Advertisement

ಲಾಕ್‌ ಡೌನ್‌ ನಿಯಮದಲ್ಲಿ ಮಾರ್ಪಾಡು

09:21 PM Jun 06, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜೂ.14ರ ಬೆಳಗ್ಗೆ 6 ಗಂಟೆಯವರೆಗೂ ಜಿಲ್ಲೆಗೆ ಅನ್ವಯವಾಗುವಂತೆ ಕೆಲವು ನಿರ್ಬಂಧಗಳನ್ನು ಸೇರ್ಪಡಿಸಿ ಕಠಿಣ ನಿಯಮಗಳನ್ನು ಜಾರಿಗೊಳಿಸಿ ಜಿಲ್ಲಾ ಧಿಕಾರಿ ಕೆ.ಎನ್‌. ರಮೇಶ್‌ ಆದೇಶಿಸಿದ್ದಾರೆ.

Advertisement

ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ವಾಣಿಜ್ಯ, ಕೈಗಾರಿಕಾ ಚಟುವಟಿಕೆಗಳನ್ನು ನಿರ್ಬಂ ಧಿಸಲಾಗಿದೆ. ದಿನಸಿ, ತರಕಾರಿ, ಹಣ್ಣು ಮೀನು ಮಾಂಸದ ಅಂಗಡಿಗಳು ಬೆಳಗ್ಗೆ 6ಗಂಟೆಯಿಂದ 10ಗಂಟೆಯವರೆಗೂ ತೆರೆಯಲು ಅವಕಾಶ ನೀಡಲಾಗಿದ್ದು ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಜನರ ಓಡಾಟವನ್ನು ನಿರ್ಬಂ  ಧಿಸಲಾಗಿದೆ ಎಂದು ತಿಳಿಸಿದ್ದಾರೆ.

ತಳ್ಳುಗಾಡಿ ಮತ್ತು ಗೂಡ್ಸ್‌ ವಾಹನಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಹಾಪ್‌ಕಾಮ್ಸ್‌ಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ವಾಹನಗಳಲ್ಲಿ ತರಕಾರಿ, ಹಣ್ಣು-ಹಂಪಲುಗಳನ್ನು ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ದು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಪ್‌ ಕಾಮ್ಸ್‌ ಸಾರ್ವಜನಿಕವಾಗಿ ಮಾರಾಟಕ್ಕೆ ನಿರ್ಬಂ ಧಿಸಲಾಗಿದೆ ಎಂದು ಹೇಳಿದ್ದಾರೆ.

ಸೂಪರ್‌ ಮಾರ್ಕೆಟ್‌ ಮತ್ತು ಮಾಲ್‌ ಗಳು ಹೋಮ್‌ಡೆಲಿವರಿಗೆ ಹಾಗೂ ಮದ್ಯದಂಗಡಿಗಳು ಬೆಳಗ್ಗೆ 6ಗಂಟೆಯಿಂದ 10 ಗಂಟೆಯವರೆಗೂ ಮಾರಾಟ ಮಾಡಲು ಅವಕಾಶವಿದೆ. ಪಾರ್ಸೆಲ್‌ಗೆ ಮಾತ್ರ ಅವಕಾಶವಿದೆ. ರಸಗೊಬ್ಬರದಂಗಡಿಗಳು ಬೆಳಗ್ಗೆ 6ಗಂಟೆಯಿಂದ 10 ಗಂಟೆಯವರೆಗೂ ತೆರೆಯಬಹುದಾಗಿದೆ. ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕೃಷಿ ಚಟುವಟಿಕೆ ಕೈಗೊಳ್ಳಬಹುದಾಗಿದೆ.

ತೋಟ ಕಾರ್ಮಿಕರನ್ನು ವಾಹನದಲ್ಲಿ ಕರೆದೊಯ್ಯುವುದು ನಿರ್ಬಂ ಧಿಸಲಾಗಿದೆ. ಬ್ಯಾಂಕ್‌, ಇನ್ಶೂರೆನ್ಸ್‌ ಕಚೇರಿಗಳು, ಗ್ರಾಮ ಒನ್‌ ಕೇಂದ್ರಗಳು, ಎಟಿಎಂಗಳು, ಪೋಸ್ಟ್‌ ಆμàಸ್‌ಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ತೆರೆಯಲು ಅನುಮತಿಸಿದೆ. ಕಚೇರಿಗಳಲ್ಲಿ ಕನಿಷ್ಟ ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

