ಚಿಕ್ಕಮಗಳೂರು: ನಗರೋತ್ಥಾನ ಯೋಜನೆಯಲ್ಲಿ 29 ಕೋಟಿ ರೂ. ವೆಚ್ಚದಲ್ಲಿ ನಗರಸಭೆ ವ್ಯಾಪ್ತಿಯ ಬಹುತೇಕ ರಸ್ತೆ, ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದು 2020ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳುತ್ತದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಶಂಕರಪುರ 11ನೇ ವಾರ್ಡ್‌ನಲ್ಲಿ ಭಾನುವಾರ 1.2 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಲಕ್ಷ್ಮೀಶ ನಗರದಲ್ಲಿ ಹೈಮಾಸ್ಟ್ ದೀಪ ಉದ್ಘಾಟಿಸಿ ಅವರು ಮಾತನಾಡಿದರು.
ಲಕ್ಷಿ ್ಮೕಶನಗರ ಮತ್ತು ಶಂಕರಪುರ ಬಡಾವಣೆಯಲ್ಲಿ ನಗರೋತ್ಥಾನದಲ್ಲಿ 80 ಲಕ್ಷ ರೂ. ಹಾಗೂ ಎಸ್‌ಇಪಿ, ಟಿಎಸ್‌ಪಿನಲ್ಲಿ 30ಲಕ್ಷ ರೂ. ಮಂಜೂರು ಮಾಡಿ ರಸ್ತೆ, ಚರಂಡಿ, ಸಮುದಾಯ ಭವನ ನಿರ್ಮಾಣ ಹಾಗೂ ಹೈಮಾಸ್ಟ್ ದೀಪವನ್ನು ಅಳವಡಿಸಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಯಾವ್ಯಾವ ವಾರ್ಡ್‌ನಲ್ಲಿ ಅಮೃತ್ ಯೋಜನೆ ಮತ್ತು ಒಳಚರಂಡಿ ಕೆಲಸ ಪೂರ್ಣವಾಗಿದೆ ಎಂಬುದನ್ನು ಪರಿಶೀಲಿಸಿ ಆ ಬಗ್ಗೆ ನಗರಸಭೆಯಿಂದ ಒಪ್ಪಿಗೆ ಸಿಗುತ್ತದೊ ಅಂತಹ ರಸ್ತೆಗಳನ್ನು ಮಾತ್ರ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದರು.
ಶಂಕರಪುರದಲ್ಲಿ 5ರಸ್ತೆಗೆ 4 ರಸ್ತೆಗಳು ಒಪ್ಪಿಗೆ ಸಿಕ್ಕಿದೆ ಉಳಿದಂತೆ ಒಂದು ರಸ್ತೆಯಲ್ಲಿ ಯುಜಿಡಿ ಅಳವಡಿಕೆ ಕಾರ್ಯ ಬಾಕಿಇದ್ದು ನಂತರ ಅದನ್ನು ಕಾಂಕ್ರಿಟೀಕರಣ ಮಾಡಲಾಗುವುದು. ಯಾವ ರಸ್ತೆಗಳಲ್ಲಿ ಯುಜಿಡಿ ಮತ್ತು ಅಮೃತ್‌ಯೋಜನೆಯ ಪೈಪ್‌ಲೈನ್ ಕಾರ್ಯ ಪೂರ್ಣವಾಗಿದೆಯೊ ಅವೆಲ್ಲವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಒಂದು ವರ್ಷದ ಹಿಂದೆಯೇ ಮಂಜೂರಾದಂತ ಕಾಮಗಾರಿಯಿದು. ಅಮೃತ್ ಯೋಜನೆಯ ಪೈಪ್‌ಲೈನ್ ಮತ್ತು ಯುಜಿಡಿ ಲೈನ್ ಪೂರ್ಣಗೊಂಡ ನಂತರ ರಸ್ತೆ ಕಾಂಕ್ರಿಟೀಕರಣ ಅಥವಾ ಡಾಂಬರೀಕರಣ ಮಾಡಬೇಕು ಎಂದು ಸೂಚಿಸಲಾಗಿತ್ತು. ಹಾಗಾಗಿ ಎಲ್ಲೆಲ್ಲಿ ಈ ಕೆಲಸ ಪೂರ್ಣಗೊಂಡಿದೆಯೋ ಅಲ್ಲಿ ಕಾಂಕ್ರಿಟೀಕರಣ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಭಾಗದಲ್ಲಿ ಹೈಮಾಸ್ಟ್ ಲೈಟ್, ಸಮುದಾಯ ಭವನ ಮತ್ತಿತರೆ ಅಭಿವೃದ್ಧಿ ಕೆಲಸವೂ ಭರದಿಂದ ಸಾಗುತ್ತಿದೆ. ನಗರಸಭೆಯಲ್ಲಿ ಹಿಂದಿನ 50 ವರ್ಷದ ದಾಖಲೆ ತೆಗೆದರೆ ಕಳೆದ 5 ದಶಕಗಳ ದಾಖಲೆ ಮೀರಿಸುವಂತೆ ಅಭಿವೃದ್ಧಿ ಕಾರ್ಯ ಕಳೆದ ಐದು ವರ್ಷದ ಅವಧಿಯಲ್ಲಿ ಆಗಿದೆ ಎಂದು ಸ್ಥಳೀಯರೆ ಹೇಳುತ್ತಾರೆ ಎಂದರು.
