ಚಿಕ್ಕಮಗಳೂರು : 4 ದಶಕದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಮಠದ ಮನೆಯವರು ಹಾಗೂ ಬಡಾಮಕಾನ್ ನಡುವಿನ ಆಸ್ತಿ ವಿವಾದ ಇಂದು ವಿರೋಧದ ನಡುವೆಯೇ ಸರ್ವೇ ಕಾರ್ಯ ಆರಂಭಗೊಂಡಿದೆ.
ಚಿಕ್ಕಮಗಳೂರು ನಗರದಲ್ಲಿರುವ ಹನುಮಂತಪ್ಪ ವೃತ್ತದ ಬಳಿಯಲ್ಲಿರುವ ಜಾಗ ವಿವಾದದಲ್ಲಿದ್ದು ಸರ್ವೇ ನಡೆಸುವಂತೆ ಮಠದ ಮನೆಯವರ ಆಡಳಿತ ಮಂಡಳಿಯ ನಂಜಪ್ಪ ಎನ್ನುವವರು ಮನವಿ ಸಲ್ಲಿಸಿದ್ದರು ಅದರಂತೆ ನಗರಸಭೆಯಿಂದ ಸರ್ವೇ ಕಾರ್ಯ ಆರಂಭಗೊಂಡಿದೆ.
ಈ ವೇಳೆ ಇನ್ನೊಂದು ಗುಂಪು ಸರ್ವೇ ನಡೆಸಲು ವಿರೋಧ ವ್ಯಕ್ತಪಡಿಸಿದ್ದಾರೆ, ಆದರೆ ನಗರ ಸಭೆಯವರು ಬಿಗಿಪೊಲೀಸ್ ಬಂದೊಬಸ್ತ್ ನಲ್ಲಿ ಸರ್ವೇ ಕಾರ್ಯ ಆರಂಭಗೊಳಿಸಿದ್ದಾರೆ.
ನಗರದ ಹೃದಯದ ಭಾಗದಲ್ಲೇ ಇರುವ ಒಂದು ಲಕ್ಷ ಚದರ ಅಡಿ ಆಸ್ತಿಯು ಕಳೆದ ನಾಲ್ಕು ದಶಕಗಳಿಂದ ವಿವಾದದ ಕೇಂದ್ರಬಿಂದುವಾಗಿತ್ತು.
ಸ್ಥಳದಲ್ಲಿ ಎಸಿ ನಾಗರಾಜ್, ತಹಶೀಲ್ದಾರ್ ಕಾಂತರಾಜ್ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ : ವೃದ್ಧ ದಂಪತಿಗಳ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