ಚಿಕ್ಕಮಗಳೂರು: ಶ್ರೀ ಗುರುದತ್ತಾತ್ರೇಯ ಬಾಬಾ ಬುಡನ್ ದರ್ಗಾದ ಶಾಖಾದ್ರಿ ಸೈಯದ್ ಗೌಸ್ ಮೊಹಿನುದ್ದೀನ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬ ಂದಿ ಹಾಗೂ ಅ ಧಿಕಾರಿಗಳು ಮನೆಯಲ್ಲಿ ಇರಿಸಲಾಗಿದ್ದ ಚಿರತೆ ಚರ್ಮ ಮತ್ತು ಜಿಂಕೆ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.
ಶಾಖಾದ್ರಿ ಮನೆಯಲ್ಲಿ ಹುಲಿ ಚರ್ಮ ಇದೆ. ಅದನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಮನೆಯಲ್ಲಿ ಇರಿಸಲಾಗಿದ್ದ ಚಿರತೆ ಹಾಗೂ ಜಿಂಕೆ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.
ಶಾಖಾದ್ರಿ ಕುಟುಂಬದ ಹಿರಿಯರು ವನ್ಯಜೀವಿಯೊಂದರ ಚರ್ಮದ ಹಾಸಿನ ಮೇಲೆ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಈ ಸಂಬಂಧ ಬಂದ ದೂರನ್ನು ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮನೆಗೆ ಬೀಗ ಹಾಕಲಾಗಿತ್ತು. ಶುಕ್ರವಾರ ಬೆಳಗ್ಗೆಯಿಂದ ಮನೆ ಮುಂದೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಕಾದು ಕಾದು ಸುಸ್ತಾದ ಅಧಿಕಾರಿಗಳು ಶಾಖಾದ್ರಿ ಅವರ ಮನೆಗೆ ಸರ್ಚ್ ವಾರೆಂಟ್ ಜಾರಿಗೊಳಿಸಿ ಶಾಖಾದ್ರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಈ ವೇಳೆ ಶಾಖಾದ್ರಿ ಅವರು ತಾವು ಬೆಂಗಳೂರಿನಲ್ಲಿ ಇದ್ದು ಸಂಜೆ ಆರು ಗಂಟೆ ವೇಳೆಗೆ ಬರುವುದಾಗಿ ತಿಳಿಸಿದ್ದರು.
ಶಾಖಾದ್ರಿ ಅವರು ಬಾರದೆ ಬಸ್‌ನಲ್ಲಿ ಮನೆಯ ಕೀ ಕಳಿಸಿಕೊಟ್ಟಿದ್ದರು. ಅಧಿ ಕಾರಿಗಳ ಕೈಗೆ ಮನೆಯ ಕೀ ಸಿಗುತ್ತಿದ್ದಂತೆ ಮನೆಯನ್ನು ಜಾಲಾಡಿದಾಗ ಚಿರತೆ ಮತ್ತು ಜಿಂಕೆ ಚರ್ಮ ಪತ್ತೆಯಾಗಿದೆ. ಚರ್ಮವನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಸಿಬ್ಬಂದಿ ಎಫ್‌ಎಸ್‌ಎಲ್ ವರದಿಗೆ ಚರ್ಮ ಕಳಿಸಲು ಮುಂದಾಗಿದ್ದಾರೆ. 10 ಗಂಟೆಯಿಂದ ಕಾದು ಕುಳಿತ ಸಿಬ್ಬಂದಿಗಳು ಚಿರತೆ ಚರ್ಮ ಮತ್ತು ಜಿಂಕೆ ಚರ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಚರ್ಮವನ್ನು ಇಲಾಖೆಯ ಅನುಮತಿ ಪಡೆದು ಮನೆಯಲ್ಲಿ ಇರಿಸಿಕೊಳ್ಳಲಾಗಿತ್ತಾ ಅಥವಾ ಹಾಗೇ ಇಟ್ಟುಕೊಳ್ಳಲಾಗಿತ್ತಾ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.