Advertisement

ಕ್ಷೇತ್ರಕ್ಕೆ ಶೋಭಾ ಕೊಡುಗೆ ಶೂನ್ಯ

01:38 PM Apr 18, 2019 | Team Udayavani |

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಈ ಹಿಂದಿನ ಸಂಸದರ 5 ವರ್ಷದ ಸಾಧನೆ ಶೂನ್ಯ ಎಂದು ಕಾಂಗ್ರೆಸ್‌
ಜೆಡಿಎಸ್‌ ಜಿಲ್ಲಾ ಸಮನ್ವಯ ಸಮಿತಿ ಸದಸ್ಯ ಎಚ್‌. ಎಚ್‌.ದೇವರಾಜ್‌ ಆರೋಪಿಸಿದರು.

Advertisement

ಬಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಪರ ಪ್ರಚಾರಕ್ಕೆ ಹೋದ ಸಂದರ್ಭ ನಮ್ಮನ್ನು ಯಾರೂ ಊರಿಂದ ಹೊರಹೋಗಿ ಎನ್ನಲಿಲ್ಲ. ಆದರೆ, ಎದುರಾಳಿ ಅಭ್ಯರ್ಥಿಯನ್ನು ಹೋದ ಕಡೆಯಲೆಲ್ಲಾ ನಿಮ್ಮ ಸಾಧನೆ ಏನು ಹೇಳಿ ಎಂದು ಪ್ರಶ್ನಿಸುತ್ತಿದ್ದಾರೆ. ಓರ್ವ ಅಭ್ಯರ್ಥಿ ವಿರುದ್ಧ ಇಷ್ಟೊಂದು ವಿರೋಧ ವ್ಯಕ್ತವಾಗಿದ್ದು ಇದೇ ಮೊದಲ ಸಲ. 5 ವರ್ಷದಲ್ಲಿ ಅವರ ಕೊಡುಗೆ
ಏನೂ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕಸ್ತೂರಿ ರಂಗನ್‌ ವರದಿ ಜಾರಿ, ಒತ್ತುವರಿ, ಕಾಫಿ, ಅಡಕೆ, ತೆಂಗು ಬೆಳಗಾರರ ಸಮಸ್ಯೆಗಳನ್ನು ಅವರ
ಗಮನಕ್ಕೆ ತಂದೆವು. ಆದರೆ, ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವಲ್ಲಿ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.

ಅವರ ಪಕ್ಷದವರೇ ನಿವೇನು ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ. ಗೋಬ್ಯಾಕ್‌ ಶೋಭಾ ಅಭಿಯಾನ ಆರಂಭಿಸಿದ್ದರು. ಇಷೆಲ್ಲಾ
ವಿರೋಧಗಳಿದ್ದರೂ ಅವರು ಯಾವ ನೈತಿಕತೆ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಕಡೂರು-ಚಿಕ್ಕಮಗಳೂರು ರೈಲ್ವೇ ಮಾರ್ಗ
ಉದ್ಘಾಟಿಸಿದರೆ, ಇವರು ಸಕಲೇಶಪುರ ರೈಲ್ವೇ ಮಾರ್ಗ
ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಗಮನ ಹರಿಸಲಿಲ್ಲ.

