Advertisement

ಸಿದ್ಧಾರ್ಥಗೆ ವಿವಿಧ ಸಂಘಟನೆಗಳ ಶೃದ್ಧಾಂಜಲಿ

12:58 PM Aug 02, 2019 | Naveen |

ಚಿಕ್ಕಮಗಳೂರು: ಕಾಫಿ ಡೇ ಮಾಲಿಕ ವಿ.ಜಿ.ಸಿದ್ಧಾರ್ಥ ಅವರಿಗೆ ನಗರದ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಜೆಡಿಎಸ್‌ ಕಚೇರಿ: ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರಿಗೆ ನಗರದ ಜೆಡಿಎಸ್‌ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಿದ್ಧಾರ್ಥ ಅವರ ಭಾವಚಿತ್ರಕ್ಕೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಅವರ ಆತ್ಮಕ್ಕೆ ಶಾಂತಿ ಕೋರಿ, 1 ನಿಮಿಷ ಮೌನಾಚರಣೆ ಮಾಡಿದರು.

ಐಟಿ ಅಧಿಕಾರಿಗಳ ಕಿರುಕುಳ: ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಸಿದ್ಧಾರ್ಥ ಅವರ ಸಾವಿಗೆ ಐಟಿ ಇಲಾಖೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಿದರು.

ನಿರೀಕ್ಷೆಗೂ ಮೀರಿ ಎತ್ತರಕ್ಕೆ ಬೆಳೆದಿದ್ದ ಸಿದ್ಧಾರ್ಥ ಅವರು 50ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿದ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಕಾಫಿ ಉದ್ಯಮಕ್ಕೆ ಮತ್ತು ಬೆಳೆಗಾರರಿಗೆ ಗೌರವ, ಪ್ರತಿಷ್ಠೆ ತಂದು ಕೊಟ್ಟಿದ್ದರು. ಅವರ ಸಾವಿನಿಂದ ಮನೆ ಮಗನನ್ನು ಕಳೆದುಕೊಂಡಂತಾಗಿದೆ ಎಂದರು.

Advertisement

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್‌ ಮಾತ ನಾಡಿ, ಸಿದ್ಧಾರ್ಥ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌ ಮಾತನಾಡಿ, ಸಿದ್ಧಾರ್ಥ ಅವರ ಸಾವಿನಿಂದ ತಮ್ಮ ಸ್ವಂತ ಅಣ್ಣನನ್ನು ಕಳೆದುಕೊಂಡಾಗಿದೆ ಎಂದು ಹೇಳಿದರು.

ಪಕ್ಷದ ಮುಖಂಡರಾದ ಜಿ.ಎಸ್‌.ಚಂದ್ರಪ್ಪ, ಮಂಜಪ್ಪ, ಹೊಲದಗದ್ದೆ ಗಿರೀಶ್‌, ಮಾನುಮಿರಾಂಡ ಎನ್‌.ದೇವರಾಜ್‌ ಅರಸ್‌, ಬೈರೇಗೌಡ, ಜಯರಾಜ್‌ ಅರಸ್‌ ಹಾಜರಿದ್ದರು.

ವಿವಿಧ ಸಂಘಟನೆಗಳು: ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ದಲಿತ್‌ ಜನಸೇನೆ, ಸ್ವಸ್‌§ ಭೂಮಿ ಪ್ರತಿಷ್ಠಾನ, ಜೆಸಿಐ ಚಿಕ್ಕಮಗಳೂರು, ಶ್ರೀರಾಮ ಸೇನೆ ಪದಾಧಿಕಾರಿಗಳು ಶ್ರದ್ಧಾಂಜಲಿ ಸಭೆ ನಡೆಸಿ, ಮೌನ ಆಚರಣೆ ಮೂಲಕ ಸಿದ್ಧಾರ್ಥ್ ಹೆಗ್ಡೆ ಅವರ ಆತ್ಮಕ್ಕೆ ಶಾಂತಿ ಕೋರಿದರು.

ದಲಿತ್‌ ಜನಸೇನೆ ಜಿಲ್ಲಾಧ್ಯಕ್ಷ ಅನಿಲ್ ಆನಂದ್‌, ಕಾರ್ಯದರ್ಶಿ ವಿಶ್ವನಾಥ್‌, ಮಹಿಳಾ ಅಧ್ಯಕ್ಷೆ ಸ್ವರ್ಣಗೌರಿ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್‌ ಶೆಟ್ಟಿ, ಜೆಸಿಐ ಅಧ್ಯಕ್ಷ ರಘುನಂದನ್‌, ಕಾರ್ಯದರ್ಶಿ ಪ್ರದೀಪ್‌, ಚೇತನ್‌ ಕುಮಾರ್‌, ಆನಂದ್‌ ಮೂರ್ತಿ, ನಿಶಾಂತ್‌ ಹಾಗೂ ದಲಿತ್‌ ಜನಸೇನೆ ಯುವ ಘಟಕದ ಕಾರ್ಯದರ್ಶಿ ಪುನೀತ್‌, ಸಂದೀಪ್‌, ಶಿವು, ಪರಮೇಶ್‌, ಗಿರೀಶ್‌, ತಿಲಕ್‌ ದತ್ತ, ವಿನೋದ್‌, ಶಶಿಧರ್‌, ಸಚಿನ್‌, ಸವಿನ್‌ ಮುಂತಾದವರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next