Advertisement

ದೇಶ ಸಂರಕ್ಷಿಸುವ ಅಭ್ಯರ್ಥಿಗೆ ಮತ ಹಾಕಿ

04:09 PM Apr 13, 2019 | Naveen |

ಕೊಪ್ಪ: ಪ್ರಸಕ್ತ ಬಾರಿ ಕುಟುಂಬ ರಾಜಕಾರಣ ಮತ್ತು ಅಭಿವೃದ್ಧಿ ರಾಜಕಾರಣದ ನಡುವೆ ಚುನಾವಣೆ ನಡೆಯುತ್ತಿದ್ದು, ಪ್ರಜ್ಞಾವಂತ ಮತದಾರರು ದೇಶಕ್ಕೆ ಯಾರ ಅವಶ್ಯಕತೆ ಅರಿತು ಮತದಾನ ಮಾಡಬೇಕು ಎಂದು ಜಿಪಂ ಸದಸ್ಯ ಎಸ್‌.ಎನ್‌. ರಾಮಸ್ವಾಮಿ ತಿಳಿಸಿದರು. ನುಗ್ಗಿ ಗ್ರಾಪಂ ವ್ಯಾಪ್ತಿಯ ಬಪ್ಪುಂಜೆಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಕೇಂದ್ರದಲ್ಲಿ ಕಳೆದ 55 ವರ್ಷ ನೆಹರು ಕುಟುಂಬದ ಆಡಳಿತವನ್ನು ನೋಡುತ್ತಿದ್ದೇವೆ. ಈಗಲೂ ಅದೇ ಕುಟುಂಬದ ರಾಹುಲ್‌ ಗಾಂಧಿ  ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ. ಕುಟುಂಬದ ಹಿನ್ನೆಲೆ ಬಿಟ್ಟರೇ ಬೇರೆ ಯಾವುದೇ ಅರ್ಹತೆಯಿಲ್ಲದ ವ್ಯಕ್ತಿ ಪ್ರಧಾನಿಯಾಗಲು ಹೊರಟಿದ್ದಾರೆ ಎಂದರು.

ರಾಜ್ಯದಲ್ಲಿ ದೇವೇಗೌಡರ ಕುಟಂಬ ರಾಜಕಾರಣ ನಡೆಯುತ್ತಿದೆ. ಒಂದೇ ಕುಟುಂಬದ 7 ಮಂದಿ ರಾಜಕೀಯದಲ್ಲಿದ್ದಾರೆ. ಹಾಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕುಟುಂಬದ 3 ಮಂದಿ ಸ್ಪ ರ್ಧಿಸುತ್ತಿದ್ದಾರೆ.
ಅವರಿಗೆ ರಾಜ್ಯದ ಹಿತಾಸಕ್ತಿಗಿಂತ ಕುಟುಂಬದ ಹಿತಾಸಕ್ತಿಯೇ ಮುಖ್ಯ. ಅವರ ಮೊಮ್ಮಗ 300 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ ಎಂದರು.

ನರೇಂದ್ರ ಮೋದಿ 15 ವರ್ಷ ಮುಖ್ಯಮಂತ್ರಿಯಾಗಿ, 5 ವರ್ಷ
ಪ್ರಧಾನಿಯಾಗಿಯೂ ಅವರ ಆಸ್ತಿ 2 ಲಕ್ಷ ದಾಟಿಲ್ಲ. ಬಿಜೆಪಿ ಸ್ವಹಿತಾಸಕ್ತಿಗಿಂತ ಅಭಿವೃದ್ಧಿ ರಾಜಕಾರಣಕ್ಕೆ ಒತ್ತು ನೀಡಿದೆ. ಕಳೆದ ಐದು ವರ್ಷದಲ್ಲಿ ನರೇಂದ್ರ ಮೋದಿ ಇಡೀ ವಿಶ್ವವೇ ಮೆಚ್ಚುವಂತೆ ಆಡಳಿತ ನಡೆಸಿದ್ದಾರೆ. ಭ್ರಷ್ಟಾಚಾರ ರಹಿತ, ಜನಪರ ಆಡಳಿತ ನೀಡಿದ್ದಾರೆ. ಒಬ್ಬ ಚಹಾವಾಲ ಪ್ರಧಾನಿ ಮಂತ್ರಿಯಾಗಿ ಬಡವರ ಕಷ್ಟ ಅರಿತುಕೊಂಡು ಆಡಳಿತ ನಡೆಸಿದ್ದಾರೆ
ಎಂದರು.

ನರೇಂದ್ರ ಮೋದಿಯವರ ಜನಪರ ಕಾರ್ಯಕ್ರಮಗಳು ದೇಶದ ಎಲ್ಲ ಜಾತಿ,
ಮತ, ಧರ್ಮ, ವರ್ಗದ ಜನರಿಗೂ ಸಿಕ್ಕಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಸಿಗುತ್ತಿದೆ. ಕಿಸಾನ್‌ ಸನ್ಮಾನ್‌, ಫಸಲ್‌ ಭಿಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ಆದರೆ, ಕುಮಾರಸ್ವಾಮಿಯವರ ಸಾಲಮನ್ನಾ
ಯೋಜನೆ ಘೋಷಿಸಿ ಒಂದು ವರ್ಷವಾದರೂ ಇನ್ನೂ ರೈತರಿಗೆ ತಲುಪಿಲ್ಲ. ಬ್ಯಾಂಕ್‌ನವರು ಸಾಲ ಪಾವತಿಸುವಂತೆ ನೋಟೀಸು ನೀಡುತ್ತಿದ್ದು, ಮರ್ಯಾದೆಗೆ ಅಂಜಿ ರೈತರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ಹೇಳಿದರು.

Advertisement

ಎಲ್ಲರೂ ಒಟ್ಟಾಗಿ ಮೋದಿ ಸೋಲಿಸಲು ಪಣತೊಟ್ಟಿದ್ದಾರೆ. ಆದರೆ, ದೇಶದ ಜನ ಮೋದಿಯ ಜೊತೆ ಇದ್ದಾರೆ. ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸುತ್ತಾರೆ. ನಮ್ಮ ಲೋಕಸಭಾ ಕ್ಷೇತ್ರದ ಅಭೈರ್ಥಿ ಶೋಭಾ ಕರಂದ್ಲಾಜೆ ಅತ್ಯಧಿಕ
ಮತಗಳಿಂದ ಗೆಲುವು ಸಾ ಧಿಸುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿಯ ತತ್ವ ಸಿದ್ದಾಂತವನ್ನು ಒಪ್ಪಿ ಹಲವು ಮಂದಿ
ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಸಭೆಯಲ್ಲಿ ಮಾಜಿ ಶಾಸಕ ಡಿ.ಎನ್‌. ಜೀವರಾಜ್‌, ಜಿಲ್ಲಾ ರೈತಮೋರ್ಚಾ
ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ದಿನೇಶ್‌, ಯುವಮೋರ್ಚಾ ಅಧ್ಯಕ್ಷ ಜೆ. ಪುಣ್ಯಪಾಲ್‌, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ. ಪೂರ್ಣಚಂದ್ರ, ತಾಲ್ಲೂಕು ಪಂಚಾಯತ್‌ ಸದಸ್ಯ ಬಿ. ಸುಧಾಕರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next