ಸ್ಥಳೀಯರು ಬೋರ್‌ವೆಲ್ ದುರಸ್ತೆಗೆ ಸಂಬಂಧಿಸಿದಂತೆ ದೂರು ಹೇಳಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮೊದಲ ಆದ್ಯತೆ ಕೊಟ್ಟು ಉಳಿದಂತೆ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದೆ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಜಗದೀಶ್ ಮಾತನಾಡಿ, ನಾಗರಿಕರಿಗೆ ಅತ್ಯವಶ್ಯವಾಗಿರುವ ಕುಡಿಯುವ ನೀರು ಮತ್ತು ರಸ್ತೆ, ಚರಂಡಿ ಕೆಲಸಗಳನ್ನು ಈ ಭಾಗದಲ್ಲಿ ಬಹುತೇಕ ಬಗೆಹರಿಸಿದ್ದೇವೆ. ಶಾಸಕ ಸಿ.ಟಿ. ರವಿ ಯವರು ಅಭಿವೃದ್ಧಿಗೆ ಆದ್ಯತೆಕೊಟ್ಟು ಬಡವರಿಗೆ ಸ್ಪಂದಿಸುತ್ತಾ ಬಂದಿದ್ದರ ಫಲವಾಗಿ ಈ ವಾರ್ಡ್‌ನಲ್ಲಿ ರಸ್ತೆ, ನೀರು, ವಿದ್ಯುತ್ ಹಾಗೂ ಸಮುದಾಯ ಭವನದ ಕೆಲಸ ಕೆಲವು ಪೂರ್ಣಗೊಂಡಿದೆ. ಮತ್ತೆ ಕೆಲವು ಪ್ರಗತಿಯಲ್ಲಿದೆ ಶೀಘ್ರದಲ್ಲಿ ಎಲ್ಲವೂ ಪೂರ್ಣಗೊಳ್ಳುತ್ತದೆ ಎಂದರು.
4.5 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ನೀಡಲಾಗಿದ್ದು ಲಕ್ಷಿ ್ಮೕಶನಗರ ಮತ್ತು ಶಂಕರಪುರ ವಾರ್ಡ್ ಹಿಂದೆಂದಿಗಿಂತ ಕಳೆದ ಅವದಿಯಲ್ಲಿ ಹೆಚ್ಚು ಅಭಿವೃದ್ಧಿ ಕಂಡಿದೆ. ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಈಗಾಗಲೆ ಶಾಸಕರು ಸಹಕಾರ ನೀಡಿದ್ದು, ಸೂಕ್ತಜಾಗ ಸಿಗದ ಕಾರಣ ತಡವಾಗಿದೆ. ಸ್ಥಳ ಸಿಕ್ಕ ಕೂಡಲೇ ಘಟಕ ಸ್ಥಾಪಿಸಲಾಗುವುದ ಎಂದು ಹೇಳಿದರು. ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಕೋಟೆಕೃಷ್ಣ ಮುಖಂಡರಾದ ರಾಜೇಶ್, ಶಶಿಧರ್, ನವೀನ್, ಮಂಜು, ಮುರುಗೇಶ್, ಕೇಶವ ನಗರಸಭೆ ಇಂಜಿನಿಯರ್ ಲೋಕೇಶ್, ಈಶ್ವರ್, ಶ್ರೀನಿವಾಸ, ಮಂಜಯ್ಯ ಇತರರು ಇದ್ದರು.