Advertisement

ಮೋದಿಯವರದ್ದು ಬೂಟಾಟಿಕೆಯ ವ್ಯಕ್ತಿತ್ವ

01:36 PM Apr 14, 2019 | Naveen |

ಕಡೂರು: ಸುಳ್ಳುಗಳ ಪ್ರತಿರೂಪ ಹಾಗೂ ಬೂಟಾಟಿಕೆಯ ವ್ಯಕ್ತಿತ್ವದ ಪ್ರಧಾನಿ ನರೇಂದ್ರಮೋದಿಯಾಗಿದ್ದು, ಸರ್ವಾ ಧಿಕಾರ
ಧೋರಣೆ ಹೊಂದಿದ್ದಾರೆ ಎಂದು ವಿಧಾನಪರಿಷತ್‌ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಹೇಳಿದರು.

Advertisement

ತಾಲೂಕಿನ ಲಕ್ಷ್ಮೀಪುರ, ದೊಡ್ಡಬುಕ್ಕಸಾಗರ, ಕೊರಚರಹಟ್ಟಿ, ಇಸ್ಲಾಂಪುರ, ಶಿವಪುರ, ಗೊಲ್ಲರಹಳ್ಳಿ, ಚಿಕ್ಕಾಲಘಟ್ಟ, ಮುಸ್ಲಾಪುರ, ಲಕ್ಕೇನಹಳ್ಳಿ ಮುಂತಾದ ಗ್ರಾಮಗಳಲ್ಲಿ ಶನಿವಾರ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಪರ ಮತಯಾಚಿಸಿದ ಅವರು ವೈ. ರಂಗೇನಹಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರ 5 ವರ್ಷದ ಆಡಳಿತ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಅತೀ ಹೆಚ್ಚು ವಿದೇಶ ಪ್ರವಾಸ ನಡೆಸಿದ್ದು, ಸುಳ್ಳನ್ನು ಹೇಳುತ್ತಾ ಆಕಾಶದಲ್ಲಿ ಹಾರಾಡಿದ್ದೇ ಅವರ ಬಹುದೊಡ್ಡ ಸಾಧನೆ. ಸಂವಿಧಾನವನ್ನೇ ಬುಡಮೇಲು ಮಾಡುವಂತಹ ಸರ್ವಾಧಿ ಕಾರ ಧೋರಣೆಯ ಆಡಳಿತದ ಮೂಲಕ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕಿಯಾದವರು ಮೋದಿ ಎಂದರು.

ಎಮ್ಮೆದೊಡ್ಡಿ ಭಾಗದ ಮದಗದಕೆರೆ ಮತ್ತು ಅಯ್ಯನಕೆರೆಗಳಿಗೆ ನೀರು ಹರಿಸುವ ಶಾಶ್ವತ ಯೋಜನೆಗಳಾದ ಗೊಂದಿ ಅಣೆಕಟ್ಟು ಯೋಜನೆ ಹಾಗೂ ಹೆಬ್ಬೆ ಹಳ್ಳ ಯೋಜನೆ ಎರಡೂ ಯೋಜನೆಗಳು ತಾಲೂಕಿನ 34 ಕೆರೆಗಳಿಗೆ ನೀರುಣಿಸುವ ಕೆಲಸ ನಡೆಯತ್ತದೆ. ಈಗಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಹೆಬ್ಬೆ ಯೋಜನೆಗೆ 100 ಕೊಟಿ ಮಂಜೂರು ಮಾಡಿರುವುದು ಜನರ ಅರಿವಿಗೆ ಬಂದಿದೆ ಎಂದು ಹೇಳಿದರು.

ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ತಾಲೂಕಿನ ನೀರಾವರಿ ಯೋಜನೆಗಳಿಗೆ 1.583 ಟಿಎಂಸಿ ಅಡಿ ನೀರಿನ ಹಂಚಿಕೆ ಈಗಾಗಲೇ ಆಗಿದೆ. ಇದರ ಅನ್ವಯ ತಾಲೂಕಿನ ನೀರಾವರಿ ಯೋಜನೆಗಳನ್ನು ಕ್ರಮಬದ್ಧವಾಗಿ ಮಾಡಿಕೊಳ್ಳಬೇಕಾಗಿದೆ. ಈ ಎಲ್ಲ ಯೋಜನೆಗಳಿಗೆ ಒಂದು ಶಕ್ತಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ನಿಲ್ಲಲಿದೆ. ಅದಕ್ಕಾಗಿ ಪ್ರಜ್ವಲ್‌ರೇವಣ್ಣ ಅವರನ್ನು ಅತೀ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ತಮ್ಮ ತಂದೆ ಎಸ್‌.ಆರ್‌. ಲಕ್ಷ್ಮ ಯ್ಯ ಅವರು ಎಮ್ಮೆದೊಡ್ಡಿ ಭಾಗವು ಬೀರೂರು ಕ್ಷೇತ್ರದಲ್ಲಿದ್ದಾಗ ಶಾಸಕರಾಗಿದ್ದರು. ಸಾಗುವಳಿ ಪತ್ರ, ಬಗರ್‌ ಹುಕುಂ ಸಮಸ್ಯೆ, ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅ ಧಿಕಾರ ಮಾಡಿದ್ದಾರೆ. ಅವರ ನಂತರ ತಾವೂ ಕೂಡ ಈ ಭಾಗದ ಜನರ ಸೇವೆ ಮಾಡಿದ್ದೇನೆ. ಇದನ್ನೆಲ್ಲಾ ಗಮನವಿಟ್ಟುಕೊಂಡು ಕೋಮುವಾದಿ ಬಿಜೆಪಿಯನ್ನು ದೂರವಿಡಲು ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.

Advertisement

ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಕರ್ತವ್ಯ ನಿರ್ವಹಿಸಿದಾಗ ಅನೇಕ ಜನಪರ ಯೋಜನೆಗಳನ್ನು ಜನರಿಗೆ ನೀಡಿದ್ದಾರೆ. ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಯೋಜನೆಗಳ ಮೂಲಕ ಬಡವರಿಗೆ ಉಚಿತ ಅಕ್ಕಿ, ಹಾಲು ನೀಡುತ್ತಿರುವುದಲ್ಲದೇ ಇಂದಿರಾ ಕ್ಯಾಂಟೀನ್‌ ಮೂಲಕ ಅತ್ಯಲ್ಪ ದರದಲ್ಲಿ ಊಟ ನೀಡಿದ ಸಿದ್ದರಾಮಯ್ಯ ಅವರ ಯೋಜನೆಗಳು ಮೈತ್ರಿಕೂಟದ ಚುನಾವಣೆಯ ಪ್ರಮುಖ ಮಾನದಂಡವಾಗಿ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ ಎಂದರು.

ತಾಪಂ ಮಾಜಿ ಸದಸ್ಯ ಶಶಿಕುಮಾರ್‌, ಗ್ರಾಪಂ ಸದಸ್ಯ ಕೃಷ್ಣಮೂರ್ತಿ, ಶಾಂತಕುಮಾರ್‌, ಛಾಯಣ್ಣ, ಸ್ನೇಹಜೀವಿ ಕೃಷ್ಣ, ಸುರೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next