್ಕೆ ಮಾದರಿಯಾಗಿದೆ. ಬ್ರಾಸ್ ಲೈಟ್ ಕಳೆದುಕೊಂಡಿದ್ದ ದಂಪತಿ ಪ್ರದೀಪ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಪಾಠ ಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ; ರಾಜ್ಯದಲ್ಲೂ ಚರ್ಚೆಗೆ ಕಾರಣವಾದ ಗುಜರಾತ್ ನಡೆ!