ಚಿಕ್ಕಮಗಳೂರು: ಹಲವು ತಿಂಗಳ ಹಿಂದೆ ಮೃತ ಯುವತಿಯೊಬ್ಬರ ಅಂಗಾಗ ರವಾನೆ ಮಾಡಿ ಸುದ್ದಿಯಾಗಿದ್ದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಇದೀಗ ಮತ್ತೆ ಅದೇ ಕಾರಣಕ್ಕೆ ಸುದ್ದಿಯಲ್ಲಿದೆ.
ಬ್ರೈನ್ ಟ್ಯೂಮರ್ ನಿಂದ ಸಾವನ್ನಪ್ಪಿದ ಮಹಿಳೆಯ ಅಂಗಾಂಗ ರವಾನೆ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆಯಲಾಗಿದೆ.
ಬ್ರೈನ್ ಟ್ಯೂಮರ್ ನಿಂದ ಸಾವನ್ನಪ್ಪಿದ ಸಹನಾ ಮೊಸೆಸ್ ಎಂಬಾಕೆಯ ಅಂಗಾಂಗಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ತಯಾರಿ ಮಾಡಲಾಗುತ್ತಿದೆ.
ಇದನ್ನೂ ಓದಿ:Nagarahole Tiger Reserve; ಬೇಟೆಗಾಗಿ ಮರಿಯೊಂದಿಗೆ ಕಾಯುತ್ತಿರುವ ತಾಯಿ ಹುಲಿ
ಕಾಂಗ್ರೆಸ್ ಜಿಲ್ಲಾ ವಕ್ತಾರ, ನಗರಸಭೆ ಮಾಜಿ ಸದಸ್ಯ ರೂಬೆನ್ ಮೊಸಸ್ ಪತ್ನಿ ಸಹನಾ ಅವರು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದರು. ಅವರ ಕಣ್ಣು, ಕಿಡ್ನಿ ಹಾಗೂ ಲಿವರ್ ಸೇರಿ ಒಟ್ಟು ಐದು ಅಂಗಗಳನ್ನು ಬೆಂಗಳೂರು, ಮಂಗಳೂರಿಗೆ ರವಾನೆ ಮಾಡಲಾಗುತ್ತಿದೆ.
ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ರವಾನೆ ಮಾಡಿದ ಮೊದಲ ಜಿಲ್ಲೆ ಎಂಬ ಖ್ಯಾತಿ ಪಡೆದಿದ್ದು, ಒಂಬತ್ತು ತಿಂಗಳ ಹಿಂದೆ ಯುವತಿ ರಕ್ಷಿತಾಬಾಯಿ ಅಂಗಾಂಗಗಳನ್ನು ಬೆಂಗಳೂರಿಗೆ ರವಾನಿಸಲಾಗಿತ್ತು.