ಚಿಕ್ಕಮಗಳೂರು: ಮಗುಸಾವಿನ ಪ್ರತಿಕಾರವನ್ನು ತಿರಿಸಿಕೊಳ್ಳಲು ತರೀಕೆರೆ ಪಟ್ಟಣದ ಬಸವೇಶ್ವರ ಆಸ್ಪತ್ರೆಯ ಮಕ್ಕಳ ತಜ್ಞ ಡಾ|ದೀಪಕ್ ಮೇಲೆ ಹಲ್ಲೆ ನಡೆಸಲಾಗಿದ್ದು ಪ್ರಕರಣ ಸಂಬಂಧ ನಾಲ್ಕುಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆ ಕಮರ್ಷಿಯಲ್ ಟ್ಯಾಕ್ಸ್ ಆಫೀಸ್‍ಬಳಿ ಸೈಕಲ್‍ನಲ್ಲಿ ತೆರೆಳಿತ್ತಿದ್ದ ವೇಳೆ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡಿದ್ದ ವೈದ್ಯ ಡಾ|ದೀಪಕ್ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯ ಪ್ರಣಾಪಾಯದಿಂದ ಪಾರಾಗಿದ್ದಾನೆ.
ಅಜ್ಜಂಪುರ ತಾಲ್ಲೂಕನ ತಗಡ ಗ್ರಾಮದ ಬಾಲಕ ಭುವನ್(9), ಜ್ವರದಿಂದ ಬಳಲುತ್ತಿ ದ್ದು ಪೋಷಕರು ತರೀಕೆರೆ ಪಟ್ಟಣದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದರು. ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬಾಲಕ ಭುವನ್‍ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವ ಮೊಗ್ಗಕ್ಕೆ ಕಳಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಭುವನ್ ಮೇ.29ರಂದು ಮೃತಪಟ್ಟಿದ್ದಾನೆ.
ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 29271 ಜನ ಗುಣಮುಖ; 14304 ಹೊಸ ಪ್ರಕರಣ ಪತ್ತೆ
ಮಕ್ಕಳತಜ್ಞ ಡಾ|ದೀಪಕ್, ಭುವನ್‍ಗೆ ಓವರ್‍ಡೋಸ್ ಇಂಜಕ್ಷನ್ ನೀಡಿದ್ದರಿಂದ ಮೃತ ಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದರು. ಬಾಲಕ ಭುವನ್ ಸಾವಿನ ಜಿದ್ದನ್ನು ಇಟ್ಟುಕೊಂಡು ಸೋಮವಾರ ಆರೋಪಿಗಳಾದ ವೇಣು, ನಿತಿನ್, ವೆಂಕಟೇಶ್, ಚಂದ್ರಶೇಖರ್ ಎಂಬುವರು ಡಾ|ದೀಪಕ್ ಮೇಲೆ ಲಾಂಗು ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಡಾ|ದೀಪಕ್ ಗಂಭೀರ ಗಾಯಗೊಂಡಿದ್ದರು.
ಹಾಡಹಗಲೇ ನಡೆದ ಹಲ್ಲೆ ಪ್ರಕರಣದಿಂದ ತರೀಕೆರೆ ಪಟ್ಟಣದ ಜನರು ಬೆಚ್ಚಿಬಿದಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರು ಪ್ರಕರಣದ ಸಂಬಂಧ ನಾಲ್ಕುಮಂದಿಯನ್ನು ಬಂಧಿಸಿದ್ದಾರೆ.