Advertisement
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಿವಿಧ ಇಲಾಖೆ ಹಾಗೂ ಸಮುದಾಯ ಮತ್ತು ಸಹಯಾನ ಸಂಘಟನೆಗಳ ಸಹಯೋಗದಲ್ಲಿ ಕುವೆಂಪು ಕಲಾಮಂದಿರದಲ್ಲಿ ಗ್ರಾಪಂ, ತಾಪಂ ಜನಪ್ರತಿನಿಧಿಗಳು ಮತ್ತು ಪಿಡಿಒಗಳಿಗೆ ಶುಕ್ರವಾರ ಏರ್ಪಡಿಸಿದ್ದ ‘ಸಂವಿಧಾನ ಓದು’ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
Related Articles
Advertisement
ರಾಜರು, ಪಾಳೆಯಗಾರರ ಕೈಯಲ್ಲಿದ್ದ ಒಂದು ಭಾಗದ ಅಧಿಕಾರ ಈಗ ಜನಪ್ರತಿನಿಧಿಗಳ ಕೈಗೆ ಬರಲು ಸಂವಿಧಾನವೇ ಕಾರಣ. ರಾಜಮಹಾರಾಜರ ಕಾಲಹೋಗಿ ಈಗ ಪ್ರಜಾಫ್ರಭುತ್ವ ಅಸ್ತಿತ್ವಕ್ಕೆ ಬಂದಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೂಲಕ ಅಧಿಕಾರ ವಿಂಗಡಣೆಯಾಗಿ ಅವುಗಳು ಸಮರ್ಪಕವಾಗಿ ಕಾರ್ಯ ನಡೆಸಲು ರಚನೆಯಾಗಿರುವುದೇ ನಮ್ಮ ಸಂವಿಧಾನ ಎಂದರು.
ಈವರೆಗೆ ನಮ್ಮನ್ನಾಳಿದ ಸರ್ಕಾರಗಳು ಸಂವಿಧಾನವನ್ನು ಜನರಿಗೆ ತಿಳಿಸುವ ಕೆಲಸ ಮಾಡಲಿಲ್ಲ. ನಾವೂ ಕೂಡ ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ನಮಗೆ ಓದು ಬರಹ ಕಲಿಸಿದ್ದಾರೆ. ಆದರೆ, ಕಾನೂನು ಶಿಕ್ಷಣ ನೀಡಲಿಲ್ಲ. ಕಾನೂನು ಅರಿವಿಲ್ಲದ ಕಾರಣ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿ ಮತ್ತು ಅಧಿಕಾರಿಗಳ ನಡುವೆ ಸಂಘರ್ಷ ಮುಂದುವರಿದಿದೆ. ಸಮಾಜ, ಸಮುದಾಯಕ್ಕೆ ಒಳಿತಾಗಬೇಕೆಂದರೆ ಸಂವಿಧಾನವನ್ನು ಓದಿ ಅರ್ಥಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂವಿಧಾನ ಓದು ಸಮಿತಿ ರಾಜ್ಯ ಸಂಚಾಲಕಿ ಕೆ.ಎಸ್.ವಿಮಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಕರಡು ರಚಿಸಿದ ಡಾ.ಅಂಬೇಡ್ಕರ್ ಅವರನ್ನು ಆರಾಧನೆ, ಅವಗಣನೆ ಮಾಡುವಂತಹ ವೈಪರೀತ್ಯಗಳನ್ನು ಇತ್ತೀಚೆಗೆ ಕಾಣುತ್ತಿದ್ದೇವೆ. ಸಂವಿಧಾನದ ವಿಚಾರಗಳನ್ನು ನಮ್ಮೊಳಗೆ ಅವಗಾಹನೆ ಮಾಡಿಕೊಳ್ಳದಿದ್ದರೆ ಅಂಬೇಡ್ಕರ್ ಕೇವಲ ಆರಾಧನೆಗೆ ಸೀಮಿತರಾಗುತ್ತಾರೆ ಎಂದು ಎಚ್ಚರಿಸಿದರು.
ಜಿಲ್ಲಾ ನ್ಯಾಯಾಧೀಶ ಉಮೇಶ್ ಎಂ.ಅಡಿಗ ಮಾತನಾಡಿ, ಸಂವಿಧಾನ ಓದದ ಕಾರಣ ದೇಶದಲ್ಲಿ ವೈಷಮ್ಯ, ದ್ವೇಷದ ಹೇಳಿಕೆಗಳು ಕೇಳಿಬರುತ್ತಿವೆ. ಸಂಕುಚಿತ ಮನೋಭಾವದಿಂದ ಸಂವಿಧಾನವನ್ನು ನೋಡುವವರಿಗೆ ಅದರಲ್ಲಿ ದೋಷ ಕಾಣುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ನಾಗಮೋಹನ್‌ದಾಸ್ ಅವರು ಹೈಕೋರ್ಟ್ ನ್ಯಾಯಾಮೂರ್ತಿಯಾಗಿದ್ದಾಗ ಜನಪರವಾಗಿ ಕಾರ್ಯನಿರ್ವಹಿಸಿದವರು ಎಂದರು.
ಜಿ.ಕಾ.ಸೇ.ಪ್ರಾ. ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ, ತಾಪಂ ಇಒ ತಾರಾನಾಥ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಹಾಜರಿದ್ದರು. ವಕೀಲ ಜಗದೀಶ್ ನಿರೂಪಿಸಿದರು.