ಚಿಕ್ಕಮಗಳೂರು: ಚಿಕ್ಕಮಗಳೂರುನಗರಸಭೆಯಲ್ಲಿ ಸ್ವತ್ಛ, ಪ್ರಾಮಾಣಿಕ,ಅಭಿವೃದ್ಧಿ ಪೂರಕ ಆಡಳಿತ ನೀಡುವನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನುಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವಂತೆಮಾಜಿ ಸಚಿವ ರಮಾನಾಥ ರೈ ಮನವಿಮಾಡಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿ ಕಳೆದ 10 ವರ್ಷಗಳಿಂದಬಿಜೆಪಿ ಅಧಿ ಕಾರದಲ್ಲಿದ್ದು, ಅವರದುರಾಡಳಿ ತದಿಂದ ನಗರದವ್ಯವಸ್ಥೆ ದುಸ್ಥಿತಿಗೆ ತಲುಪಿದೆ ಎಂದುಆರೋಪಿಸಿದರು.ಕುಡಿಯುವ ನೀರು, ವಿದ್ಯುತ್,ಒಳಚರಂಡಿ ವ್ಯವಸ್ಥೆ ಕೆಟ್ಟ ಸ್ಥಿತಿಯಲ್ಲಿದ್ದು,ನಗರದ ಅಭಿವೃದ್ಧಿ ಶೂನ್ಯವಾಗಿದೆ.ನಗರ ಸೇರಿದಂತೆ ಇಡೀ ರಾಜ್ಯದಲ್ಲಿಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದುದೂರಿದ ಅವರು, ಕಾಂಗ್ರೆಸ್ ಉತ್ತಮಅಭ್ಯರ್ಥಿಗಳನ್ನು ಚುನಾವಣೆಯಲ್ಲಿನಿಲ್ಲಿಸಿದ್ದು, ನಗರಸಭೆಯಲ್ಲಿಅತ್ಯುತ್ತಮ ಆಡಳಿತ ಬೇಕೆಂದು ಜನರುಆಪೇಕ್ಷಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನಸಂಖ್ಯೆಯಲ್ಲಿ ಗೆಲುವು ಸಾಧಿ ಸಲಿದ್ದಾರೆಎಂದು ತಿಳಿಸಿದರು.ನಗರಸಭೆಗೆ ನಿಗ ದಿತ ಸಮಯದಲ್ಲಿಚುನಾವಣೆಯಾಗುತ್ತಿಲ್ಲ, ನ್ಯಾಯಾಲಯದ ನಿರ್ದೇಶನದ ಮೇಲೆಚುನಾವಣೆ ನಡೆಯುತ್ತಿದೆ. ಬಿಜೆಪಿಸರ್ಕಾರದ ಅವ ಧಿಯಲ್ಲಿ ಬಡವರಿಗೆಒಂದೇ ಒಂದು ಮನೆಯನ್ನು ಸರ್ಕಾರನೀಡಿಲ್ಲ, ಚುನಾಯಿತ ಜನಪ್ರತಿನಿ ಧಿಗಳನಿರ್ಲಕ್ಷéದಿಂದ ನಗರದಲ್ಲಿ ಅಭಿವೃದ್ಧಿಕೆಲಸ ಕುಂಠಿತವಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದದುರಾಡಳಿತದಿಂದ ಅಡುಗೆ ಅನಿಲ,ಇಂಧನ ಬೆಲೆ ಹೆಚ್ಚಳವಾಗುತ್ತಿದ್ದು,ದಿನನಿತ್ಯದ ವಸ್ತುಗಳ ಬೆಲೆಗಗನಕ್ಕೇರುತ್ತಿವೆ. ಇದರಿಂದ ಬಡವರಬದುಕು ದುಸ್ತರವಾಗಿದೆ. ಇದರಿಂದಬೇಸತ್ತಿರುವ ನಗರದ ಜನರುಕಾಂಗ್ರೆಸ್ ಅನ್ನು ಅ ಧಿಕಾರಕ್ಕೆ ತರಲುಒಲವು ತೋರುತ್ತಿದ್ದಾರೆ. ಮುಂದಿನದಿನಗಳಲ್ಲಿ ಸ್ವತ್ಛ, ಪ್ರಾಮಾಣಿಕ,ಅಭಿವೃದ್ಧಿ ಪೂರಕ ಆಡಳಿತ ತರುವವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ನಗರಸಭೆಚುನಾವಣೆಯಲ್ಲಿ ಕಾಂಗ್ರೆಸ್ 33ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು,ಇಬ್ಬರು ಪಕ್ಷೇತರರಿಗೆ ಬೆಂಬಲನೀಡಿದೆ.
ಎಲ್ಲಾ ಸಮುದಾಯಗಳನ್ನುಗುರುತಿಸಿ ಟಿಕೆಟ್ ನೀಡುವ ಮೂಲಕಸಾಮಾಜಿಕ ನ್ಯಾಯ ಒದಗಿಸಲಾಗಿದೆಎಂದು ತಿಳಿಸಿದರು.ಚಿಕ್ಕಮಗಳೂರು ಜಿಲ್ಲೆಪ್ರವಾಸೋದ್ಯಮಕ್ಕೆ ಪೂರಕವಾಗಿದೆ.ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿಬೆಳೆಯುತ್ತಿದ್ದು, ಕೈಗಾರಿಕೆಗಳಸ್ಥಾಪನೆಯಾಗಬೇಕಿದೆ. ಈ ನಿಟ್ಟಿನಲ್ಲಿನಗರದ ಅಭಿವೃದ್ಧಿ ಬಹು ಮುಖ್ಯ ಪಾತ್ರವಹಿಸಲಿದ್ದು, ಕಾಂಗ್ರೆಸ್ ನಗರಸಭೆಆಡಳಿತದ ಚುಕ್ಕಾಣಿ ಹಿಡಿದು ನಗರದಸರ್ವತೋಮುಖ ಅಭಿವೃದ್ಧಿಗೆಶ್ರಮಿಸಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನಗರಸಭೆಚುನಾವಣೆ ವೀಕ್ಷಕ ಮಾಜಿ ಸಚಿವಕಿಮ್ಮನೆ ರತ್ನಾಕರ್, ಕೆಎಸ್ ಆರ್‌ಟಿಸಿಮಾಜಿ ನಿರ್ದೇಶಕ ಟಿ.ಕೆ. ಸು ಧೀರ್,ಜಿಪಂ ಮಾಜಿ ಸದಸ್ಯ ಪ್ರಭಾಕರ್,ಕಡೂರು ಕ್ಷೇತ್ರ ಸಮಿತಿ ಅಧ್ಯಕ್ಷಚಂದ್ರಮೌಳಿ ಇದ್ದರು.