ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
Advertisement
ಇಲ್ಲಿನ ನೀರಿನ ಟ್ಯಾಂಕ್ ವೃತ್ತದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ರಾಜ್ಯದತೆರಿಗೆ ಪಾಲಿನ 70 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಇದನ್ನು ಯಾವ ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗಿದೆ
ಎಂಬುದನ್ನು ಕಾಂಗ್ರೆಸ್ ಉತ್ತರಿಸಬೇಕು ಎಂದರು.
ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಹಳ್ಳಿ ಮತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೌಭಾಗ್ಯ ಯೋಜನೆ ಅನುಷ್ಠಾನಗೊಳಿಸಲಾಗಿದೆ
ಎಂದರು. ಬಿಪಿಎಲ್ ಕುಟುಂಬದವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 5ಲಕ್ಷ ರೂ.ವರೆಗೆ ಸುಸಜ್ಜಿತ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು. ರೈತರಿಗೆ ಹನಿ ನೀರಾವರಿ ಯೋಜನೆಗೆ ಶೇ.
90ರಷ್ಟು ಸಹಾಯಧನ ನೀಡಲಾಗಿದೆ. ಕಿಸಾನ್ ಸನ್ಮಾನ್ ಯೋಜನೆಯಡಿ ರೈತರ ಖಾತೆಗೆ 6 ಸಾವಿರ ರೂ. ಅನುದಾನ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದರು.
Related Articles
Advertisement
ದೇಶದ ಸೈನಿಕ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಾಗ ಮೋದಿ ಎಚ್ಚರಿಕೆಯ ನಂತರ 48ಗಂಟೆಯಲ್ಲಿ ವೀರ ಯೋಧನನ್ನು ಭಾರತಕ್ಕೆ ವಾಪಸ್ಕಳಿಸಿದ್ದಾರೆ. ಅದು ನರೇಂದ್ರ ಮೋದಿಯವರ ತಾಕತ್ತು ಎಂದರು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಮೆಕ್ ಇನ್ ಇಂಡಿಯಾಕ್ಕೆ
ಆದ್ಯತೆ ನೀಡಿದ್ದಾರೆ. ಸೈನಿಕರಿಗೆ ಉತ್ತಮ ಶೂ, ವಸ್ತ್ರ, ಸಂಬಂಳ, ಪಿಂಚಣಿ ನೀಡುವ ಮೂಲಕ ಗೌರವ ಹೆಚ್ಚಿಸಿದ್ದಾರೆ.ದೇಶದ ಭದ್ರತೆಗಾಗಿ ಮೋದಿಗೆ ಮತ ನೀಡಬೇಕು ಎಂದು ಮನವಿ
ಮಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎನ್. ಜೀವರಾಜ್ ಮಾತನಾಡಿ, ಈ ಚುನಾವಣೆಯಲ್ಲಿ ದೇಶದಲ್ಲಿ 272 ಸ್ಥಾನಗಳನ್ನು ಬಿಜೆಪಿ ಗೆಲ್ಲಲೇ
ಬೇಕಾಗಿದೆ. 1 ಸ್ಥಾನ ಕಡಿಮೆಯಾದರೂ ಮೋದಿ ಪ್ರಧಾನಿ ಆಗಲು ಸಾಧ್ಯವಿಲ್ಲ. ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ಭೇಟಿ ನೀಡಲಿಲ್ಲ ಎಂದು ಕಾಂಗ್ರೆಸ್ ನವರು ಆರೋಪಿಸುತ್ತಾರೆ. ಶೋಭಾ ಅವರು 2014-19ರವರೆಗೆ ಮಾತ್ರ ಸಂಸದರಾಗಿದ್ದು, 1947-2014ರವೆಗೆ
ಸಂಸದರಾಗಿದ್ದವರಲ್ಲಿ ಶ್ರೀಕಂಠಪ್ಪ ಬಿಟ್ಟರೆ ಬೇರೆಯಾರು ಎಷ್ಟು ಭಾರಿ ಭೇಟಿ ನೀಡಿದ್ದರೂ ಎಂಬುದರ ಬಗ್ಗೆ ಮಾಹಿತಿ ನೀಡಲಿ.
ಶೋಭಕರಂದ್ಲಾಜೆ ಅವರು ಮಾಡಿದಷ್ಟು ಕೆಲಸ ಬೇರೆ ಯಾವ ಸಂಸದರೂ ಮಾಡಿಲ್ಲ ಎಂದರು. ಬಿಜೆಪಿ ಮುಖಂಡರಾದ ಬಿ.ಎಸ್. ಆಶೀಶ್ ಕುಮಾರ್, ಸಂಪತ್ ಕುಮಾರ್, ಜಯಶ್ರೀ ಮೋಹನ್, ಜಯರಾಮ್, ವಿನಯ್, ಸಾವಿತ್ರಿ, ಗೋಪಾಲ್,ಕೆಸವೆ ಮಂಜುನಾಥ್,ಅಶ್ವನ್ ಮತ್ತಿತರರು
ಉಪಸ್ಥಿತರಿದ್ದರು.