ಚಿಕ್ಕಮಗಳೂರು : ರಾಜ್ಯ ಸರ್ಕಾರ ಜು.19 ಮತ್ತು ಜು.22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಅದರಂತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪರೀಕ್ಷೆ ನಡೆಸಲು ಸಕಲ ತಯಾರಿ ನಡೆಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ವಿ. ಮಲ್ಲೇಶಪ್ಪ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 14,116 ವಿದ್ಯಾರ್ಥಿಗಳು 85 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. 12,471 ರೆಗ್ಯುಲರ್ ವಿದ್ಯಾರ್ಥಿಗಳು, 1,250 ಪುನರಾವರ್ತಿತ ವಿದ್ಯಾಥಿ ìಗಳು, 275 ಖಾಸಗಿ ವಿದ್ಯಾರ್ಥಿಗಳು, 111 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು, 4 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದರು.
ಜಿಲ್ಲೆಯ ಶೈಕ್ಷಣಿಕ ವಲಯಗಳಾದ ಬೀರೂರು ವಲಯದಲ್ಲಿ ಈ ಹಿಂದೆ 7 ಪರೀûಾ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ 10 ಪರೀûಾ ಕೇಂದ್ರಗಳನ್ನು ತೆರೆಯಲಾಗಿದ್ದು, 3 ಕೇಂದ್ರಗಳನ್ನು ಹೊಸದಾಗಿ ತೆರೆಯಲಾಗಿದೆ. ಅದರಲ್ಲಿ 2 ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಚಿಕ್ಕಮಗಳೂರು ವಲಯದಲ್ಲಿ ಈ ಹಿಂದೆ 15 ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಈ ಬಾರಿ 19 ಕೇಂದ್ರಗಳನ್ನು ತೆರೆಯಲಾಗಿದ್ದು 4 ಕೇಂದ್ರಗಳನ್ನು ಹೊಸದಾಗಿ ತೆರೆಯಲಾಗಿದೆ. ಅದರಲ್ಲಿ 2 ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ ಎಂದರು.
ಕಡೂರು ಶೈಕ್ಷಣಿಕ ವಲಯದಲ್ಲಿ ಈ ಹಿಂದೆ 10 ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಈ ಬಾರಿ 16 ಪರೀûಾ ಕೇಂದ್ರಗಳನ್ನು ತೆರೆಯಲಾಗಿದ್ದು, 6 ಕೇಂದ್ರಗಳನ್ನು ಹೊಸದಾಗಿ ತೆರೆಯಲಾಗಿದೆ. ಅದರಲ್ಲಿ 2 ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಕೊಪ್ಪ ವಲಯದಲ್ಲಿ ಈ ಹಿಂದೆ 4 ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಈ ಬಾರಿ 7 ಕೇಂದ್ರಗಳನ್ನು ತೆರೆಯಲಾಗಿದ್ದು, 3 ಕೇಂದ್ರಗಳನ್ನು ಹೊಸದಾಗಿ ತೆರೆಯಲಾಗಿದೆ. 2 ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ನರಸಿಂಹರಾಜಪುರ ಶೈಕ್ಷಣಿಕ ವಲಯದಲ್ಲಿ ಈ ಹಿಂದೆ 4 ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಈ ಬಾರಿ 6 ಪರೀûಾ ಕೇಂದ್ರಗಳನ್ನು ತೆರೆಯಲಾಗಿದ್ದು, ಹೊಸದಾಗಿ 2 ಕೇಂದ್ರಗಳನ್ನು ತೆರೆಯಲಾಗಿದೆ. 2 ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ ಎಂದರು. ಶೃಂಗೇರಿ ಶೈಕ್ಷಣಿಕ ವಲಯದಲ್ಲಿ ಈ ಹಿಂದೆ 2 ಕೇಂದ್ರಗಳನ್ನು ತೆರೆಯಲಾಗುತ್ತಿತ್ತು.
ಈ ಬಾರಿ 3 ಕೇಂದ್ರಗಳನ್ನು ತೆರೆಯಲಾಗಿದ್ದು, 1 ಕೇಂದ್ರವನ್ನು ಹೊಸದಾಗಿ ತೆರೆಯಲಾಗಿದೆ. 1 ಕೇಂದ್ರವನ್ನು ಕಾಯ್ದಿರಿಸಲಾಗಿದೆ. ಮೂಡಿಗೆರೆ ಶೈಕ್ಷಣಿಕ ವಲಯದಲ್ಲಿ ಈ ಹಿಂದೆ 6 ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಈ ಬಾರಿ 9 ಕೇಂದ್ರಗಳನ್ನು ತೆರೆಯಲಾಗಿದ್ದು, 3 ಕೇಂದ್ರಗಳನ್ನು ಹೊಸದಾಗಿ ತೆರೆಯಲಾಗಿದೆ. 2 ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ತರೀಕೆರೆ ವಲಯದಲ್ಲಿ ಈ ಹಿಂದೆ 10 ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಈ ಬಾರಿ 15 ಕೇಂದ್ರಗಳನ್ನು ತೆರೆಯಲಾಗಿದ್ದು, 5 ಕೇಂದ್ರಗಳನ್ನು ಹೊಸದಾಗಿ ತೆರೆಯಲಾಗಿದೆ. 2 ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ ಎಂದರು.
1,300 ಕೊಠಡಿಗಳು, 14,114 ವಿದ್ಯಾರ್ಥಿಗಳು, 1,346 ಕೊಠಡಿ ಮೇಲ್ವಿಚಾರಕರು, 95 ಅ ಧೀಕ್ಷಕರು, 85 ಕಸ್ಟೋಡಿಯನ್ನರು, 95ಕ್ಲಾರ್ಕ್, 85 ಸ್ಥಾನಿಕ ಜಾಗೃತಿ ದಳ, ಅನ್ಯ ಇಲಾಖೆಯ ವೀಕ್ಷಕರು 85, 30 ರೂಟ್‌ಗಳಿಗೆ ವಾಹನ, 30 ರೂಟ್ , 30 ಡ್ರೈವರ್‌ಗಳು, 170 ವಾಟರ್ ಬಾಯ್ಸಗಳು, 200 ಆರೋಗ್ಯ ಸಹಾಯಕರು, 350 ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, 40 ಅ ಧಿಕಾರಿಗಳು, 200 ಇಲಾಖಾ ಸ್ವಾಡ್‌ಗಳನ್ನು ಪರೀûಾ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದರು.