Advertisement

10 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ಖಚಿತ

05:51 PM Apr 19, 2019 | Naveen |

ಹೊಳೆನರಸೀಪುರ :17 ನೇ ಲೋಕಸಭೆಗೆ ರಾಜ್ಯದ ಮೊದಲ ಹಂತದ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಹದಿನಾಲ್ಕು
ಕ್ಷೇತ್ರಗಳಲ್ಲಿ ಹತ್ತು ಸ್ಥಾನವನ್ನು ನೈತ್ರಿ ಪಕ್ಷ ಜಯಗಳಿಸಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

Advertisement

ತಾಲೂಕಿನ ಪಡುವಲಹಿಪ್ಪೆ ಮತಗಟ್ಟೆಗೆ ಪತ್ನಿ ಚನ್ನಮ್ಮ, ಪುತ್ರ ಎಚ್‌.ಡಿ.ರೇವಣ್ಣ, ಹಾಸನ ಲೋಕಸಭಾ ಅಭ್ಯರ್ಥಿ ಹಾಗೂ
ರೇವಣ್ಣ ಅವರ ಪುತ್ರ ಪ್ರಜ್ವಲ್‌ ರೇವಣ್ಣ, ಡಾ| ಸೂರಜ್‌ ರೇವಣ್ಣ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ಇಂದು ಮತದಾನ ನಡೆಯುತ್ತಿದ್ದು ಎಲ್ಲ ಹದಿನಾಲ್ಕು ಕ್ಷೇತ್ರಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳಿಗೆ ಮತದಾರರು ಉತ್ತಮ ಬೆಂಬಲ ಮತ್ತು ಮತ ಚಲಾಯಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.

ತಮ್ಮ ಕುಟುಂಬದ ಪ್ರಜ್ವಲ್‌ ರೇವಣ್ಣ, ನಿಖೀಲ್‌
ಹಾಗೂ ತಾವು ಸ್ಪರ್ಧಿಸಿರುವ ಹಾಸನ ತುಮಕೂರು ಹಾಗು ಮಂಡ್ಯದಲ್ಲಿ ಕ್ಷೇತ್ರದಲ್ಲಿಯೂ ಸಹ ತಮಗೆ ಉತ್ತಮ ಬೆಂಬಲ ದೊರೆತಿರುವುದರ ಜೊತೆಗೆ ಮತದಾರರು ತಮ್ಮ ಮತಗಳನ್ನು
ಚಲಾಯಿಸುತ್ತಿರುವುದು ನಮಗೆ ಮತ್ತಷ್ಟು ಬೆಂಬಲ ದೊರೆತಿದೆ ಎಂದರು.

ನರೇಂದ್ರಮೋದಿ ರಾಜ್ಯದಲ್ಲಿ ಪ್ರವಾಸದ ವೇಳೆ ರಾಜ್ಯ ಸರ್ಕಾರವನ್ನು 20 ಪರ್ಸೆಂಟ್‌ ಸರ್ಕಾರ ಂದು ಆರೋಪಿಸಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ
ದೇವೇಗೌಡರು, ನರೇಂದ್ರ ಮೋದಿ ಅವರು ಇತ್ತೀಚೆಗೆ ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಇದರಿಂದ ನಮ್ಮ ಮೈತ್ರಿ ಸರ್ಕಾರಕ್ಕೆ ಯಾವೊಂದು ಕಪ್ಪು ಚುಕ್ಕೆಯು ಇಲ್ಲ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೇಶದ ಯಾವುದೇ ರಾಜ್ಯವೂ ಸಹ
ಕೈಗೊಳ್ಳದ ರೈತರ ಸಾಲ ಮನ್ನಾದಂತ ಕೆಲಸ ಮಾಡಿದ್ದಾರೆ ಇದು ಕೆಲವರಿಗೆ ಸಹಿಸಲು ಆಗುತ್ತಿಲ್ಲ ಎಂದು ಆರೋಪಿಸಿದರು.

ದೇಶದಲ್ಲಿನ ಹಲವು ಪಕ್ಷಗಳು ಘಟಬಂಧನ್‌ ಏರ್ಪಡಿಸಿಕೊಂಡು
ಚುನಾವಣಾ ರಂಗಕ್ಕೆ ಇಳಿದಿದೆ. ಮಹಾಘಟಬಂಧನ್‌ನ ಪ್ರಧಾನಿ ಅಭ್ಯರ್ಥಿ ಯಾರೆಂಬುದರ ಬಗ್ಗೆ ತಿಳಿಸುವಂತೆ ಸುದ್ದಿಗಾರರು ಪ್ರಶ್ನಿಸಿದ್ದರಿಂದ ಗೌಡರು ಮಾತನಾಡಿ, ಆ ಬಗ್ಗೆ ಮಾತೇಕೆ ಮುಂದಿನ
ದಿನಗಳಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನು ಬಹಿರಂಗವಾಗಲಿದೆ ಎಂದರು.

Advertisement

ಸಚಿವ ರೇವಣ್ಣ ಮಾತನಾಡಿ, ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯದ ಹದಿನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ 10 ಕ್ಷೇತ್ರಗಳಲ್ಲಿ ಗೆಲುವ ಕಾಣುವುದಾಗಿ ತಿಳಿಸಿ, ಇದರಲ್ಲಿ ಹಾಸನ, ಮಂಡ್ಯ, ತುಮಕೂರು, ಹಾಗು ದಕ್ಷಿಣ ಕನ್ನಡದ ಅಭ್ಯರ್ಥಿಗಳು
ವಿಜಯ ಸಾಧಿಸಲಿದ್ದಾರೆ ಎಂದರು. ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಮಾತನಾಡಿದರು.

ಲೋಕಸಭಾ ಚುನಾವಣೆ ಮತದಾನದ ಬಗ್ಗೆ ಜೆಡಿಎಸ್‌ ನಾಯಕಿ ಹಾಗು ಹಾಸನ ಜಿಲ್ಲಾ ಪಂಚಾಯತ್‌ ಸದಸ್ಯೆ ಭವಾನಿ ರೇವಣ್ಣ ಮಾತನಾಡಿ ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ರೇವಣ್ಣ ಅವರ ಗೆಲುವು ಶತಸಿದ್ದ ಇದಕ್ಕೆ ಪೂರಕವಾದ ವಾತಾವರಣ
ಕ್ಷೇತ್ರದಲ್ಲಿ ಇದೆ ಎಂದು ಪ್ರತಿಕ್ರಿಯಿಸಿದರು.

ಶಾಂತ ಮತ್ತು ನಿರ್ಬಿತಿ ಮತದಾನ: ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದ 318 ಮತಗಟ್ಟೆಗಳು ಇದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹಳಷ್ಟು ಕ್ಷೇತ್ರಗಳು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಸುಮಾರು 113 ,ಮತಗಟ್ಟೆಗಳು ಎಂದು ಗುರುತಿಸಲಾಗಿತ್ತು.

ಆದರೆ ಇಂದು ಮತದಾನ ನಡೆಯುತ್ತಿದ್ದು ಸೂಕ್ಷ್ಮಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಶಾಂತಿ ಮತ್ತು ನಿರ್ಬಿತಿಯ ಮತದಾನ ನಡೆಯುತ್ತಿರುವುದು ಆಶ್ಚರ್ಯದ ಸಂಗತಿ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next