Advertisement

ಸಹಜ ಸ್ಥಿತಿಗೆ ಮರಳಿತ ಶೃಂಗೇರಿ ಪಟ್ಟಣ

08:15 PM Apr 27, 2021 | Team Udayavani |

ಶೃಂಗೇರಿ: ಎರಡು ದಿನದ ಕರ್ಫ್ಯೂ ನಂತರ ತಾಲೂಕಿನಾದ್ಯಾಂತ ಸೋಮವಾರ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಕೋವಿಡ್‌ ಪ್ರಕರಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬಾಗಶಃ ಲಾಕ್‌ಡೌನ್‌ ಜಾರಿಗೊಂಡಿದ್ದು, ಅದರಂತೆ ಪಟ್ಟಣದ ಬಟ್ಟೆ ಅಂಗಡಿ, ಚಿನ್ನಾಭರಣ, ಚಪ್ಪಲಿ, ಫ್ಯಾನ್ಸಿ ಅಂಗಡಿ ಮತ್ತಿತರ ಅಂಗಡಿಗಳು ಮುಚ್ಚಿದ್ದವು.

Advertisement

ಪಟ್ಟಣದಲ್ಲಿ ಸೋಮವಾರ ಸಂತೆ ದಿನವಾಗಿದ್ದು ಸಂತೆಯನ್ನು ರದ್ದುಪಡಿಸಲಾಗಿತ್ತು. ಶ್ರೀ ಶಂಕರಾಚಾರ್ಯ ವೃತ್ತದಲ್ಲಿ ತರಕಾರಿ ಮಾರಾಟ ಮುಂದುವರಿದಿತ್ತು. ಚಿಕ್ಕಮಗಳೂರು ಹಾಗೂ ಸ್ಥಳೀಯ ವರ್ತಕರು ವ್ಯಾಪಾರ ನಡೆಸಿದ್ದರು. ತರಕಾರಿ ಖರೀದಿಸಲು ಹೆಚ್ಚಿನ ಜನ ಕಂಡು ಬಂದಿದ್ದು, ದರ ಹಾಗೂ ತರಕಾರಿ ಕೊರತೆಯಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಮುಂದಾಗಿದ್ದರು. ಲಾಕ್‌ಡೌನ್‌ ಆದೇಶ ಬರಬಹುದೆಂಬ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಜನ ಸಾಮಾನ್ಯರು ಅಗತ್ಯ ವಸ್ತು ಖರೀದಿಗೆ ಮುಂದಾಗಿದ್ದರು.ಬ್ಯಾಂಕ್‌, ತರಕಾರಿ, ದಿನಸಿ ಅಂಗಡಿ ಸೇರಿದಂತೆ ಎಲ್ಲೆಡೆ ಜನ ಜಂಗುಳಿ ಕಂಡು ಬಂದಿತು.

ಬಸ್‌ ಸಂಚಾರವೂ ಸೀಮಿತವಾಗಿದ್ದು, ಆಟೋ ಹಾಗೂ ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಇತ್ತು. ಗ್ರಾಮೀಣ ಪ್ರದೇಶದ ಕೃಷಿ ಚಟುವಟಿಕೆ ಮುಂದುವರಿದಿದೆ. ಸಹಕಾರ ಸಂಘಗಳ ಬೆಳೆ ಸಾಲ ಮರು ಪಾವತಿಗೆ ಈಗ ಸಮಯವಾಗಿದ್ದು, ಲಾಕ್‌ ಡೌನ್‌ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮರು ಪಾವತಿಗೆ ಹಿನ್ನಡೆಯಾಗುವ ಸಾಧ್ಯತೆ ಎದುರಾಗಿದೆ. ಸರಕಾರ ಸಾಲ ಮರು ಪಾವತಿ ಅವ ಧಿಯನ್ನು ವಿಸ್ತರಣೆ ಮಾಡುತ್ತದೆಯೋ ಎಂದು ಕಾದು ನೋಡಬೇಕಿದೆ. ಕೂಲಿ ಕೆಲಸಕ್ಕಾಗಿ ಬಂದಿರುವ ಬಯಲು ಸೀಮೆಯ ಕಾರ್ಮಿಕರು ಊರಿಗೆ ಮರಳಬೇಕೇ ಅಥವಾ ಇಲ್ಲಿಯೇ ಕೂಲಿ ಕೆಲಸ ದೊರಕಲಿದೆಯೇ ಎಂಬ ಗೊಂದಲದಲ್ಲಿ ಇದ್ದಾರೆ.

ಬಸ್‌ ಸಂಚಾರ ಸ್ಥಗಿತಗೊಳ್ಳುವುದರಿಂದ ಮುಂದೇನು ಎಂಬುದು ಗೊತ್ತಿಲ್ಲ ಎಂದು ಕೂಲಿ ಕಾರ್ಮಿಕರ ತಂಡದ ಮೇಸ್ತ್ರಿ ಹಾವೇರಿಯ ಹನುಮಂತಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next