Advertisement

Crime: ಚಿಕ್ಕಮಗಳೂರು: ಪ್ರೇಮಿ ಜೊತೆಯಿರಲು ಪತಿಯನ್ನೇ ಕೊಂದ ಪತ್ನಿ

09:35 AM Aug 14, 2023 | Team Udayavani |

ಚಿಕ್ಕಮಗಳೂರು: ಪ್ರೇಮಿ ಜೊತೆಯಿರಲು ಅಡ್ಡಗಾಲಾಗುತ್ತಿದ್ದ ಪತಿಯನ್ನು ಪ್ರೇಮಿ ಜೊತೆ ಸೇರಿ ಪತ್ನಿಯೇ ಕೊಲೆ ಮಾಡಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.

Advertisement

ನವೀನ್ (28) ಪತ್ನಿ ಕಣ್ಣಾಮುಚ್ಚಾಲೆ ಆಟಕ್ಕೆ ಬಲಿಯಾದ ಪತಿ. ಪತ್ನಿ ಪಾವನ ಹಾಗೂ ಆಕೆಯ ಪ್ರೇಮಿ ಸಂಜಯ್‌ ಕೊಲೆ ಮಾಡಿದ ಆರೋಪಿಗಳು ಎಂದು ತಿಳಿದು ಬಂದಿದೆ.

ನವೀನ್‌ ಅವರ ಮೃತದೇಹ ಆಗಸ್ಟ್ 6 ರಂದು ಯಗಟಿ ಕೆರೆ ಬಳಿ ಪತ್ತೆಯಾಗಿತ್ತು. ಇದು ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ಯಗಟಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ನವೀನ್‌ ಪೋಷಕರು ನೀಡಿದ ದೂರಿನ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರಿಗೆ  ಪತ್ನಿಯೇ ಪತಿಯನ್ನು ಕೊಂದಿರುವುದಾಗಿ ತನಿಖೆಯಲ್ಲಿ ಪಾವನ ಹಾಗೂ ಸಂಜಯ್ ಬಾಯ್ಬಿಟ್ಟಿದ್ದಾರೆ.

ಘಟನೆ ವಿವರ: ಪ್ರೇಮಿ ಜೊತೆ ಇರಲು ಅಡ್ಡಗಾಲಾಗುತ್ತಿದ್ದ ಪತಿಗೆ ಪಾವನ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಪತಿಯ ಜ್ಞಾನ ತಪ್ಪಿಸುತ್ತಾಳೆ. ಬಳಿಕ ಪತಿಯನ್ನು ಪ್ರೇಮಿಯ ಜೊತೆ ಬೈಕ್‌ ನಲ್ಲಿ ತಂದು ಕೆರೆಗೆ ಎಸೆದಿದ್ದರು ಎನ್ನಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next