Advertisement

ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ

04:58 PM Dec 10, 2021 | Team Udayavani |

ಚಿಕ್ಕಮಗಳೂರು: ನಗರಸಭೆ ಚುನಾವಣೆ ನೀತಿ ಸಂಹಿತೆಉಲ್ಲಂಘನೆಯಾದಲ್ಲಿ ಪ್ರಕರಣ ದಾಖಲಿಸುವಂತೆಉಪ ವಿಭಾಗಾಧಿ ಕಾರಿ ಡಾ|ಎಚ್‌.ಎಲ್‌.ನಾಗರಾಜ್‌ಅ ಧಿಕಾರಿಗಳಿಗೆ ಸೂಚಿಸಿದರು.ಗುರುವಾರ ನಗರದ ನಗರಸಭೆ ಸಭಾಂಗಣದಲ್ಲಿಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಪಾಲನೆಮಾರ್ಗಸೂಚಿ ಮತ್ತು ಅಧಿ ಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

Advertisement

ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆಅ ಧಿಕಾರಿಗಳು ನಿಗಾ ವಹಿಸಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು 24 ಗಂಟೆ ಕಾರ್ಯ ನಿರ್ವಹಿಸಲು ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡ ರಚಿಸಲಾಗಿದೆ. ತಂಡಪ್ರತೀ ದಿನ ವರದಿ ಸಲ್ಲಿಸಬೇಕು ಎಂದು ಹೇಳಿದರು.

ಮತದಾರರಿಗೆ ಆಮಿಷ ಒಡ್ಡುವ, ಹಣ ಹಂಚಿಕೆ,ಮದ್ಯ ವಿತರಣೆ ಸೇರಿದಂತೆ ಇತರೆ ಚಟುವಟಿಕೆಗಳಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಸಭೆಸಮಾರಂಭ, ಮೆರವಣಿಗೆ ನಡೆಸಲು ಕಡ್ಡಾಯವಾಗಿಚುನಾವಣಾ ಧಿಕಾರಿಗಳಿಂದ ಅನುಮತಿ ಪಡೆಯಬೇಕು.ಕಾರ್ಯಕ್ರಮ ನಡೆಸುವ ಕನಿಷ್ಟ 48 ಗಂಟೆಗಳ ಮುಂಚೆಅಭ್ಯರ್ಥಿಗಳು ಅನುಮತಿ ಪಡೆಯಲು ಅರ್ಜಿ ಸಲ್ಲಿಸಬೇಕುಎಂದರು.ಕಾರ್ಯಕ್ರಮದ ಪೂರ್ಣ ವೀಡಿಯೋ ಚಿತ್ರೀಕರಣ ನಡೆಸಬೇಕು.

ಅನುಮತಿ ಪಡೆಯದೆ ಕಾರ್ಯಕ್ರಮನಡೆಸಿದಲ್ಲಿ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟಅ ಧಿಕಾರಿಗಳಿಗೆ ಸೂಚಿಸಿದರು.ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳ ಬ್ಯಾನರ್‌,ಬಂಟಿಂಗ್ಸ್‌, ಕಟೌಟ್‌, ಧ್ವಜಗಳನ್ನು ಹಾಕಲು ಅವಕಾಶವಿಲ್ಲ,ನಗರಸಭೆ ವ್ಯಾಪ್ತಿಯ ಹೊರಗಿನ ಗ್ರಾಮಗಳಲ್ಲೂ ನಗರಸಭೆಚುನಾವಣೆ ಚಟುವಟಿಕೆ ಮೇಲೆ ನಿಗಾ ಇರಿಸುವಂತೆ ಹೇಳಿದಅವರು, ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಅಧಿ ಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕುಎಂದರು.

ಸಭೆಯಲ್ಲಿ ನಗರಸಭೆ ವಿವಿಧ ವಾರ್ಡ್‌ಗಳ ಚುನಾವಣಾಧಿಕಾರಿಗಳಾದ ಮಲ್ಲಿಕಾರ್ಜುನ್‌, ವೇದಮೂರ್ತಿ,ತಿರುಮಲೇಶ್‌, ಸಿದ್ದರಾಜು, ಸೋಮಶೇಖರ್‌, ಎಂಸಿಸಿನೋಡೆಲ್‌ ಅಧಿಕಾರಿ ಹಾಗೂ ಡಿವೈಎಸ್‌ಪಿ ಪ್ರಭು, ಅಬಕಾರಿಉಪ ಆಯುಕ್ತ ನಾಗೇಶ್‌ಕುಮಾರ್‌, ಪೌರಾಯುಕ್ತಬಿ.ಸಿ. ಬಸವರಾಜ್‌, ವಾರ್ತಾ ಇಲಾಖೆ ಹಿರಿಯ ಸಹಾಯಕನಿರ್ದೇಶಕ ಖಾದರ್‌ ಶಾ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next