ಗುಡಿಬಂಡೆ: ಪ್ಲಾಸ್ಟಿಕ್ ವಸ್ತುಗಳು ಬಳಸದಂತೆ ಅಧಿಕಾರಿಗಳೇ ಅಂಗಡಿ ಮುಗ್ಗಟ್ಟುಗಳ ಮೇಲೆ ರೈಡ್ ಮಾಡಿ ದಂಡ ವಿಧಿಸುತ್ತಿರುವವರೇ, ಇಂದು ಪಟ್ಟಣದಲ್ಲಿ ಪ್ಲಾಸ್ಟಿಕ್ ಬ್ಯಾನರ್ ಗಳನ್ನು ಕಟ್ಟಲು ಅನುಮತಿ ಕೊಟ್ಟು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸರ್ಕಾರದ ಆದೇಶದಂತೆ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ನಿಷೇದ ಮಾಡುವಂತೆ ಆದೇಶವಿದ್ದು, ಅದರಂತೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಅಂಗಡಿ ಮುಗ್ಗಟ್ಟು ಮೇಲೆ ಯಾವುದೇ ಮುನ್ಸೂಚನೆ ನೀಡದೆ ದಾಳಿ ಮಾಡಿ, ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿ, 100 ರಿಂದ 5000 ವರೆಗೂ ದಂಡ ವಿಧಿಸಿ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಆದರೆ ಬಿಜೆಪಿಯ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ಮಾಡುತ್ತಿರುವ ಮುನಿರಾಜು ಹುಟ್ಟುಹಬ್ಬದ ಪ್ರಯುಕ್ತ ಗುಡಿಬಂಡೆ ಪಟ್ಟಣದಲ್ಲಿ ಬ್ಯಾನರ್ ಗಳನ್ನು ಹಾಕಿದ್ದು, ಬ್ಯಾನರ್ ಗಳನ್ನು ನಿಷೇಧಿಸುವಂತೆ ಅದೇಶವಿದ್ದರೂ, ಪ.ಪಂ ಅಧಿಕಾರಿಗಳು ಅನುಮತಿ ಕೊಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕರಿಗೊಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ ಮಾಡುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.