Advertisement
ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೈಗಾರಿಕಾ ಇಲಾಖೆಯ ಪ್ರಸಕ್ತ ಸಾಲಿನ ಪ್ರಥಮ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Related Articles
Advertisement
ಕಾರಣ ಕೇಳಿ ನೋಟಿಸ್ ನೀಡಿ: ಸಭೆಗೆ ಬಾರದೇ ಹಾಗೂ ತಮ್ಮ ಸಹಾಯಕರನ್ನು ಕಳುಹಿಸದೆ ಇರುವ ಬಗ್ಗೆ ತಹಶೀಲ್ದಾರರಿಗೆ ನೋಟಿಸ್ ನೀಡಿ ಕಾರಣ ಕೇಳಲು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಅವರಿಗೆ ಸೂಚಿಸಿದರು. ಅಲ್ಲದೇ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ನೋಟಿಸಿನ ಪ್ರತಿಯನ್ನು ಕಳುಹಿಸಿಕೊಡಲು ತಿಳಿಸಿದರು.
ಬೆನ್ನುಹತ್ತಿ ಕೆಲಸ ಮಾಡಿಸಿ: ಕೈಗಾರಿಕಾ ಇಲಾಖೆ ಅಧಿಕಾರಿಗಳು ಕೇವಲ ಪತ್ರ ವ್ಯವಹಾರ ಮಾಡಿ ಮೌನವಾಗಿರಬಾರದು. ಕೈಗಾರಿಕಾ ಅಭಿವೃದ್ಧಿ ಬಗ್ಗೆ ತೆಗೆದುಕೊಂಡ ನಿರ್ಧಾರಗಳು ಕಾರ್ಯಗತವಾಗುವಂತೆ ಆಗಾಗ ಆ ಜವಾಬ್ದಾರಿ ಹೊತ್ತ ಅಧಿಕಾರಿಗಳ ಬೆನ್ನುಹತ್ತಿ ಒತ್ತಡ ಹಾಕಿ ಕೆಲಸ ಮಾಡಿಸಬೇಕು. ಅವರು ಮಾಡಲು ಮುಂದಾಗದಿದ್ದಲ್ಲಿ ಅದನ್ನು ತಮ್ಮ ಗಮನಕ್ಕಾದರೂ ತರಬೇಕಿತ್ತು ಎಂದು ಹೇಳಿದರು.
ಮೆಸ್ಕಾಂ ಸಬ್‌ಸ್ಟೇಷನ್‌ಗೆ ಜಾಗ ಹುಡುಕಿ: ಮೆಸ್ಕಾಂಗೆ ಸಬ್ ಸ್ಟೇಷನ್ ನಿರ್ಮಾಣಕ್ಕೆ ಲಕ್ಯಾ ಸುತ್ತಮುತ್ತ 2ಎಕರೆ ಜಾಗದ ಅವಶ್ಯಕತೆ ಇದ್ದು, ಆ ಬಗ್ಗೆ ಸಹ ಯಾವುದೇ ಪ್ರಗತಿ ಆಗಿಲ್ಲದೇ ಇರುವುದನ್ನು ಜಿಲ್ಲಾಧಿಕಾರಿಗಳು ಇದೇ ವೇಳೆ ಪ್ರಸ್ತಾಪಿಸಿದರು. ತಹಶೀಲ್ದಾರರು ಅತ್ಯಂತ ಕ್ರಿಯಾಶೀಲರಾಗಿರಬೇಕು. ಮೆಸ್ಕಾಂ ಸಬ್ ಸ್ಟೇಷನ್ ಆದಲ್ಲಿ ಅದು ಕೈಗಾರಿಕೆಗಳಿಗೆ ಮಾತ್ರವಲ್ಲ ಗ್ರಾಮೀಣ ಜನರಿಗೂ ಉತ್ತಮ ವಿದ್ಯುತ್ ಸರಬರಾಜಿಗೆ ಕಾರಣವಾಗುತ್ತದೆ. ಇನ್ನೊಂದು ವಾರದಲ್ಲಿ ಮೆಸ್ಕಾಂಗೆ ಜಾಗ ನೀಡುವ ಬಗ್ಗೆ ಪೂರ್ಣ ವರದಿ ತಮಗೆ ಸಲ್ಲಿಕೆಯಾಗಬೇಕು. ಆ ಪ್ರದೇಶದಲ್ಲಿ ಭೂಮಿ ಇಲ್ಲದಿದ್ದರೆ ಪರ್ಯಾಯ ಭೂಮಿ ಬಗ್ಗೆ ಮಾಹಿತಿ ಹೊಂದಿರಬೇಕೆಂದು ಖಡಕ್ ಸೂಚನೆ ನೀಡಿದರು.
ಪ್ರಸ್ತಾವನೆ ಸಲ್ಲಿಸಿ: ಜಿಲ್ಲಾಧಿಕಾರಿಗಳು ಮಾತನಾಡಿ, 500ಎಕರೆ ಎಂದಾಕ್ಷಣ ಭಾರಿ ವಿಶಾಲ ಪ್ರದೇಶವಾಗುತ್ತದೆ. ಅಗತ್ಯವಿರುವಷ್ಟು ಜಾಗ ಗುರುತಿಸಲು ಕೈಗಾರಿಕಾ ಇಲಾಖೆಗೆ ಸೂಚಿಸಿದಾಗ, ಕನಿಷ್ಠ 200 ಎಕರೆ ಜಾಗ ಪ್ರತಿ ತಾಲೂಕಿನಲ್ಲಿ ಅವಶ್ಯಕತೆ ಇದೆ ಎಂಬ ಮಾಹಿತಿ ಹೊರಬಂತು. ಕೆಐಎಡಿಬಿ ಅಧಿಕಾರಿಗಳು ತಹಶೀಲ್ದಾರರೊಂದಿಗೆ ಸೇರಿ ಪರಿಶೀಲಿಸಿ ಈ ಪ್ರದೇಶವನ್ನು ಗುರುತಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ತರೀಕೆರೆ ಮತ್ತು ಚಿಕ್ಕಮಗಳೂರು ತಹಶೀಲ್ದಾರರಿಗೆ ಸರ್ಕಾರಿ ಭೂಮಿ ಎಲ್ಲಿದೆ ಎಂದು ಪರಿಶೀಲಿಸಿ ತಮಗೆ ಪ್ರಸ್ತಾವನೆ ಸಲ್ಲಿಸಬೇಕೆಂದರು.