Advertisement
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಜಿಲ್ಲೆಯಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಕ್ರಮ ವಹಿಸಬೇಕೆಂದು ಸಮಿತಿ ಸದಸ್ಯರು ಮನವಿ ಮಾಡಿದಾಗ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಈಗಾಗಲೇ ಒಂದು ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದ್ದು, ಮತ್ತೂಂದು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲು ಬರುವುದಿಲ್ಲ. ಈಗಿರುವ ಭವನಕ್ಕೆ ದುರಸ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.
ದಲಿತರಿಗೆ ನಿವೇಶನ ಮತ್ತು ದರಖಾಸ್ತಿನಡಿ ಶೇ.40 ರಷ್ಟು ಹಾಗೂ ಇತರೆಯವರಿಗೆ ಶೇ.60ರಷ್ಟು ನಿವೇಶನ ನೀಡಬೇಕಿದ್ದು, ಇತರೆಯವರಿಗೆ ಶೇ.60ರಷ್ಟು ಹಕ್ಕು ಪತ್ರಗಳನ್ನು ಈಗಾಗಲೇ ನೀಡಲಾಗಿದೆ. ದಲಿತರಿಗೆ ಮಾತ್ರ ಈವರೆಗೂ ಹಕ್ಕುಪತ್ರ ನೀಡಿರುವುದಿಲ್ಲ. ದರಖಾಸ್ತಿನ ಸಮಿತಿಯಲ್ಲಿ ಈ ಕುರಿತು ನಿರ್ಣಯವಾಗಿದ್ದರೂ ಸರ್ಕಾರದ ಹಂತದಲ್ಲಿ ನಿರ್ಣಯವಾಗಬೇಕಾಗಿದೆ ಎಂದು ಸಮಿತಿಯ ಸದಸ್ಯರು ಸಭೆಯ ಗಮನಕ್ಕೆ ತಂದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಯಾವ ಯಾವ ತಾಲೂಕಿನಲ್ಲಿ ಬಾಕಿ ಉಳಿದಿರುವ ಬಗ್ಗೆ ಪಟ್ಟಿ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.
ದಲಿತರಿಗೆ ಫಾರಂ 53, 53ಎ ಮತ್ತು 94(ಸಿ)ಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಭೂಮಿಯನ್ನು ಕೊಡಬೇಕೆಂದು ಸರ್ಕಾರ ನಿರ್ಣಯ ಮಾಡಿದ್ದರೂ ಅಧಿಕಾರಿಗಳು ನೀಡಿರುವುದಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸತ್ತಿಹಳ್ಳಿ ಗ್ರಾಮ ಪಂಚಾಯತ್‌ನ ಮಾಚಗೊಂಡನಹಳ್ಳಿಯಲ್ಲಿ ಎರಡು ಎಕರೆ ಆಶ್ರಯ ನಿವೇಶನಕ್ಕೆ ಜಮೀನು ಕಾಯ್ದಿರಿಸಲು ಮಂಜೂರಾತಿ ನೀಡಲಾಗಿದೆ. ಜಿಲ್ಲೆಯಲ್ಲಿ ನಿವೇಶನ ನೀಡಲು ಕಾನೂನಿನ ಅಡಿ ಅವಕಾಶವಿದ್ದು, ಯಾವ ಗ್ರಾಮದಲ್ಲಿ ನಿವೇಶನಕ್ಕೆ ಜಾಗ ಬೇಕೋ ಆ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಗುರುತಿಸಿ ಸರ್ಕಾರಿ ಜಾಗವಿದ್ದರೆ ಕ್ರಮ ವಹಿಸಲಾಗುವುದು ಎಂದು ಈಗಾಗಲೇ ತಿಳಿಸಿದೆ. ಆಶ್ರಯ ಸಮಿತಿಯಲ್ಲಿ ನಿವೇಶನ ನೀಡಲು ಅವಕಾಶವಿದ್ದು, ಸುಮಾರು 272 ಎಕರೆ ಜಮೀನನ್ನು ಗ್ರಾಮೀಣ ಪ್ರದೇಶದಲ್ಲಿ ಕಾಯ್ದಿರಿಸಲು ಕಾರ್ಯನಿರ್ವಾಹಣಾಧಿಕಾರಿಗಳಿಗೆ ಈ ಹಿಂದೆಯೇ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಕುಮಾರ್, ನಗರಸಭೆ ಆಯುಕ್ತ ಪರಮೇಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.
ದಲಿತರಿಗೆ ನಿವೇಶನ ಮತ್ತು ದರಖಾಸ್ತಿನಡಿ ಶೇ.40 ರಷ್ಟು ಹಾಗೂ ಇತರೆಯವರಿಗೆ ಶೇ.60ರಷ್ಟು ನಿವೇಶನ ನೀಡಬೇಕಿದ್ದು, ಇತರೆಯವರಿಗೆ ಶೇ.60ರಷ್ಟು ಹಕ್ಕು ಪತ್ರಗಳನ್ನು ಈಗಾಗಲೇ ನೀಡಲಾಗಿದೆ. ದಲಿತರಿಗೆ ಮಾತ್ರ ಈವರೆಗೂ ಹಕ್ಕುಪತ್ರ ನೀಡಿರುವುದಿಲ್ಲ. ದರಖಾಸ್ತಿನ ಸಮಿತಿಯಲ್ಲಿ ಈ ಕುರಿತು ನಿರ್ಣಯವಾಗಿದ್ದರೂ ಸರ್ಕಾರದ ಹಂತದಲ್ಲಿ ನಿರ್ಣಯವಾಗಬೇಕಾಗಿದೆ.•ಡಾ| ಬಗಾದಿ ಗೌತಮ್,
ಜಿಲ್ಲಾಧಿಕಾರಿ.