Advertisement

Mangaluru: ಪೇಜಾವರ ಶ್ರೀಗಳ ಬಗ್ಗೆ ಸುಳ್ಳು ಹೇಳಿಕೆ… :ಕ್ರಮಕ್ಕೆ ವಿಎಚ್‌ಪಿ ಆಗ್ರಹ

09:00 PM Dec 04, 2024 | Team Udayavani |

ಮಂಗಳೂರು: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಹೇಳಿಕೆಯ ಕುರಿತು ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕೆಂದು ವಿಶ್ವಹಿಂದೂ ಪರಿಷತ್‌ ಒತ್ತಾಯಿಸಿದೆ.

Advertisement

ಪೇಜಾವರ ಶ್ರೀಗಳ ಸಂವಿಧಾನ ಬದ್ಧತೆ ಪ್ರಶ್ನಾತೀತ. ಅವರು ಸಂವಿಧಾನ ಬದಲಾಯಿಸುವ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಆದರೂ ಕೆಲವರು ಅವರ ಹೇಳಿಕೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ. ಪೇಜಾವರ ಶ್ರೀಗಳು ಸಂವಿಧಾನ, ಹಿಂದೂ ಸಮಾಜದ ಸರ್ವರಿಗೂ ಸಮಾನ ಗೌರವ ನೀಡುತ್ತಾ ಬಂದಿದ್ದಾರೆ ಎಂದು ವಿಶ್ವಹಿಂದೂ ಪರಿಷತ್‌ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next