ಕನಿಷ್ಠ ಪಕ್ಷ ಈಗಿರುವ ರೈಲಿನ ಸಮಯ
ಬದಲಾವಣೆ ಮಾಡಿಸಲು ಇವರಿಂದ ಸಾಧ್ಯವಾಗಲಿಲ್ಲ. ಬಿಜೆಪಿಯವರು ರೈಲು ಬಿಡುವುದರಲ್ಲಿ ನಿಸ್ಸೀಮರು ಎಂದು
ಟೀಕಿಸಿದ ಅವರು, ಒಟ್ಟಾರೆ ಈ ಅಭ್ಯರ್ಥಿ ಹಿಂದಿನ ಪರೀಕ್ಷೆಯಲ್ಲಿ ಫೇಲ್‌ ಆಗಿ ಶೂನ್ಯ ಅಂಕ ಪಡೆದಿದ್ದಾರೆ. ಇವರನ್ನು ವಾಪಸ್ಸು ಮನೆಗೆ ಕಳುಹಿಸಬೇಕು. ರೈತ, ಬೆಳೆಗಾರರ ಪರವಾಗಿರುವ ಕ್ರಿಯಾಶೀಲ ವ್ಯಕ್ತಿತ್ವದ ಪ್ರಮೋದ್‌ ಮಧ್ವರಾಜ್‌ ಅವರನ್ನು ಬೆಂಬಲಿಸಬೇಕು ಎಂದರು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ರೈತರ 50 ಸಾವಿರ ರೂ.ಸಾಲ ಮನ್ನಾ ಮಾಡಿದೆ.

Advertisement

ಇಂದಿರಾ ಕ್ಯಾಂಟೀನ್‌, ಶಾದಿಭಾಗ್ಯ ಜನಪರ ಯೋಜನೆಗಳು.
ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಕುಟುಂಬಗಳಿಗೆ ತಲಾ 50 ಸಾವಿರ ರೂ. ನೀಡುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಷ್ಟಕ್ಕೆ ನೆರವಾಗಿದ್ದಾರೆ. ಇವೆಲ್ಲಾ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಅಸಂವಿಧಾನಿಕ ಪದ ಬಳಕೆ ಮಾಡಿರುವುದಕ್ಕೆ ಶಾಸಕ ಸಿ.ಟಿ.ರವಿ ಅವರಿಗೆ ನಾಚಿಕೆಯಾಗಬೇಕು. ನಡವಳಿಕೆ ಗೊತ್ತಿಲ್ಲದ ಅವರು ಅಸಭ್ಯವಾಗಿ ವರ್ತಿಸುವುದನ್ನೇ ಸಂಸ್ಕೃತಿ ಎಂದು ತಿಳಿದಿದ್ದಾರೆ ಎಂದರು.

ಕಾಂಗ್ರೆಸ್‌ ವಕ್ತಾರ ಶಿವಾನಂದಸ್ವಾಮಿ ಮಾತನಾಡಿ, ಮೈತ್ರಿ ಪಕ್ಷದಲ್ಲಿ ಯಾವುದೇ ಒಡಕಿಲ್ಲದೆ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಇದಕ್ಕೆ ಎರಡೂ ಪಕ್ಷದ ಮುಖಂಡರೂ ಸಹಕಾರ ನೀಡಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಅಭ್ಯರ್ಥಿಗೆ 3.92 ಲಕ್ಷ ಮತ ಬಂದಿವೆ. ಜೆಡಿಎಸ್‌ ಮತ ಈಗ ಮೊದಲಿಗಿಂತ ದುಪ್ಪಾಟ್ಟಾಗಿವೆ. ಇದರಿಂದ ನಮ್ಮ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ಗೆಲುವಿನ ಹಂತಕ್ಕೆ ಬಂದಿದ್ದಾರೆ ಎಂದು
ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಮುಖಂಡರಾದ ರಮೇಶ್‌, ಗಿರೀಶ್‌, ಭೈರೇಗೌಡ, ಮಂಜಪ್ಪ, ವಿನಯ್‌, ರೇವಣ್ಣಗೌಡ ಇನ್ನಿತರ ಮುಖಂಡರು ಹಾಜರಿದ್ದರು.

ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕಸ್ತೂರಿ ರಂಗನ್‌ ವರದಿ ಜಾರಿ,
ಒತ್ತುವರಿ, ಕಾಫಿ, ಅಡಕೆ, ತೆಂಗು ಬೆಳಗಾರರ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದೆವು. ಆದರೆ, ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವಲ್ಲಿ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ .ಎಚ್‌.ಎಚ್‌.ದೇವರಾಜ್‌,
ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next