ಕೊಪ್ಪ: ತೀರಾ ಆರೋಗ್ಯ ಹದಗೆಟ್ಟು, ಹೆಚ್ಚು ಆಕ್ಸಿಜನ್ ಆವಶ್ಯಕತೆ ಇರುವಂತಹ ಸೋಂಕಿತರನ್ನು ತಾಲೂಕು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುವುದು ಸೂಕ್ತವಲ್ಲ. ಅಂತಹ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿ ಎಂದು ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್ ವೈದ್ಯಾಧಿ ಕಾರಿಗೆ ಸೂಚಿಸಿದರು.
ಬಾಳಗಡಿಯಲ್ಲಿರುವ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊಪ್ಪ, ಶೃಂಗೇರಿ, ಎನ್.ಆರ್. ಪುರ ತಾಲೂಕುಗಳ ಕೊರೊನಾ ತುರ್ತುಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಇತಿಮಿತಿಯನ್ನು ನೋಡಿಕೊಂಡು ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ತಿಳಿದು ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಬೇಕು. ಜಿಲ್ಲಾಸ್ಪತ್ರೆಯಲ್ಲಿ ಸಮಸ್ಯೆಗಳು ಕಂಡುಬಂದಲ್ಲಿ ನನಗೆ ತಿಳಿಸಿ ಎಂದರು. ಆಕ್ಸಿಜನ್ ಪ್ಲಾಂಟ್ ಜಿಲ್ಲೆಯಲ್ಲಿ ಇಲ್ಲ. ಭದ್ರಾವತಿಯಿಂದ ಪೂರೈಕೆಯಾಗುತ್ತಿದೆ. ಆಕ್ಸಿಜನ್ ತುರ್ತು ಆವಶ್ಯಕತೆಯ ಬಗ್ಗೆ ನನಗೆ ನಾಲ್ಕು ಗಂಟೆಯ ಮೊದಲೇ ತಿಳಸಬೇಕು.
ಕೊನೆ ಕ್ಷಣದಲ್ಲಿ ಮಾಹಿತಿ ನೀಡಬಾರದು ಎಂದರು. ಡಾ| ಗಾನವಿ ಮಾತನಾಡಿ, ಆಸ್ಪತ್ರೆಯಲ್ಲಿ 36 ಸಿಲಿಂಡರ್ ಇದೆ. ಆದರಲ್ಲಿ 17 ಸಿಲಿಂಡರ್ μಲಿಂಗ್‌ಗೆ ಹೋಗಿದೆ. ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಹತ್ತು ಸೋಂಕಿತರಿಗೆ ಬೆಡ್ ಇಲ್ಲದಿರುವ ಕಾರಣ ಅವರಿಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಆದರಿಂದ ಹೆಚ್ಚು ಸಿಲಿಂಡರ್‌ಗಳು ಖಾಲಿಯಾಗಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಶಿಫ್ಟ್ ಆಗುತ್ತಾ ಇರುತ್ತದೆ. ಅಂತಹ ಸಮಸ್ಯೆ ಇರುರುವುದಿಲ್ಲ. ನೀವು ನನ್ನ ಗಮನಕ್ಕೆ ತನ್ನಿರಿ. ಹತ್ತು ಜನರಿಗೆ ಇಲ್ಲಿಯೇ ಚಿಕಿತ್ಸೆ ನೀಡಿರುವುದು ಸರಿಯಲ್ಲ. ಅವರ ಜೀವಕ್ಕೆ ಹೊಣೆ ಯಾರು ಎಂದು ಸಭೆಯಲ್ಲಿ ಪ್ರಶ್ನಿಸಿದರು. ತುರ್ತು ಸಮಯ 4ರಿಂದ 6 ಸಿಲಿಂಡರ್ ಹೆಚ್ಚಾಗಿ ಬೇಕಾಗುತ್ತದೆ. ಇದರಿಂದ ಬೇರೆಯರಿಗೆ ಸಮಸ್ಯೆಯಾಗುತ್ತದೆ ಎಂದರು.
ಕೊಪ್ಪ, ಶೃಂಗೇರಿ, ಎನ್.ಆರ್. ಪುರ ತಾಲೂಕುಗಳ ಅಧಿ ಕಾರಿಗಳ ಜೊತೆ ಚರ್ಚಿಸಿ, ಕೊರೊನಾ ಸೋಂಕಿರ ಸಂಖ್ಯೆ ಹಾಗೂ ಪ್ರಾಥಮಿಕ ಸಂಪರ್ಕ ಕುರಿತು ಮಾಹಿತಿಯನ್ನು ಕೇಳಿದರು. ಈ ವೇಳೆ ಅ ಧಿಕಾರಿಗಳು ಸಮರ್ಪಕ ಮಾಹಿತಿ ನೀಡುವಲ್ಲಿ ಎಡವಿದ್ದಾರೆ ಎಂದು ತಿಳಿದಿದೆ. ಮೂರು ತಾಲೂಕುಗಳಲ್ಲಿ ಯಾವ ಪ್ರದೇಶದಲ್ಲಿ ಹೆಚ್ಚು ಸೋಂಕಿತರು ಇದ್ದಾರೆ. ಸೋಂಕು ಉಲ್ಬಣವಾಗದಂತೆ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದಾರೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ. ಅತಿವೃಷ್ಠಿಯ ಬಗ್ಗೆಯೂ ತಾಲೂಕು ಅ ಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಚರ್ಚೆ ನಡೆಸಿದ್ದಾರೆ.
ಯಾವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಕರಡು ಸಿದ್ಧಪಡಿಸುವಂತೆ ಅಧಿ ಕಾರಿಗೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಎಸ್.ಪಿ. ಅಕ್ಷಯ್ ಎಂ.ಎಚ್., ಡಿಎಚ್‌ಒ ಉಮೇಶ್, ಕೊಪ್ಪ ತಹಶೀಲ್ದಾರ್ ಪರಮೇಶ್, ಇಒ ನವೀನ್ ಕುಮಾರ್, ಶೃಂಗೇರಿ ತಹಶೀಲ್ದಾರ್, ಇಒ, ಎನ್.ಆರ್. ಪುರ ಇಒ, ವಿವಿಧ ಭಾಗದ ರಾಜಸ್ವ ನಿರೀಕ್ಷಕರು ಇದ್ದರು.