Advertisement

Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ

11:57 PM Nov 20, 2024 | Team Udayavani |

ಚಿಕ್ಕಬಳ್ಳಾಪುರ: ನೆರೆಯ ಆಂಧ್ರದ ವಿಶಾಖಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಚಿಕ್ಕಬಳ್ಳಾಪುರ ಸೈಬರ್ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಿಢೀರ್ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳ ಬಂಧಿಸಿ ಮಾಲು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿಗಳನ್ನು ಚಿಕ್ಕಬಳ್ಳಾಪುರ ನಗರದ ಕೃಷ್ಣ ಟಾಕೀಸ್ ಹಿಂಬದಿ ವಾಸವಿರುವ ಆಟೋ ಚಾಲಕ ಎಜಾಜ್ ಖಾನ್ ಬಿನ್ ರಹಮತ್ ಖಾನ್ (32) ಹಾಗೂ ತ್ರಿಪುರ ರಾಜ್ಯದ 28 ವರ್ಷದಿಂದ ಚಾಲಕ ವೃತ್ತಿಯಲ್ಲಿ ತೊಡಗಿರುವ ರುಸನ್ ಆಲಿ ಬಿನ್ ಲೇಟ್ ಮಕ್ರಂ ಅಲಿ ಎಂದು ಗುರುತಿಸಲಾಗಿದ್ದು, ಆರೋಪಿ ಹಾಲಿ ಚಿಕ್ಕಬಳ್ಳಾಪುರದ ಮಂಜುನಾಥ ಆಸ್ಪತ್ರೆ ರಸ್ತೆಯ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಚಿಕ್ಕಬಳ್ಳಾಪುರ ಬೆಂಗಳೂರು ಮುಖ್ಯ ರಸ್ತೆಯ ಕೆ.ವಿ. ಕ್ಯಾಂಪಸ್ ಕ್ರಾಸ್ ಬಳಿ ಬುಧವಾರ ಬೆಳಗ್ಗೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಬಲೇನೋ ಕಾರಿನಲ್ಲಿ ಇಬ್ಬರು ಸುಮಾರು 7,20,000 ಲಕ್ಷ ರೂ. ಮೌಲ್ಯದ ಸುಮಾರು 12 ಕೆಜಿ ಮಾದಕ ವಸ್ತುವನ್ನು ಆಂಧ್ರಪ್ರದೇಶದ ವಿಶಾಖ ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಎಸ್ಪಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಎಸ್ಪಿ ಆರ್.ಐ.ಕಾಶಿಂ, ಸೈಬರ್ ಠಾಣೆ ಡಿವೈಎಸ್‌ಪಿ ರವಿಕುಮಾರ್, ಪೊಲೀಸ್ ಇನ್ಸ್ ಪೆಕ್ಟರ್  ಎಂ.ಸೂರ್ಯಪ್ರಕಾಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next