Advertisement

ಚಿಕ್ಕಬಳ್ಳಾಪುರ: ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು

07:10 PM Jun 11, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಂಗಾರು ಪೂರ್ವಮಳೆ ವಾಡಿಕೆಗಿಂತ ಹೆಚ್ಚಾಗಿಯೇ ಸುರಿದಿದ್ದು, ರೈತರುಜಮೀನು ಹದ ಮಾಡಿಕೊಂಡು ಈಗಾಗಲೇ ತೊಗರಿ,ನೆಲಗಡಲೆ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

Advertisement

ತಿಂಗಳಾಂತ್ಯದೊಳಗೆ ರಾಗಿ, ಮುಸುಕಿನ ಜೋಳ ಬಿತ್ತನೆಕ್ಕೂ ಸಿದ್ಧತೆನಡೆದಿದೆ.ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ 130.7 ಮಿ.ಮೀ. ಮಳೆಆಗಬೇಕಿತ್ತು. ಆದರೆ, ಈ ಬಾರಿ ಹೆಚ್ಚು ಅಂದರೆ 245.5.ಮಿ.ಮೀ. ಆಗಿದೆ. ಇದು ಮುಂಗಾರು ಹಂಗಾಮಿನಶುಭ ಸೂಚನೆಯಾಗಿದೆ. ರೈತರಿಗೆ ಜೂನ್‌ ತಿಂಗಳುನೆಲಗಡಲೆ, ತೊಗರಿ ಬಿತ್ತನೆ ಮಾಡಲು ಸೂಕ್ತಸಮಯವಾಗಿದೆ. ಇದರಿಂದ ದ್ವಿದಳ ಧಾನ್ಯ, ಎಣ್ಣೆಕಾಳುಗಳ ವಿಸ್ತೀರ್ಣ, ಉತ್ಪಾದನೆ ಹೆಚ್ಚಿಸಲು ಸದಾವಕಾಶವಾಗಿದೆ.

ಶೇ.50 ದಾಸ್ತಾನು: ರಾಗಿ, ಮುಸುಕಿನ ಜೋಳ, ಅಲಸಂದಿ ಮತ್ತು ತೃಣಧಾನ್ಯಗಳ ಬಿತ್ತನೆ ಸಮಯವುಜೂನ್‌ ತಿಂಗಳ ಅಂತ್ಯದಿಂದ ಪ್ರಾರಂಭವಾಗಲಿದ್ದು,ಇದಕ್ಕೆ ಪೂರಕವಾಗಿ ಬಿತ್ತನೆ ಬೀಜಗಳ ದಾಸ್ತಾನನ್ನುಕೃಷಿ ಇಲಾಖೆ ಅಧಿ ಕಾರಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.50 ಈಗಾಗಲೇ ದಾಸ್ತಾನು ಮಾಡಿದ್ದಾರೆ.ಉಳಿದಿದ್ದನ್ನು ಹಂತವಾಗಿ ಪೂರೈಕೆ ಮಾಡಲು ಸಿದ್ಧತೆಮಾಡಿಕೊಳ್ಳಲಾಗಿದೆ.  ಇಲಾಖೆಯಿಂದ ರೈತರಿಗೆಕೆ-ಕಿಸಾನ್‌ ತಂತ್ರಾಂಶದಿಂದ ಹಿಡುವಳಿಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.

ಪೂರೈಕೆಗೆ ಕ್ರಮ: ಹಿಂದಿನ ವರ್ಷ ಎಕರೆಗೆ ರಾಗಿ-5ಕೆ.ಜಿ., ಮುಸುಕಿನ ಜೋಳ-5 ಕೆ.ಜಿ. ನೀಡಲಾಗುತ್ತಿತ್ತು.ಈ ವರ್ಷದಿಂದ ರೈತರ ಬೇಡಿಕೆಯಂತೆ ಪ್ರತಿ ಎಕರೆಗೆರಾಗಿ 10 ಕೆ.ಜಿ., ಮುಸುಕಿನ ಜೋಳ 8 ಕೆ.ಜಿ., ನೆಲಗಡಲೆ 60 ಕೆ.ಜಿ. ಬಿತ್ತನೆ ಬೀಜ ವಿತರಿಸಲು ಕೃಷಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದು, ಪ್ರಸ್ತುತ ಜಿಲ್ಲೆಗೆರಾಗಿ 1200 ಕ್ವಿಂಟಲ್‌, ನೆಲಗಡಲೆ 2400 ಕ್ವಿಂಟಲ್‌,ಮುಸುಕಿನ ಜೋಳ 1600 ಕ್ವಿಂಟಲ್‌ ಒಟ್ಟು 4760ಕ್ವಿಂಟಲ್‌ ಬಿತ್ತನೆ ಬೀಜಗಳ ಪೂರೈಕೆಗೆ ಕಾರ್ಯಕ್ರಮರೂಪಿಸಲಾಗಿದೆ.

ಹಂತವಾಗಿ ಪೂರೈಕೆ: ಅದರಲ್ಲಿ ಈಗಾಗಲೇ ಜಿಲ್ಲೆಯ26 ರೈತ ಸಂಪರ್ಕ ಕೇಂದ್ರಗಳಲ್ಲಿ 3000 ಕ್ವಿಂಟಲ್‌ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಉಳಿದದಾಸ್ತಾನನ್ನು ಹಂತವಾಗಿ ಸರಬರಾಜು ಮಾಡಲು ಕೃಷಿಇಲಾಖೆಯ ಅಧಿ ಕಾರಿಗಳು ಕ್ರಮ ಕೈಗೊಂಡಿದ್ದಾರೆ.

Advertisement

ಬಿತ್ತನೆ ಬೀಜ ವಿತರಣೆ: ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 3,256 ಮೆಟ್ರಿಕ್‌ ಟನ್‌-ಯೂರಿಯಾ, 1000 ಮೆಟ್ರಿಕ್‌ ಟನ್‌- ಡಿ.ಎ.ಪಿ, 900ಮೆಟ್ರಿಕ್‌ ಟನ್‌-ಎಂ.ಒ.ಪಿ, 5500 ಮೆಟ್ರಿಕ್‌ ಟನ್‌-ಇತರೆ ರಸಗೊಬ್ಬರಗಳ ದಾಸ್ತಾನು ಲಭ್ಯವಿದೆ ಎಂದುಕೃಷಿ ಅಧಿ ಕಾರಿಗಳು ಹೇಳಿದ್ದಾರೆ.ಈಗಾಗಲೇ ಜಿಲ್ಲೆಯ ಎಲ್ಲಾ ಕೃಷಿ ಪರಿಕರ ಮಾರಾಟಗಾರರಿಗೆ ಗೂಗಲ್‌-ಮೀಟ್‌ ಮೂಲಕ ರಸಗೊಬ್ಬರ,ಕೀಟನಾಶಕ, ಬಿತ್ತನೆ ಬೀಜಗಳ ದಾಸ್ತಾನು, ಮಾರಾಟಕ್ಕೆಸಂಬಂಧಿ ಸಿದಂತೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಪರಿವೀಕ್ಷಕರು ಕೃಷಿ ಪರಿಕರಮಾರಾಟಗಾರರ ಮಳಿಗೆಗಳ ತಪಾಸಣೆ ಕೈಗೊಂಡುಮಾದರಿ ಸಂಗ್ರಹಣೆ ಮಾಡಿ ಪ್ರಯೋಗಾ ಲಯಕ್ಕೆಸಲ್ಲಿಸಲು ಕ್ರಮ ಕೈಗೊಂಡಿದ್ದಾರೆ.

ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next