ಚಿಕ್ಕಮಗಳೂರು: ಜಿಲ್ಲಾದ್ಯಂತ ಬುಧವಾರ ತಡರಾತ್ರಿಗುಡುಗು ಸಿಡಿಲು ಸಹಿತ ಸುರಿದ ಭಾರೀ ಮಳೆಯಿಂದ ಅಲ್ಲಲ್ಲಿ ಅನಾಹುತಗಳು ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲು ಸೀಮೆಭಾಗದಲ್ಲೂ ಭಾರೀ ಮಳೆಯಾಗಿದ್ದು, ಕಾಫಿ ಅಡಿಕೆ ತೋಟಗಳಲ್ಲಿ ನೀರು ಸಂಗ್ರಹವಾಗಿದೆ.
ಹಳ್ಳ-ಕೊಳ್ಳಗಳಲ್ಲಿನೀರು ತುಂಬಿ ಹರಿದಿದೆ. ತೋಟ, ಹೊಲಗದ್ದೆಗಳಿಗೆ ನೀರುನುಗ್ಗಿರುವ ಪರಿಣಾಮ ಬೆಳೆಗಾರರು ಮತ್ತು ರೈತರಲ್ಲಿ ಆತಂಕಮನೆ ಮಾಡಿದೆ.ಜಿಲ್ಲೆಯ ಮಲೆನಾಡು ತಾಲೂಕುಗಳಾದ ಮೂಡಿಗೆರೆ,ಶೃಂಗೇರಿ, ನರಸಿಂಹರಾಜಪುರ, ಕೊಪ್ಪ, ಕಳಸ ವ್ಯಾಪ್ತಿಯಲ್ಲಿಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ.
ಬಯಲುಸೀಮೆ ತಾಲೂಕು ಕಡೂರು, ತರೀಕೆರೆ ಭಾಗದಲ್ಲೂಮಳೆಯಾಗಿದೆ.ಕೆರೆಕಟ್ಟೆ, ಹಳ್ಳಕೊಳ್ಳಗಳಲ್ಲಿ ಭಾರೀ ಪ್ರಮಾಣದ ನೀರುಹರಿದಿದ್ದು, ಬೆಳೆನಾಶವಾಗಿದೆ. ಶುಂಠಿ ಸೇರಿದಂತೆ ತರಕಾರಿಬೆಳೆಗಳು ನಾಶವಾಗುತ್ತಿದೆ.
ಬೆಲೆ ಕುಸಿತ ಸೇರಿದಂತೆ ಹವಾಮಾನ ವೈಪರೀತ್ಯದಿಂದ ಬೆಳೆಗಳಿಗೆ ಭಾರೀ ಪ್ರಮಾಣದಹಾನಿಯಾಗಿದ್ದು ಭಾರೀ ಮಳೆಗೆ ರೈತರು ಕಂಗಲಾಗಿದ್ದಾರೆ.ಚಿಕ್ಕಮಗಳೂರು ನಗರದ ಮಧುವನ ಲೇಔಟ್‌ನಲ್ಲಿಹಳ್ಳಕ್ಕೆ ನಿರ್ಮಿಸಿದ್ದ ಸೇತುವೆ ಕುಸಿದಿದೆ. ತಾಲೂಕಿನಹೊನ್ನಮ್ಮನ ಹಳ್ಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದಪರಿಣಾಮ ಹಳ್ಳದ ಪಕ್ಕದಲ್ಲಿ ಮಣ್ಣು ಕುಸಿದಿದ್ದು, ಹಳ್ಳಕ್ಕೆಇಳಿಯಲು ನಿರ್ಮಿಸಿದ್ದ ಮೆಟ್ಟಿಲುಗಳಿಗೆ ಹಾನಿಯಾಗಿದೆ.
ಶುಂಠಿ, ಅಡಿಕೆ, ಕಾಫಿ, ಭತ್ತದ ಗದ್ದೆಗಳಲ್ಲಿ ಅಪಾರಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಫಸಲುನಾಶವಾಗುವ ಆತಂಕದಲ್ಲಿ ರೈತರು ಮತ್ತು ಬೆಳೆಗಾರರುದಿನದೂಡುತ್ತಿದ್ದಾರೆ. ಕಾಫಿ ಬೆಳೆ ಕೊಯ್ಲಿಗೆ ಬಂದಿದ್ದು,ಭಾರೀ ಪ್ರಮಾಣದ ಮಳೆಯಿಂದ ಕಾಫಿ ಬೆಳೆ ಮಣ್ಣುಪಾಲಾಗುತ್ತಿದೆ.
ಅಡಕೆ ಬೆಳೆ ಕೋಯ್ಲಿಗೆ ಬಂದಿದ್ದುಭಾರೀ ಪ್ರಮಾಣದ ಮಳೆಯಿಂದ ತೇವಾಂಶ ಹೆಚ್ಚಾಗಿಕೊಳೆರೋಗ ವ್ಯಾಪಿಸುವ ಸಾಧ್ಯತೆ ದಟ್ಟವಾಗಿದೆ. ಭತ್ತದಗದ್ದೆಗಳು ತೆನೆಯೊಡೆಯುತ್ತಿದ್ದು, ಭಾರೀ ಮಳೆಯಿಂದ ತೆನೆಜೊಳ್ಳಾಗುವ ಆತಂಕವಿದೆ. ಹಳ್ಳಕೊಳ್ಳಗಳಲ್ಲಿ ನೀರು ತುಂಬಿಹರಿಯುತ್ತಿದ್ದು, ಗ್ರಾಮೀಣ ಪ್ರದೇಶದ ಜನರ ಸಂಚಾರಕ್ಕೂಅಡ್ಡಿಯಾಗುತ್ತಿದೆ. ಹವಾಮಾನ ವೈಪರೀತ್ಯದಿಂದ ಜಿಲ್ಲಾದ್ಯಂತಭಾರೀ ಮಳೆಯಾಗುತ್ತಿದ್ದು ಜನರ ನಿದ್ದೆಗೆಡಿಸಿದೆ.