Advertisement

ಮೋಟಾರ್‌ ಬೈಕ್‌ ರ್ಯಾಲಿ: ಸ್ಯಾಮುಯೆಲ್‌ಗೆ ಪ್ರಶಸ್ತಿ

03:41 PM Nov 23, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎರಡು ದಿನಗಳ ಕಾಲದಿ. ಮೋಟಾರ್ ನ್ಪೋರ್ಟ್ಸ್ ಕ್ಲಬ್‌ ಚಿಕ್ಕಮಗಳೂರುಸಹಯೋದಲ್ಲಿ ನಡೆದ ದ್ವಿಚಕ್ರ ವಾಹನಗಳ ರಾಷ್ಟ್ರೀಯರ್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಹೊಸೂರಿನಸ್ಯಾಮುಯೆಲ್‌ ಜೇಕಬ್‌ ಪ್ರಶಸ್ತಿಯನ್ನು ತಮ್ಮಮುಡಿಗೇರಿಸಿಕೊಂಡರು.

Advertisement

ಜೇಕಬ್‌ 53 ನಿಮಿಷ 56 ಸೆಕೆಂಡುಗಳಲ್ಲಿ ಗುರಿತಲುಪಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಬೆಂಗಳೂರಿನ ಅಬ್ದುಲ್‌ ವಾಹಿದ್‌ ತನ್ವೀರ್‌ ದ್ವಿತೀಯ,ಮೈಸೂರಿನ ಇಮ್ರಾನ್‌ ಪಾಷಾ ಮೂರನೇ ಸ್ಥಾನಪಡೆದರು.ಸೂಪರ್‌ ಬೈಕ್‌ ಪ್ರೋ ಎಕ್ಸ್‌ಪರ್ಟ್‌ ವಿಭಾಗದಲ್ಲಿಬೆಂಗಳೂರಿನ ಅಬ್ದುಲ್‌ ವಾಹಿದ್‌ ತನ್ವಿರ್‌ಮೊದಲಿಗರಾದರು.

ಅವರು 54 ನಿಮಿಷ 2ಸೆಕೆಂಡುಗಳಲ್ಲಿ ರ್ಯಾಲಿ ಪೂರ್ಣಗೊಳಿಸಿದರು.ಬೆಂಗಳೂರಿನ ಆರ್‌. ನಟರಾಜ್‌ ಹಾಗೂ ಗೌತಮ್‌ರಾವ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಿಸಿದರು.ಸೂಪರ್‌ ಬೈಕ್‌ ಎಕ್ಸ್‌ಪರ್ಟ್‌-ಎ ವಿಭಾಗದಲ್ಲಿನಾಗಪುರದ ಅಮಾನ್‌ ಪ್ರಭಾಕರ್‌ ಪಾಬ್ಡೆ 57ನಿಮಿಷದಲ್ಲಿ ಗುರಿ ತಲುಪಿ ಮೊದಲಿಗರಾದರು.

ಚಿಕ್ಕಮಗಳೂರಿನ ಅಸಾದ್‌ ಖಾನ್‌ ಹಾಗೂನಾಗಪುರದ ಜತಿನ್‌ ಜೈನ್‌ ಎರಡು ಮತ್ತು ಮೂರನೇಸ್ಥಾನ ಗಳಿಸಿದರು. ಸೂಪರ್‌ ನ್ಪೋರ್ಟ್ಸ್ 130ವಿಭಾಗದಲ್ಲಿ ಕೇರಳದ ಅಜಿನ್‌ ಅಬ್ರಾಹಂ ಪ್ರಥಮ,ಕೊಟ್ಟಾಯಂ ಚಲಸ್‌ ನಬೋಸ್‌ ದ್ವಿತೀಯ ಹಾಗೂಮಂಗಳೂರಿನ ನಿತೇಶ್‌ ಪೂಜಾರಿ ತೃತೀಯ ಸ್ಥಾನಪಡೆದರು.ಸೂಪರ್‌ ನ್ಪೋರ್ಟ್ಸ್ 165 ವಿಭಾಗದಲ್ಲಿಬೆಂಗಳೂರಿನ ಬಿ.ಕೆ. ಪವನ್‌ ಪ್ರಥಮ,ಕೊಯಮತ್ತೂರಿನ ಶಶಿಕುಮಾರ್‌ ದ್ವಿತೀಯ ಹಾಗೂಶಿವಮೊಗ್ಗದ ಅಬ್ರಾರ್‌ ಪಾಶ ಮೂರನೇ ಸ್ಥಾನಗಳಿಸಿದ್ದಾರೆ.

ಸೂಪರ್‌ ನ್ಪೋರ್ಟ್ಸ್ 260 ವಿಭಾಗದಲ್ಲಿಹೊಸೂರಿನ ಸ್ಯಾಮುಯೆಲ್‌ ಜೇಕಬ್‌ ಪ್ರಥಮ,ಮೈಸೂರಿನ ಇಮ್ರಾನ್‌ ಪಾಶ ದ್ವಿತೀಯ ಹಾಗೂಹೊಸೂರಿನ ಸಚಿನ್‌ ಮೂರನೇ ಸ್ಥಾನ ಗಳಿಸಿದ್ದಾರೆ.ಸೂಪರ್‌ ನ್ಪೋರ್ಟ್ಸ್ 400 ವಿಭಾಗದಲ್ಲಿ ಪುತ್ತೂರಿನಆಕಾಶ್‌ ಐತಾಳ್‌, ಸೂಪರ್‌ ನ್ಪೋಟ್ಸ್‌ 550 ವಿಭಾಗದಲ್ಲಿಬೆಂಗಳೂರಿನ ಮೊಹಮದ್‌ ಜಹೀರ್‌ ಮೊದಲಿಗರಾಗಿದ್ದಾರೆ. ಮಹಿಳಾ ವಿಭಾದಲ್ಲಿ ಬೆಂಗಳೂರಿನಐಶ್ವರ್ಯ ಪಿಸ್ಸೆŒ„ 1ಗಂಟೆ 4 ನಿಮಿಷದಲ್ಲಿ ಗುರಿ ತಲುಪಿಮೊದಲಿಗರಾಗಿದ್ದಾರೆ.

Advertisement

ಸತಾರಾದ ತನಿಕ್‌ ಶಾನ್‌ಭಾಗ್‌ದ್ವಿತೀಯ ಹಾಗೂ ಮಂಗಳೂರಿನ ಬಿ. ಅಪೂರ್ವತೃತೀಯ ಸ್ಥಾನ ಗಳಿಸಿದ್ದಾರೆ. ಸ್ಟಾರ್‌ ಆಫ್‌ ಕರ್ನಾಟಕವಿಭಾಗದಲ್ಲಿ ಮಂಗಳೂರಿನ ಅದ್ನಾನ್‌ ಅಹಮದ್‌ಪ್ರಥಮ, ಚಿಕ್ಕಮಗಳೂರಿನ ಪಿ.ವಿ. ಫ್ರಾನ್ಸಿಸ್‌ ದ್ವಿತೀಯಹಾಗೂ ಚಿಕ್ಕಮಗಳೂರಿನ ಎನ್‌. ಸೂರಜ್‌ ತೃತೀಯಸ್ಥಾನ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next