Advertisement

ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ

09:42 PM Jun 02, 2021 | Team Udayavani |

ಚಿಕ್ಕಮಗಳೂರು: ಕೋವಿಡ್‌ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ 12ದಿನಗಳ ಕಠಿಣ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಸಿ ಪರಿಷ್ಕೃತ ಆದೇಶ ನೀಡಿದ್ದು, ಅಗತ್ಯ ವಸ್ತು ಖರೀದಿ, ಹಣ್ಣು, ತರಕಾರಿ, ಮೀನು- ಮಾಂಸ ಹಾಗೂ ಮದ್ಯ ಖರೀದಿಗೆ ಅವಕಾಶ ನೀಡಿದ್ದು ಮಂಗಳವಾರ ಜನರು ಖರೀದಿಗೆ ಮುಂದಾದರು.

Advertisement

ಜಿಲ್ಲಾದ್ಯಂತ ಮೇ 20ರಿಂದ ಜೂ.1ರ ಬೆಳಗ್ಗೆ 6ಗಂಟೆಯವರೆಗೂ ಕಠಿಣ ಲಾಕ್‌ಡೌನ್‌ ವಿ ಧಿಸಲಾಗಿತ್ತು. ಈ ಸಂದರ್ಭದಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೂ ಪರದಾಡುವ ಪರಿಸ್ಥತಿ ಉಂಟಾಗಿತ್ತು. ಜೂ.1ರಿಂದ ಜೂ.7ರವರೆಗೂ ಕಠಿಣ ನಿರ್ಬಂಧಗಳನ್ನು ಜಿಲ್ಲಾಡಳಿತ ಮುಂದುವರಿಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ಗಂಟೆಯಿಂದ 10 ಗಂಟೆಯವರೆಗೂ ಅವಕಾಶ ನೀಡಿ ಜಿಲ್ಲಾಡಳಿತ ಪರಿಷ್ಕೃತ ಆದೇಶವನ್ನು ಸೋಮವಾರ ಹೊರಡಿಸಿದ್ದು, ಮಂಗಳವಾರ ಬೆಳಗ್ಗೆಯೇ ಅಗತ್ಯ ವಸ್ತುಗಳನ್ನು ಖರೀದಿಸಿದರು.

12 ದಿನಗಳಿಂದ ಬಾಗಿಲು ಮುಚ್ಚಿದ ಅಂಗಡಿ- ಮುಂಗಟ್ಟುಗಳು ಮಂಗಳವಾರ ಬೆಳಗ್ಗೆ ಬಾಗಿಲು ತೆರೆದು ವ್ಯಪಾರ ವಹಿವಾಟು ನಡೆಸಿದವು. ಹಣ್ಣು, ತರಕಾರಿ, ದಿನಸಿ ಅಂಗಡಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಯ ಕಡೆ ಹೆಜ್ಜೆ ಹಾಕಿದರು. 12 ದಿನಗಳಿಂದ ಮೀನು ಮಾಂಸದ ಅಂಗಡಿಗಳು ಮುಚ್ಚಿದ್ದು, ಮಂಗಳವಾರ ಬೆಳಗ್ಗೆ ಅಂಗಡಿಗಳು ಬಾಗಿಲು ತೆರೆಯುತ್ತಿದ್ದಂತೆ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಂತು ಮೀನು ಮಾಂಸವನ್ನು ಖರೀದಿಸಿದರು.

ಒಮ್ಮೆಲೇ ಅಂಗಡಿಗಳಲ್ಲಿ ಜಮಾಯಿಸಿದ್ದರಿಂದ ಜನಜಂಗುಳಿ ಉಂಟಾಗಿತ್ತು. ಜಿಲ್ಲಾಡಳಿತದ ಕಠಿಣ ಲಾಕ್‌ಡೌನ್‌ನಿಂದ ಬಾಗಿಲು ಹಾಕಿದ್ದ ಮದ್ಯದಂಗಡಿಗಳು ಮಂಗಳವಾರ ಬೆಳಗ್ಗೆ 6ರಿಂದ 10ಗಂಟೆಯವರೆಗೂ ವ್ಯಾಪಾರ ನಡೆಸಲು ಅವಕಾಶ ನೀಡಿದ್ದು ಮದ್ಯಪ್ರಿಯರು ಮದ್ಯ ಖರೀದಿಗೆ ಮುಂದಾದರು. ಅವ ಧಿ ಮುಗಿಯುತ್ತಿದ್ದಂತೆ ಪೊಲೀಸರು ವಾಹನ ಸಂಚಾರವನ್ನು ನಿಯಂತ್ರಿಸಿದರು.

