Advertisement

ಜಮೀನು ಮಂಜೂರಾತಿಗೆ ಆಗ್ರಹ

03:11 PM Feb 18, 2022 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿ ಕ ಬಡಕುಟುಂಬಗಳು ಫಾರಂ. 50, 53, 57ರ ಅಡಿ ಅರ್ಜಿಸಲ್ಲಿಸಿದ್ದು, ಸರ್ಕಾರ ಜಮೀನು ಮಂಜೂರು ಮಾಡಿಲ್ಲ,ಸರ್ಕಾರ ಮುಂದಿನ ದಿನಗಳಲ್ಲಿ ಜಮೀನು ಮಂಜೂರುಮಾಡಬೇಕು. ತಪ್ಪಿದಲ್ಲಿ ಹೋರಾಟವನ್ನು ತಾಲೂಕು ಮಟ್ಟಕ್ಕೂವಿಸ್ತರಿಸಲಾಗುವುದು ಎಂದು ಬಹುಜನ ಸಮಾಜ ಪಕ್ಷದ ರಾಜ್ಯಪ್ರಧಾನ ಕಾರ್ಯದರ್ಶಿ ಜಾಕೀರ್‌ ಹುಸೇನ್‌ ತಿಳಿಸಿದರು.

Advertisement

ಗುರುವಾರ ನಗರದ ಜಿಲ್ಲಾ ಆಟದ ಮೈದಾನ ಆವರಣದಲ್ಲಿತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ 25ಲಕ್ಷಕ್ಕೂ ಅಧಿ ಕ ಜನರು ಸರ್ಕಾರಿ ಜಮೀನಿನಲ್ಲಿವಾಸ ಮಾಡುತ್ತಿದ್ದಾರೆ. ಜಮೀನು ಸಕ್ರಮಕ್ಕಾಗಿ ಫಾರಂ. 50,53, 57 ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದುವರೆಗೂರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ಸರ್ಕಾರ ಬಡವರಿಗೆ ಭೂಮಿಯನ್ನು ನೀಡದೆ ವಂಚಿಸಿವೆ.

ಇತ್ತೀಚೆಗೆ ಕಂದಾಯ ಸಚಿವರ ನೇತೃತ್ವದಲ್ಲಿ ಉಪಸಮಿತಿರಚಿಸಿ ಗೋಮಾಳ ಜಾಗವನ್ನು ಸಂಘ ಸಂಸ್ಥೆಗಳಿಗೆ ಮಾರಾಟಮಾಡುವ ಹುನ್ನಾರ ನಡೆಯುತ್ತಿದ್ದು, ಬಡವರಿಗೆ ಅನ್ಯಾಯಮಾಡಲಾಗುತ್ತಿದೆ ಎಂದು ದೂರಿದರು.ರಾಜ್ಯದ 11ಸಾವಿರ ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡದ ಜನರಿಗೆ ಪ್ರತ್ಯೇಕ ಸ್ಮಶಾನವಿಲ್ಲ, ಶೇ.80ರಷ್ಟುಬಡವರಿಗೆ ಜಮೀನು ಇಲ್ಲ. ಜಮೀನು ಬಂಡವಾಳ ಶಾಹಿಗಳಮತ್ತು ಶ್ರೀಮಂತರ ಪಾಲಾಗಿದೆ.

ಶೀಘ್ರವೇ ಬಡವರಿಗೆಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿಪಿ.ವೇಲಾಯುಧನ್‌, ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಮಹಿಳಾವಿಭಾಗದ ಅಧ್ಯಕ್ಷೆ ಸುಧಾ ಮಾತನಾಡಿದರು. ದಲಿತ ಸಂಘರ್ಷಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ರಾಜ್ಯಮುಖಂಡ ಜಿ.ಕೆ. ಬಸವರಾಜ್‌, ಕಾರ್ಯದರ್ಶಿ ಕೆ.ಆರ್‌.ಗಂಗಾಧರ, ಲೋಕವಳ್ಳಿ ರಮೇಶ್‌, ತಾಲೂಕು ಅಧ್ಯಕ್ಷ ಹರೀಶ್‌,ಶೀಲಾ, ಮೋಹನ್‌, ಬಕ್ಕಿ ಮಂಜುನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next