Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ| ಕುಮಾರ್, ಸೇನಾ ತಂತ್ರಜ್ಞ ಕಾರ್ಯಪಡೆ ಮುಖ್ಯಸ್ಥ ಕರ್ನಲ್ ಕಮಲೇಶ್ ಎಸ್.ಬಿಷ್ಟ್ ಮತ್ತು ಕ್ಯಾಪ್ಟನ್ ಬಿ.ನಾಗಮಲ್ಲಿಕಾರ್ಜುನ ರಾವ್ ಅವರ ನೇತೃತ್ವದ 34 ಮಂದಿ ಸೇನಾ ತಾಂತ್ರಿಕ ಕಾರ್ಯಪಡೆ ಸಿಬ್ಬಂದಿ ಕೈಗೊಂಡ ರಕ್ಷಣಾ ಕಾರ್ಯವನ್ನು ವಿವರಿಸಿ ಅಭಿನಂದಿಸಿದರು.
Related Articles
Advertisement
ವೈದ್ಯಕೀಯ ನೆರವನ್ನು ತಕ್ಷಣ ನೀಡಬೇಕಾದ ಅಗತ್ಯವಿದ್ದ 6 ಮಂದಿ ಹಿರಿಯರನ್ನು 8 ಕಿ.ಮೀ.ದೂರ ಹೊತ್ತು ಸಾಗಿಸಿ ರಕ್ಷಿಸಲಾಯಿತು. ಈ ಹಂತದಲ್ಲಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಅರ್ಧ ದಾರಿ ವರೆಗೆ ಈ ಪಡೆಯ ಜೊತೆಯಲ್ಲೆ ಇದ್ದರೆ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಹರೀಶ್ ಪಾಂಡೆ ಅವರ ಪ್ರೋತ್ಸಾಹ ಮತ್ತು ನೆರವನ್ನು ತಾಂತ್ರಿಕ ಪಡೆ ನೆನೆದುಕೊಂಡಿತು. ಕಂದಾಯ ಉಪವಿಭಾಗಾಧಿಕಾರಿ ಕೆ.ಎಚ್. ಶಿವಕುಮಾರ್ ಈ ಕಾರ್ಯಪಡೆ ಜೊತೆ ಇದ್ದು, ಕುಟುಂಬಗಳ ರಕ್ಷಣೆಗೆ ನೆರವಾದರು.
ಈ ಗ್ರಾಮದ 48 ವರ್ಷದ ನಾರಾಯಣಗೌಡ ಪಾರ್ಶ್ವವಾಯು ಪೀಡಿತರಾಗಿದ್ದು, ಅವರನ್ನು ರಕ್ಷಿಸಲು ಸ್ಥಳೀಯವಾಗಿ ಸಿಕ್ಕ ವಸ್ತುಗಳಿಂದಲೆ ಸ್ಟ್ರೆಚರ್ ನಿರ್ಮಿಸಿ ಹೊತ್ತು ತಂದು ಎಲ್ಲಾ 76 ಮಂದಿಯನ್ನು ಪರಿಹಾರ ಕೇಂದ್ರಕ್ಕೆ ತಂದು ಸೇರಿಸಲಾಯಿತು.
ಆನಂತರ ಎದುರಾದದ್ದು ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಮತ್ತು ಅಲಗಡಕ ಗ್ರಾಮದಲ್ಲಿ ಸಿಕ್ಕಿಹಾಕಿಕೊಂಡು ನೆರವಿನ ನಿರೀಕ್ಷೆಯಲ್ಲಿದ್ದ 2 ಕುಟುಂಬಗಳು. ವಯಸ್ಸಾದವರೇ ಹೆಚ್ಚಾಗಿದ್ದ ಈ ಕುಟುಂಬಗಳಲ್ಲಿ ಒಬ್ಬರು ಕ್ಯಾನ್ಸರ್‌ಪೀಡಿತರಾದರೆ, ಮತ್ತೂಬ್ಬರು ಬೆನ್ನುಹುರಿ ಸಮಸ್ಯೆಯಿಂದ ನರಳುತ್ತಿದ್ದರು. ಅಷ್ಟೂ ಮಂದಿಯನ್ನು ನಿಸರ್ಗದ ಎಲ್ಲಾ ರೀತಿಯ ವೈಪರೀತ್ಯಗಳನ್ನು ಎದುರಿಸಿ ಪರಿಹಾರ ಕೇಂದ್ರಕ್ಕೆ ತಂದು ಆಶ್ರಯ ಒದಗಿಸಲಾಯಿತು. ಜಿಲ್ಲಾಡಳಿತದ ಮನವಿ ಆಧರಿಸಿ ಈ ಕಾರ್ಯಪಡೆ ಆ.10 ರಂದು ಜಿಲ್ಲೆಗೆ ಧಾವಿಸಿ ರಾತ್ರಿ, ಹಗಲೆನ್ನದೆ ಜಿಲ್ಲೆಯ ಜನತೆಯ ರಕ್ಷಣೆಗೆ ಮುಂದಾಯಿತೆಂದು ಡಾ| ಕುಮಾರ್ ವಿವರಿಸಿದರು.
ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಮಳೆ ಕಡಿಮೆಯಾಗಿದೆ. ರಕ್ಷಣಾ ಕಾರ್ಯ ಬಹುತೇಕ ಮುಕ್ತಾಯವಾದ ಹಿನ್ನೆಲೆಯಲ್ಲಿ ಮತ್ತೆ ಅಗತ್ಯಬಿದ್ದರೆ ಕರೆಸಿಕೊಳ್ಳಬಹುದು. ಹಾಗಾಗಿ, ಮಂಗಳವಾರ ಈ ಪಡೆ ಹಿಂತಿರುಗುತ್ತಿದೆ ಎಂದು ತಿಳಿಸಿದರು. ನಂತರ ಹಸ್ತಲಾಘವ ನೀಡಿ, ಜೊತೆಗೆ ಒಂದು ಶ್ಲಾಘನಾ ಪತ್ರವನ್ನು ಕೈಗಿತ್ತು ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.