Advertisement

ಆಹಾರ ಸಂಸ್ಕರಣಾ ಘಟಕಗಳು ಮತ್ತು ಅದಕ್ಕೆ ಸಂಬಂಧಿ ಸಿದ ಕೈಗಾರಿಕೆಗಳು ಮತ್ತು ಕಾμ ಕ್ಯೂರಿಂಗ್‌ ಮತ್ತು ಪ್ರೊಸೆಸಿಂಗ್‌ ಸೆಂಟರ್‌ಗಳಲ್ಲಿ ಕನಿಷ್ಠ ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಲು ಮತ್ತು ಈ ಕೇಂದ್ರದಿಂದ ಸರಕು ಸಾಗಾಟ ಸೇರಿದಂತೆ ಅನುಮತಿಸಲಾಗಿದೆ. ಈ ಕೇಂದ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ದೃಢೀಕರಣ ಗುರುತಿನ ಚೀಟಿಯನ್ನು ಕೆಲಸಕ್ಕೆ ನಿರ್ವಹಿಸುವ ಸ್ಥಳಕ್ಕೆ ಹೋಗುವಾಗ ಮತ್ತು ಮನೆಗೆ ವಾಪಸ್‌ ತೆರಳುವ ಸಂದರ್ಭದಲ್ಲಿ ತಪಾಸಣಾ ಸಿಬ್ಬಂದಿಗಳಿಗೆ ಹಾಜರು ಪಡಿಸಿದಲ್ಲಿ ಮಾತ್ರ ಅವಕಾಶ ನೀಡಲಾಗುವುದು ಎಂದಿದ್ದಾರೆ.

ರಫ್ತುಗಳಲ್ಲಿ ನೇರವಾಗಿ ತೊಡಗಿರುವ ಎಲ್ಲಾ ಘಟಕಗಳು, ಸಂಸ್ಥೆಗಳಲ್ಲಿ ಕೋವಿಡ್‌-19 ಮಾರ್ಗಸೂಚಿಗಳನ್ನು ಅನುಸರಿಸಿ ಶೇ.30ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅ ಸೂಚಿಸಿ ಅನುಮತಿಸುವ ಪಟ್ಟಿಯಲ್ಲಿನ ಎಲ್ಲಾ ಘಟಕ, ಸಂಸ್ಥೆಗಳಲ್ಲಿ 1000ಕ್ಕಿಂತ ಹೆಚ್ಚು ಸಿಬ್ಬಂದಿಗಳಿದ್ದಲ್ಲಿ ಅಂತಹ ಘಟಕ,ಸಂಸ್ಥೆಗಳಲ್ಲಿ ಶೇ.10ರಷ್ಟು ಸಿಬ್ಬಂದಿಗಳಿಗೆ ವಾರದಲ್ಲಿ ಎರಡು ಸಲ ಕೋವಿಡ್‌-19 ತಪಾಸಣೆ ಮಾಡಿಸತಕ್ಕದ್ದು ಮತ್ತು ಗಾರ್ಮೆಂಟ್ಸ್‌ ರಫ್ತು ಘಟಕಗಳಿಗೆ ಸಂಬಂ  ಧಿಸಿದಂತೆ ಸರ್ಕಾರದಿಂದ ಪ್ರತ್ಯೇಕ ಎಸ್‌ಒಪಿಗಳನ್ನು ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮದುವೆ ಸಮಾರಂಭದಲ್ಲಿ 10 ಜನ ಭಾಗವಹಿಸಲು ಅವಕಾಶ ನೀಡಲಾಗಿದ್ದು, ಉಳಿದ ಧಾರ್ಮಿಕ ಸಭೆ- ಸಮಾರಂಭಗಳನ್ನು ಜೂ.14ರ ಬೆಳಗ್ಗೆ 6ಗಂಟೆವರೆಗೂ ನಿರ್ಬಂಧಿ ಸಲಾಗಿದೆ. ಹೊಟೇಲ್‌ ಮತ್ತು ರೆಸ್ಟೋರೆಂಟ್‌ ಗಳಲ್ಲಿ ಹೋಂ ಡೆಲಿವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ನ್ಯಾಯಾಲಯಗಳು ಉತ್ಛ ನ್ಯಾಯಾಲಯವು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಶೇ.50ರಷ್ಟು ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುವುದು ಮತ್ತು ಅ ಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯ ವಾಗಿ ಹೊಂದಿರಬೇಕು. ಅಂತರ್‌ ರಾಜ್ಯ ಮತ್ತು ಅಂತರ್‌ ಜಿಲ್ಲಾ ವ್ಯಕ್ತಿಗಳ ಸಂಚಾರವನ್ನು ಸರ್ಕಾರದ ಆದೇಶದನ್ವಯ ಅನುಮತಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next