Advertisement

ಕಾಫಿ ನಾಡಿಗೆ ಪ್ರವಾಸಿಗರ ಲಗ್ಗೆ

03:21 PM Aug 15, 2022 | Team Udayavani |

ಚಿಕ್ಕಮಗಳೂರು: ವಾರಾಂತ್ಯ ಮತ್ತು ಸ್ವಾತಂತ್ರÂಅಮೃತ ಮಹೋತ್ಸವ ಸಾಲು ಸಾಲು ರಜೆಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ವಿವಿಧೆಡೆಯಿಂದಪ್ರವಾಸಿಗರ ದಂಡು ಕಾμನಾಡಿಗೆ ಲಗ್ಗೆ ಇಟ್ಟಿದೆ.ಶನಿವಾರ, ಭಾನುವಾರ ಹಾಗೂ ಸೋಮವಾರಸ್ವಾತಂತ್ರÂ ದಿನಾಚರಣೆ ರಜೆ ಇರುವುದರಿಂದಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಶೃಂಗೇರಿಶಾರದಾಂಬಾ ದೇವಸ್ಥಾನ, ಹೊರನಾಡು,ಕೆಮ್ಮಣ್ಣುಗುಂಡಿ, ಭದ್ರಾ ಅಭಯಾರಣ್ಯಸೇರಿದಂತೆ ವಿವಿಧ ಪ್ರವಾಸಿ ಕೇಂದ್ರಗಳಿಗೆಪ್ರವಾಸಿಗರು ಹರಿದು ಬಂದಿದ್ದಾರೆ.

Advertisement

ಶನಿವಾರವೇ ಪ್ರವಾಸಿಗರು ಚಿಕ್ಕಮಗಳೂರುನಗರಕ್ಕೆ ಲಗ್ಗೆ ಇಟ್ಟಿದ್ದಾರೆ. ಸಾವಿರಾರು ಪ್ರವಾಸಿಗರುಮುಳ್ಳಯ್ಯನಗಿರಿ ಪ್ರದೇಶಕ್ಕೆ ಲಗ್ಗೆ ಇಟ್ಟಿದ್ದರಿಂದನಗರದ ಹೊರವಲಯದಲ್ಲಿರುವ ಕೈಮರತಪಾಸಣಾ ಕೇಂದ್ರದಲ್ಲಿ ಕಿಮೀಗಟ್ಟಲೆ ಟ್ರಾμಕ್‌ಜಾಮ್‌ ಉಂಟಾಗಿದ್ದು ವಾಹನ ಸವಾರರುಪರದಾಡುವಂತಾಗಿತ್ತು.ಶನಿವಾರ ಒಂದೇ ದಿನ ಸಾವಿರಕ್ಕೂ ಅಧಿಕ ವಾಹನಗಳು ಮುಳ್ಳಯ್ಯನಗಿರಿ ದತ್ತಪೀಠಕ್ಕೆತೆರಳಿದ್ದು, ಭಾನುವಾರ ಬೆಳಗ್ಗೆ 6 ಗಂಟೆಯಿಂದ12 ಗಂಟೆ ವರೆಗೂ 1 ಸಾವಿರಕ್ಕೂ ಅಧಿಕ ವಾಹನಗಳು ಗಿರಿ ಪ್ರದೇಶಕ್ಕೆ ತೆರಳಿವೆ.ಪ್ರವಾಸಿಗರು ಒಮ್ಮೆಲೇ ಜಮಾಯಿಸಿದ್ದರಿಂದಟ್ರಾμಕ್‌ ಸಮಸ್ಯೆ ಉಂಟಾಗಿತ್ತು.

ಒಮ್ಮೆಲೇಪ್ರವಾಸಿ ವಾಹನಗಳ ಸಂಖ್ಯೆ ಹೆಚ್ಚಾದ ಪರಿಣಾಮ ಟ್ರಾμಕ್‌ ನಿಯಂತ್ರಿಸಲು ಪೊಲೀಸರುಹರಸಾಹಸಪಡಬೇಕಾಯಿತು.ಒಮ್ಮೆಗೇ ಟ್ರಾμಕ್‌ ಸಮಸ್ಯೆ ಉಂಟಾಗಿದ್ದರಿಂದ500ಕ್ಕೂ ಹೆಚ್ಚು ಪ್ರವಾಸಿ ವಾಹನಗಳನ್ನುಪೊಲೀಸರು ವಾಪಸ್‌ ಕಳಿಸಿದರು. ಕೈಮರ ಚೆಕ್‌ಪೋಸ್ಟ್‌ ಬಳಿ ಜನಜಾತ್ರೆಯಾಗಿತ್ತು. ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ದರ್ಗಾದಲ್ಲಿಯೂಪ್ರವಾಸಿಗರ ದಂಡು ನೆರೆದಿತ್ತು. ಕೆಮ್ಮಣ್ಣುಗುಂಡಿ,ಭದ್ರಾ ಅಭಯಾರಣ್ಯ, ಮುತ್ತೋಡಿ ಸೇರಿದಂತೆಕಲ್ಲತ್ತಗಿರಿ ಜಲಪಾತ, ಮಾಣಿಕ್ಯಧಾರಾ, ದಬೆ ದಬೆಜಲಪಾತ, ಅಬ್ಬೆ ಜಲಪಾತ ಸೇರಿದಂತೆ ಇತರೆಪ್ರವಾಸಿ ತಾಣಗಳಲ್ಲಿ ಜನ ಜಂಗುಳಿಯಿಂದತುಂಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next