ಗೂಡ್ಸ್‌ ವಾಹನದಲ್ಲಿ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ನೀಡಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಾರ ನಡೆಸಿದರು. ನಗರ ಪ್ರದೇಶದಲ್ಲಿ ತಳ್ಳುಗಾಡಿ ಮತ್ತು ಗೂಡ್ಸ್‌ಗಳಲ್ಲಿ ಹಣ್ಣು- ತರಕಾರಿಯನ್ನು ಬೆಳಗ್ಗೆ 6ಗಂಟೆಯಿಂದ ಸಂಜೆ 6 ಗಂಟೆವರೆಗೂ ವ್ಯಾಪಾರ ನಡೆಸಲು ಅವಕಾಶ ನೀಡಿದ್ದು, ತಳ್ಳುಗಾಡಿ ಮತ್ತು ಗೂಡ್ಸ್‌ ವಾಹನಗಳಲ್ಲಿ ವ್ಯಾಪಾರ ನಡೆಸಿದರು.

Advertisement

ಹೊಟೇಲ್‌ಗ‌ಳಲ್ಲಿ ಊಟ, ಉಪಾಹಾರ ಪಾರ್ಸಲ್‌ಗೆ ಅವಕಾಶ ನೀಡಲಾಗಿದ್ದು, ಊಟ ತಿಂಡಿಯನ್ನು ಹೊಟೇಲ್‌ನಿಂದ ಪಾರ್ಸಲ್‌ ಪಡೆದು ಮನೆಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಹಾತ್ಮ ಗಾಂಧಿ  ರಸ್ತೆಯಲ್ಲಿ ಬೆಳಗ್ಗೆ ವಾಹನ ದಟ್ಟಣೆ ಇದ್ದು, 10 ಗಂಟೆಯ ನಂತರ ವಿರಳವಾಗಿತ್ತು. ಮಲ್ಲಂದೂರು ರಸ್ತೆಬದಿಗಳಲ್ಲಿ ತಳ್ಳುಗಾಡಿಗಳಲ್ಲಿ ಹಣ್ಣು- ತರಕಾರಿ ವ್ಯಾಪಾರ ನಡೆಸಿದರು. ಬ್ಯಾಂಕ್‌, ಆಸ್ಪತ್ರೆಗಳು, ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಗ್ರಾಮೀಣ ಪ್ರದೇಶಗಳಲ್ಲೂ ಬೆಳಗ್ಗೆ 6ಗಂಟೆಯಿಂದ 10 ಗಂಟೆಯವರೆಗೂ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಅಗತ್ಯ ವಸ್ತುಗಳನ್ನು ಖರೀದಿಸಿದರು. 10 ಗಂಟೆಯ ನಂತರ ವಾಹನ ಮತ್ತು ಜನಸಂಚಾರವನ್ನು ಸಂಪೂರ್ಣ ನಿರ್ಬಂ ಧಿಸಲಾಯಿತು. ಕೋವಿಡ್‌ ಸೋಂಕಿನ ಭಯದಿಂದ ಅಗತ್ಯ ವಸ್ತುಗಳನ್ನು ಖರೀದಿಸಿದ ಬಹುತೇಕ ಜನರು ನಂತರ ಮನೆಗಳಲ್ಲೇ ಕಾಲ ಕಳೆದರು.

ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕೃಷಿ ಚಟುವಟಿಕೆಗೆ ಜಿಲ್ಲಾಡಳಿತ ಅವಕಾಶ ನೀಡಿದ್ದು, ಈಗಾಗಲೇ ಜಿಲ್ಲಾದ್ಯಂತ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಮಗ್ನರಾಗಿದ್ದರು. ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಜನರ ಓಡಾಟವನ್ನು ನಿರ್ಬಂ ಧಿಸಿದ್ದು ನಗರ ಪ್ರದೇಶದ ಜನರು ಗ್ರಾಮೀಣ ಪ್ರದೇಶದತ್ತ ಮುಖ ಮಾಡಲಿಲ್ಲ, ಗ್ರಾಮೀಣ ಪ್ರದೇಶದಲ್ಲೂ ಜನಸಂಚಾರ ಕಡಿಮೆ ಇತ್ತು.

ಗ್ರಾಮೀಣ ಪ್ರದೇಶ ಸೇರಿದಂತೆ ಪಟ್ಟಣ ಪ್ರದೇಶದಲ್ಲೂ ವಾಹನ ಸಂಚಾರವನ್ನು ನಿರ್ಬಂ  ಧಿಸಿದ್ದು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯ ಮುಂದುವರಿದಿತ್ತು. ಪೊಲೀಸ್‌ ಸಿಬ್ಬಂದಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಚೆಕ್‌ಪೋಸ್‌ rಗಳಲ್ಲಿ ನಿಯೋಜಿಸಿದ್ದು ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ದಂಡ ವಿ ಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next