ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯಲ್ಲಿ ಪರ್ಯಾಯ ವ್ಯವಸ್ಥೆಯನ್ನುಪೂರ್ಣಗೊಳಿಸಿದ ನಂತರವೇ ವಾಹನಗಳಪಾರ್ಕಿಂಗ್ ಶುಲ್ಕ ವಿ ಧಿಸಲಾಗುವುದು.ಈ ಸಂಬಂಧ ಇಲಾಖೆ ಅ ಧಿಕಾರಿಗಳಿಗೆಸೂಚಿಸಿರುವುದಾಗಿ ಶಾಸಕ ಸಿ.ಟಿ. ರವಿ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧಪತ್ರಿಕಾ ಹೇಳಿಕೆ ನೀಡಿರುವ ಅವರು,ಎಂ.ಜಿ. ರಸ್ತೆ ಪಾರ್ಕಿಂಗ್ ಶುಲ್ಕ ವಿ ಧಿಸಲುಟೆಂಡರ್ ಪ್ರಕ್ರಿಯೆ ನಡೆದಿದ್ದು, ಟೆಂಡರ್‌ಅನುಷ್ಠಾನ ಮಾಡುವ ಮೊದಲು ಅಂಗಡಿಮಾಲೀಕರು, ಗ್ರಾಹಕರು, ಸಾರ್ವಜನಿಕರಿಗೆತೊಂದರೆಯಾಗದಂತೆ ಪರ್ಯಾಯವ್ಯವಸ್ಥೆ ನಂತರವೇ ಟೆಂಡರ್ ನಿಯಮಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.
ಎಂ.ಜಿ. ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಮತ್ತುಪಾರ್ಕಿಂಗ್ ವ್ಯವಸ್ಥೆ ಶಿಸ್ತುಬದ್ಧ ನಿಯಂತ್ರಣಕ್ಕಾಗಿಈ ರಸ್ತೆಯಲ್ಲಿ ಪಾರ್ಕಿಂಗ್ ಶುಲ್ಕದ ಬಗ್ಗೆ ಸಭೆಸಮಾಲೋಚನೆ ನಡೆಸಿ, ಈ ಹಿಂದಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಾರಿಗೆ ಇಲಾಖೆ,ಪೊಲೀಸ್ ಇಲಾಖೆ ಅಧಿ ಕಾರಿಗಳ ಸಭೆ ನಡೆಸಿನಿರ್ಣಯ ಕೈಗೊಳ್ಳಲಾಗಿತ್ತು ಎಂದರು.
ಪಾರ್ಕಿಂಗ್ ಶುಲ್ಕ ಹೆಚ್ಚಳವಾಗಿದೆ ಹಾಗೂ ಪರ್ಯಾಯ ವ್ಯವಸ್ಥೆ ಬಗ್ಗೆಇಲ್ಲಿನ ನಿವಾಸಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿಸಭೆ ನಡೆಸಿ ಚರ್ಚಿಸಿದ್ದು, ಈ ಸಂಬಂಧಸಂಬಂಧಪಟ್ಟ ಇಲಾಖೆ ಅಧಿ ಕಾರಿಗಳಿಗೆಸೂಚಿಸಲಾಗಿದೆ ಎಂದರು.
ಬೇರೆ ಬೇರೆ ಜಿಲ್ಲೆಗಳಲ್ಲಿ ಪಾರ್ಕಿಂಗ್‌ಶುಲ್ಕ ವಿಧಿ ಸುತ್ತಿರುವುದರ ಆಧಾರದ ಮೇಲೆಪಾರ್ಕಿಂಗ್ ಶುಲ್ಕ ವಿ ಧಿಸುವ ಬಗ್ಗೆ ತೀರ್ಮಾನಕೈಗೊಂಡಿದ್ದು, ಟೆಂಡರ್ ಅನುಷ್ಠಾನಗೊಳಿಸುವಮುನ್ನ ಪರ್ಯಾಯ ವ್ಯವಸ್ಥೆ ಹಾಗೂ ಸೂಕ್ತರೂಪುರೇಷೆಗಳನ್ನು ಕಲ್ಪಿಸಲು ಆದ್ಯತೆ ನೀಡಿನಿಯಮಗಳನ್ನು ಅಳವಡಿಸಲಾಗುವುದುಎಂದು ತಿಳಿಸಿದ್ದಾರೆ.