ಚಿಕ್ಕಮಗಳೂರು: ಕಾಫಿ ನಾಡು ಪ್ರಕೃತಿ ಸೌಂದರ್ಯದಖನಿ. ಇಲ್ಲಿನ ಪ್ರಕೃತಿ ತನ್ನೊಡಲಿನಲ್ಲಿ ಸಾವಿರಾರುಜಾತಿಯ ವೃಕ್ಷ, ಪ್ರಾಣಿ- ಪಕ್ಷಿಗಳಿಗೆ ನೆಲೆ ನೀಡಿದೆ.ರಾಷ್ಟ್ರೀಯ ಪ್ರಾಣಿ ಹುಲಿ ಇಲ್ಲಿನ ದಟ್ಟಾರಣ್ಯದಲ್ಲಿನೆಲೆಸಿವೆ. ಸದ್ಯ ಜಿಲ್ಲೆಯಲ್ಲಿ ಹುಲಿ ಗಣತಿ ನಡೆಯುತ್ತಿದ್ದು,ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆಎಂದು ಹೇಳಲಾಗುತ್ತಿದೆ.
ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಹುಲಿಗಳಗಣತಿ ನಡೆಸಲಾಗುತ್ತದೆ. ಅದರಂತೆ ಜಿಲ್ಲೆಯಲ್ಲಿ ಜ.23ರಿಂದ ಹುಲಿಗಣತಿ ಆರಂಭವಾಗಿದ್ದು, ಜ. 29ಕ್ಕೆಮುಕ್ತಾಯಗೊಳ್ಳಲಿದೆ. ಕಳೆದ ಹುಲಿ ಗಣತಿಯಲ್ಲಿ ಭದ್ರಾ ಅಭಯಾರಣ್ಯದಲ್ಲಿ 39 ಹುಲಿಗಳನ್ನುಗುರುತಿಸಿದ್ದು, ಹುಲಿ ಸಂಖ್ಯೆಯಲ್ಲಿ ಚಿಕ್ಕಮಗಳೂರು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳುದಟ್ಟವಾಗಿದೆ.
ಹುಲಿ ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಂತೆದಟ್ಟಾರಣ್ಯದಲ್ಲಿ ಹುಲಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿರುವುದು ಗೋಚರಿಸುತ್ತಿದೆ.ಸದ್ಯ ಹುಲಿ ಗಣತಿ ಸಂದರ್ಭದಲ್ಲಿ ಹುಲಿಗಳು ನೇರದರ್ಶನವನ್ನು ನೀಡಿವೆ. ಕಳೆದ 1 ವರ್ಷದಲ್ಲಿ ಕೇವಲ 2ಹುಲಿಗಳು ಮಾತ್ರ ಸ್ವಾಭಾವಿಕವಾಗಿ ಸಾವನ್ನಪ್ಪಿವೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹುಲಿಗಳಸಂಖ್ಯೆ ಹೆಚ್ಚಳದಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯಕ್ಕೆಮೊದಲ ಸ್ಥಾನ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳುಕಂಡು ಬರುತ್ತಿವೆ. ಇದರೊಂದಿಗೆ ಕಾಫಿ ನಾಡು ರಾಜ್ಯದಗಮನ ಸೆಳೆಯಲು ಸಜ್ಜಾಗುತ್ತಿದೆ.