Advertisement
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.20ರಷ್ಟು ಅಕ್ಷರಸ್ಥರಿದ್ದರು. ಈಗ ದೇಶದಲ್ಲಿ ಶೇ.80ರಷ್ಟು ಅಕ್ಷರಸ್ಥರು ಇದ್ದಾರೆ. ಆದರೆ, ಅವರಲ್ಲಿ ಬಹುತೇಕರಿಗೆ ಕಾನೂನು ಹಾಗೂ ಸಂವಿಧಾನದ ಅರಿವಿಲ್ಲ ಎಂದರು.
Related Articles
Advertisement
ನಮ್ಮ ದೇಶದಲ್ಲಿ ಇಂದಿಗೂ ನ್ಯಾಯಾಂಗದಲ್ಲಿ ಬ್ರಿಟಿಷರ ಕಾಲದ ವ್ಯವಸ್ಥೆಯೇ ಜಾರಿಯಲ್ಲಿದೆ. ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲಾಗಿದೆಯಾದರೂ ಪೂರ್ಣ ಪ್ರಮಾಣದ ಬದಲಾವಣೆ ಆಗಿಲ್ಲ. ಒಂದು ರೀತಿಯಲ್ಲಿ ಇದೂ ಸಹ ವಿಳಂಬಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಿಸಿದರು.
ಜನತೆಗೆ ಸಂವಿಧಾನದ ಕುರಿತು ತಿಳಿವಳಿಕೆ ನೀಡುವ ಉದ್ದೇಶದಿಂದಲೇ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದು ಸರ್ಕಾರಿ ಅಥವಾ ಖಾಸಗಿಯವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಲ್ಲ. ರಾಜ್ಯದೆಲ್ಲೆಡೆ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳು, ಮಹಿಳೆಯರು, ಸರ್ಕಾರಿ ಅಧಿಕಾರಿಗಳು, ವಕೀಲರು ಎಲ್ಲರೂ ಸ್ವಯಂಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಂವಿಧಾನದ ಬಗ್ಗೆ ತಿಳಿಸುವುದಲ್ಲದೆ, ಎಲ್ಲರೊಂದಿಗೂ ಸಂವಾದವನ್ನೂ ನಡೆಸಲಾಗುತ್ತಿದೆ. ಸಂವಾದದಲ್ಲಿ ಹಲವರು ಉತ್ತಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ ಎಂದರು.
ಈಗ ಸಂವಿಧಾನದ ಕುರಿತು ತಿಳಿವಳಿಕೆ ನೀಡಲು ಪುಸ್ತಕ ಹೊರತರಲಾಗಿದೆ. ಇದೀಗ ಸಂವಾದದಲ್ಲಿ ಕೇಳಿ ಬಂದ ಪ್ರಶ್ನೆಗಳು ಹಾಗೂ ಅದಕ್ಕೆ ನೀಡಿರುವ ಉತ್ತರಗಳನ್ನು ಒಳಗೊಂಡ ಪುಸ್ತಕವನ್ನು ಬರೆಯುತ್ತಿದ್ದೇನೆ. ಶೀಘ್ರದಲ್ಲಿಯೇ ಆ ಪುಸ್ತಕವನ್ನೂ ಹೊರತರಲಾಗುವುದು ಎಂದು ಹೇಳಿದರು.