Advertisement

ಚಿಕ್ಕಮಗಳೂರು: ಬಾಡಿ ಬಿಲ್ಡರ್ ಕೊಲೆ ಆರೋಪ ಪ್ರಕರಣ, ಅಂಗಡಿಗಳ ಬಾಗಿಲು ಹಾಕಿಸಿ ಪ್ರತಿಭಟನೆ

01:50 PM Apr 09, 2021 | Team Udayavani |

ಚಿಕ್ಕಮಗಳೂರು : ಅನ್ಯ ಕೋಮಿನ ಯುವಕರ ಗುಂಪು ಹಿಂದು ಕಾರ್ಯನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರಿಂದ ಯುವಕ ಗಂಬೀರ ಗಾಯಗೊಂಡಿದ್ದ ಯುವಕ ಮನೋಜ್ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

Advertisement

ಎರಡು ಅನ್ನ ಕೋಮಿನ ಯುವಕರ ಗುಂಪಿನ ನಡುವೆ ಕ್ಷುಲಕ ಕಾರಣಕ್ಕೆ ಗುರುವಾರ ರಾತ್ರಿ ನಗರದ ದುಬೈನಗರದಲ್ಲಿ ಮಾತಿಗೆ ಮಾತು ಬೆಳೆದು ಘರ್ಷಣೆ ನಡೆದಿದೆ.

ಈ ವೇಳೆ ಮನೋಜ್ ಮೇಲೆ ಮತ್ತೋಂದು ಗುಂಪಿನ ಯುವಕರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಮನೋಜ್ ನನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಗಾಯಗೊಂಡಿದ್ದ ಮನೋಜ್ ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ  ಆರೋಪಿ ಸಲೀಂ ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ನಗರದ ಎಂ.ಜಿ ರಸ್ತೆಯಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಾಗಿಲು ಮುಚ್ಚಿಸಿ ಹನುಮಂತಪ್ಪ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು ಆರೋಪಿಗಳನ್ನು ಬಂಧಿಸುವಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದರು.

ಈ ವೇಳೆ ನಗರದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಈ ವೇಳೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸಿಪಿಐ ಸಲೀಂ ಒಂದು ಕೋಮಿನ ಪರ ಕೆಲಸ ಮಾಡುತ್ತಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next