Advertisement

ಋಷಿಕುಮಾರ ಸ್ವಾಮೀಜಿಗೆ ಭದ್ರತೆ ಒದಗಿಸಲು ಆಗ್ರಹ

03:47 PM Feb 18, 2022 | Team Udayavani |

ಚಿಕ್ಕಮಗಳೂರು: ಹಿಜಾಬ್‌ ಸಂಬಂಧನ್ಯಾಯಾಲಯದ ಮಧ್ಯಂತರಆದೇಶ ಪಾಲಿಸದವರ ಮೇಲೆ ಕ್ರಮಕೈಗೊಳ್ಳುವಂತೆ ಮತ್ತು ಶ್ರೀ ಋಷಿಕುಮಾರಸ್ವಾಮೀಜಿ ಅವರಿಗೆ ಭದ್ರತೆ ಒದಗಿಸುವಂತೆಆಗ್ರಹಿಸಿ ಶ್ರೀರಾಮ ಸೇನೆ ಮುಖಂಡರುಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ನಗರದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಬಿ.ಆರ್‌. ರೂಪಾ ಅವರಿಗೆ ಈಸಂಬಂಧ ಮನವಿ ಸಲ್ಲಿಸಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್‌ ಶೆಟ್ಟಿಮಾತನಾಡಿ, ಮುಸ್ಲಿಂ ಸಮುದಾಯದವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವವಿವಾದ ಸಂಬಂಧ ನ್ಯಾಯಾಲಯಮಧ್ಯಂತರ ಆದೇಶವನ್ನು ನೀಡಿದೆ.

ನ್ಯಾಯಾಲಯದ ಆದೇಶವನ್ನು ಹಿಂದೂವಿದ್ಯಾರ್ಥಿಗಳು ಪಾಲಿಸುತ್ತಿದ್ದಾರೆ.ಆದರೆ ಮುಸ್ಲಿಂ ವಿದ್ಯಾರ್ಥಿನಿಯರುನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲಎಂದು ದೂರಿದರು.ವಿವಾದವನ್ನು ಮುಂದಿಟ್ಟುಕೊಂಡುಸಮಾಜದಲ್ಲಿ ಅಶಾಂತಿ ಉಂಟುಮಾಡಲಾಗುತ್ತಿದೆ. ನ್ಯಾಯಾಲಯದಆದೇಶವಿದ್ದರೂ ಹಿಜಾಬ್‌ ಧರಿಸಿ ಶಾಲಾಕಾಲೇಜಿಗೆ ಬರುವುದು ನ್ಯಾಯಾಲಯದಆದೇಶ ಉಲ್ಲಂಘನೆಯಾಗಿದ್ದು, ಇಂತವರಮೇಲೆ ಕಾನೂನು ಕ್ರಮ ಕೈಗೊಳ್ಳಬೇಕುಎಂದು ಆಗ್ರಹಿಸಿದರು.

ಜಿಲ್ಲೆಯ ಸಖರಾಯಪಟ್ಟಣ ಹೋಬಳಿಯ ಕಾಳಿಮಠದ ಶ್ರೀಋಷಿಕುಮಾರ ಸ್ವಾಮೀಜಿ ಹಿಂದೂಗಳಪರ ಅನೇಕ ಹೋರಾಟವನ್ನು ಮಾಡಿಕೊಂಡು ಬಂದಿದ್ದು, ಅನ್ಯಧರ್ಮಿಯರಿಂದ ಬೆದರಿಕೆ ಕರೆಗಳುಬರುತ್ತಿವೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರಿಗೆ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದುರ್ಗಾಸೇನಾತಾಲೂಕು ಅಧ್ಯಕ್ಷೆ ನವೀನ, ಶ್ರೀರಾಮಸೇನೆಜಿಲ್ಲಾ ಉಪಾಧ್ಯಕ್ಷ ದಿಲೀಪ್‌ ಶೆಟ್ಟಿ,ಪುನೀತ್‌, ಯಶ್ವಂತ್‌, ಜ್ಞಾನೇಂದ್ರ, ಅಭಿ,ಮಂಜು ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next