Advertisement

ಕಾಫಿನಾಡಿನಲ್ಲಿ ಒಂದೇ ದಿನ 68 ಮಂದಿಗೆ ಸೋಂಕು ದೃಢ! 400ರ ಗಡಿ ದಾಟಿದ ಸೋಂಕಿತರು

05:46 PM Jul 21, 2020 | sudhir |

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದ್ದು ಇಂದು ಒಂದೇ ದಿನ 68 ಹೊಸ ಪ್ರಕರಣಗಳು ದೃಢಪಟ್ಟಿವೆ, ಇದರೊಂದಿಗೆ ಜಿಲ್ಲೆಯ ಸೋಂಕಿತರ ಸಂಖ್ಯೆ 402ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಮಂಗಳವಾರ 68 ಹೊಸ ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ ಕಡೂರು 18, ಚಿಕ್ಕಮಗಳೂರು 17, ಶೃಂಗೇರಿ 8, ಕೊಪ್ಪ 7, ತರೀಕೆರೆ 2, ಎನ್.ಆರ್ ಪುರದಲ್ಲಿ 7, ಅಜ್ಜಂಪುರ 3, ಮೂಡಿಗೆರೆಯಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ.

ಚಿಕ್ಕಮಗಳೂರು ಅಪಾರ ಜಿಲ್ಲಾಧಿಕಾರಿ ಡಾ.ಕುಮಾರ್ ಹೇಳಿಕೆ ಪ್ರಕಾರ ಇದುವರೆಗೆ ಕೋವಿಡ್ ಸೋಂಕಿನಿಂದ ಜಿಲ್ಲೆಯಲ್ಲಿ 10 ಮಂದಿ ಬಲಿಯಾಗಿದ್ದು , 227 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 402 ಕ್ಕೆ ಏರಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next