Advertisement
ಇತ್ತೀಚೆಗೆ “ಬೀಟಮ್ಮ ಗ್ಯಾಂಗ್’ (ಅರಣ್ಯ ಇಲಾಖೆ ಇಟ್ಟ ಹೆಸರು) ಕಾಡಾನೆಗಳ ಹಿಂಡು ಇಲ್ಲಿನ ಜನರ ನಿದ್ದೆಗೆಡಿಸಿತ್ತು. ಒಂಟಿ ಸಲಗವೊಂದು ಈ ಭಾಗದಲ್ಲಿ ಸಂಚರಿಸುತ್ತಲೇ ಇದೆ. ಕಾಡಾನೆಗಳು ಮಾನವ ಜೀವಕ್ಕೆ ಹಾನಿ ಮಾಡುತ್ತಿರುವುದಲ್ಲದೆ ರೈತರು ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತಿವೆ. ಕಾಡಾನೆಗಳ ಹಾವಳಿ ಮಲೆನಾಡಿನ ಜನರಿಗೆ ದೊಡ್ಡ ತಲೆನೋವಾಗಿದೆ. ಜಿಲ್ಲೆಯ ಚಿಕ್ಕಮಗಳೂರು ವಿಭಾಗದಲ್ಲಿ ಕಳೆದ ಐದು ವರ್ಷಗಳಲ್ಲಿ ಕಾಡಾನೆ 15 ಜನರನ್ನು ಬಲಿ ಪಡೆದಿವೆ.ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಗಟ್ಟಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನ ಕಾಣುತ್ತಿಲ್ಲ.
ಮೂಡಿಗೆರೆ ತಾಲೂಕು ಊರುಬಗೆಯ ಕುಂಬರಡಿ ಗ್ರಾಮದ ಸುನಿಲ್ 2018ರ ಅ.23ರಂದು ಕಾಡಾನೆ ದಾಳಿಗೆ ಮೃತಪಟ್ಟಿದ್ದರೆ, 2019ರ ಜ.22ರಂದು ಜಾಗರ ಹೋಬಳಿ ಗೊಣಕಲ್‌ನ ಕುಮಾರನಾಯ್ಕ, ಮಲ್ಲೇನಹಳ್ಳಿಯ ಪ್ರೇಮನಾಥ, 2019ರ ಮಾ.10ರಂದು ಮೂಡಿಗೆರೆ ತಾಲೂಕು ಕೋಗಿಲೆಯ ಜಯಮ್ಮ 2019ರ ಜು.30ರಂದು, ಶಿರಗೂರಿನ ರಂಗಯ್ಯ, 2019ರ ನ.11ರಂದು, 2021 ಜು. 5ರಂದು ಅರಣ್ಯ ರಕ್ಷಕ ಪುಟ್ಟರಾಜು ಗಲ್ಲನ್‌ಪೇಟೆ ಕಾಡಾನೆಯನ್ನು ಕಾಡಿಗಟ್ಟಲು ತೆರಳಿದ್ದ ವೇಳೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. 2022ರ ಮಾ.26ರಂದು, ಕೆಳಗೂರು ಕಬ್ಬಿಣ ಸೇತುವೆ ಸಮೀಪ ಸರೋಜಬಾಯಿ ಆನೆ ದಾಳಿಗೆ ಸಿಲುಕಿ ಮೃತಟ್ಟಿದ್ದಾರೆ. ಮೂಡಿಗೆರೆ ಕೆಂಜಿಗೆ ಗ್ರಾಮದಲ್ಲಿ 2022ರ ಆ.15ರಂದು ಆನಂದ ದೇವಾಡಿಗ, ಮೂಡಿಗೆರೆ ತಾಲೂಕು ಊರುಬಗೆ ಕುಂಬರಡಿಯ ಅರ್ಜುನ್ 2022ರ ಸೆ.8ರಂದು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. 2022 ನ.20ರಂದು ಕುಂದೂರಿನ ಶೋಭಾ, ಅರೆನೂರು ಬಳಿ ಕಿನ್ನಿ 2023ರ ಜು.5ರಂದು, ಹೆಡದಾಳು ಬಳಿ ಮೀನಾ 2023ರ ಜ.8ರಂದು, ಆನೆ ನಿಗ್ರಹ ಪಡೆಯ ದಿನಗೂಲಿ ನೌಕರ ಕಾರ್ತಿಕ್ ಗೌಡ 2023ರ ನ.22ರಂದು ಮೃತಪಟ್ಟಿದ್ದಾರೆ.
Related Articles
Advertisement