Advertisement

ಬಸವಣ್ಣ ಮಹಾನ್‌ ಮಾನವತಾವಾದಿ

04:10 PM Apr 27, 2020 | Naveen |

ಚಿಕ್ಕಮಗಳೂರು: 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಎಲ್ಲಾ ವರ್ಗ ಸಮುದಾಯಗಳಿಗೆ ಚರ್ಚಿಸಲು ಅವಕಾಶ ನೀಡಿದ ಮಹಾನ್‌ ಮಾನವತಾವಾದಿ ಬಸವೇಶ್ವರರು ಎಂದು ಸಚಿವ ಸಿ.ಟಿ. ರವಿ ಹೇಳಿದರು.

Advertisement

ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರರ ಜಯಂತಿಯ ಅಂಗವಾಗಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಪಣತೊಟ್ಟು ಸರಳ ಜೀವನ ನಡೆಸುವುದರ ಮೂಲಕ ಸಮಾಜಕ್ಕೆ ಮಾದರಿಯಾದವರು. ದಯವೇ ಧರ್ಮದ ಮೂಲವಯ್ಯ ಎಂಬ ವಚನದ ಮೂಲಕ ಧರ್ಮದ ಮೂಲತತ್ವಗಳನ್ನು ತಿಳಿಸಿ ಸಕಲ ಜೀವಾತ್ಮಗಳಿಗೂ ಒಳಿತಾಗಲಿ ಎಂದು ಬಯಸಿದವರು ಅವರು ಎಂದರು.

ಕಾಯಕವೇ ಕೈಲಾಸ ಎಂಬ ಸಂದೇಶ ಸಾರುವ ಮೂಲಕ ದುಡಿಮೆಯಲ್ಲಿಯೇ ದೇವರನ್ನು ಕಾಣಿ ಎಂದ ಅವರು, ಸುಧಾರಣಾ ಪದ್ಧತಿ ಬದುಕಿನ ಕಾಲ ಘಟ್ಟದಲ್ಲಿ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದ ಅವರು, ಲಾಕ್‌ಡೌನ್‌ ಹಿನ್ನೆಲೆಯಿಂದಾಗಿ ಬಸವೇಶ್ವರರ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದ್ದು, ಸರ್ಕಾರವು ಜಯಂತಿಗಳಿಗೆ ನೀಡುವ ಹಣವನ್ನು ಕೋವಿಡ್‌-19 ನೆರವಿಗೆ ಹಾಗೂ ಬಡ ಕಲಾವಿದರಿಗೆ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಪಂ ಸದಸ್ಯ ಸೋಮಶೇಖರ್‌, ತಾಪಂ ಅಧ್ಯಕ್ಷೆ ಶುಭ ಸತ್ಯಮೂರ್ತಿ, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್‌. ಪೂವಿತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ| ರಮೇಶ್‌, ಮುಖಂಡರಾದ ತಮ್ಮಯ್ಯ, ರೇಣುಕಾರಾಧ್ಯ, ಓಂಕಾರಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next