Advertisement

ಕಾಫಿ ನಾಡಿನಾದ್ಯಂತ ಮಳೆ ಆರ್ಭಟ

09:34 PM Oct 07, 2021 | Team Udayavani |

ಚಿಕ್ಕಮಗಳೂರು: ಹವಾಮಾನ ವೈಪರೀತ್ಯದಿಂದಜಿಲ್ಲೆಯಲ್ಲಿ ಕಳೆದರೆಡು ದಿನಗಳಿಂದ ಭಾರೀಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆಅಲ್ಲಲ್ಲಿ ಹಾನಿ ಸಂಭವಿಸಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

Advertisement

ಜಿಲ್ಲಾದ್ಯಂತ ಮೋಡ ಮತ್ತು ಶೀತವಾತವರಣ ನಿರ್ಮಾಣವಾಗಿದ್ದು,ಚಿಕ್ಕಮಗಳೂರು, ಕಡೂರು, ತರೀಕೆರೆ,ಮೂಡಿಗೆರೆ, ಶೃಂಗೇರಿ, ಕೊಪ್ಪ,ನರಸಿಂಹರಾಜಪುರ ಸುತ್ತಮುತ್ತ ಭಾರೀ ಮಳೆಯಾಗಿದೆ. ನಿರಂತರ ಮಳೆಯಿಂದಜನರು ಮನೆಯಿಂದ ಹೊರಬರಲುಹಿಂದೇಟು ಹಾಕುತ್ತಿದ್ದು ಜನಜೀವನಕ್ಕೆಅಡ್ಡಿಯಾಗಿದೆ.ಕಳಸ ತಾಲೂಕು ಸುತ್ತಮುತ್ತ ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಮುಳ್ಳೋಡಿಗ್ರಾಮದಲ್ಲಿ ಗುಡ್ಡದ ನೀರು ಕಿರುಸೇತುವೆಮೇಲೆ ಹರಿದು ಅಕ್ಕಪಕ್ಕದ ತೋಟಗಳಿಗೆನುಗ್ಗಿದೆ. ಮೂವರು ರೈತರಿಗೆ ಸೇರಿದ ಕಾಫಿ ತೋಟಕ್ಕೆ ಹಾನಿಯಾಗಿದೆ.

ಮೂಡಿಗೆರೆ ತಾಲೂಕು ಚಾರ್ಮಾಡಿಘಾಟಿ, ಕೊಟ್ಟಿಗೆಹಾರ, ಬಣಕಲ್‌, ಬಾಳೂರುಸುತ್ತಮುತ್ತಲ ಪ್ರದೇಶದಲ್ಲಿ ಭಾರೀಮಳೆಯಾಗಿದ್ದು, ಮೇಗೂರು ಗ್ರಾಮದಸುನೀಲ್‌ ಎಂಬುವರ ನಿರ್ಮಾಣ ಹಂತದಮನೆಯ ಕಾಂಪೌಂಡ್‌ ಕುಸಿದಿದೆ. ತರೀಕೆರೆತಾಲೂಕು ಸುತ್ತಮುತ್ತ ಭಾರೀ ಮಳೆಯಾಗಿದ್ದು,ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತಿತ್ತು.ಧಾರಾಕಾರ ಮಳೆಗೆ ಹಳ್ಳಕೊಳ್ಳ, ಕೆರೆಕಟ್ಟೆಗಳುತುಂಬಿ ಹರಿದಿದ್ದು, ಅಡಕೆ ತೋಟಗಳಿಗೆ ನೀರು ನುಗ್ಗಿದೆ.
ಸುಣ್ಣದಹಳ್ಳಿ ಕೆರೆ ಕೋಡಿ ಬಿದ್ದಿದೆ.ತಾಲೂಕಿನ ತರೀಕೆರೆ ನೇರಲಕೆರೆ ಸಂಪರ್ಕಕಲ್ಪಿಸುವ ಸೇತುವೆ ಮೇಲೆ ನೀರು ಹರಿದಿದ್ದು,ನೇರಲಕೆರೆ, ಹುಣಸಘಟ್ಟ ಭಾಗದ ಅಡಕೆತೋಟಗಳಿಗೆ ನೀರು ನುಗ್ಗಿದೆ. ತರೀಕೆರೆ ಇಟ್ಟಿಗೆಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆನೀರು ಹರಿದಿದೆ.ಕಡೂರು ತಾಲೂಕು ಸುತ್ತಮುತ್ತಸಾಧಾರಣ ಮಳೆಯಾಗಿದೆ. ಶೃಂಗೇರಿತಾಲೂಕು ಸುತ್ತಮುತ್ತ ಬಿಟ್ಟೂ ಬಿಡದೆಮಳೆಯಾಗುತ್ತಿದೆ. ಶೃಂಗೇರಿ ಪಟ್ಟಣದಗಾಂಧಿ ಮೈದಾನದಲ್ಲಿ ನೀರು ಆವರಿಸಿದೆ.ಕೊಪ್ಪ, ಬಾಳೆಹೊನ್ನೂರು, ನರಸಿಂಹರಾಜಪುರಸುತ್ತಮುತ್ತ ನಿರಂತರ ಮಳೆಯಾಗುತ್ತಿದೆ.

ಜಿಲ್ಲಾದ್ಯಂತ ಮಲೆನಾಡು ಗ್ರಾಮೀಣಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದವಿದ್ಯುತ್‌ ಕಣ್ಣ ಮುಚ್ಚಾಲೆಯಾಡುತ್ತಿದೆ.ಚಿಕ್ಕಮಗಳೂರು ತಾಲೂಕು ಸುತ್ತಮುತ್ತಭಾರೀ ಮಳೆಯಾಗಿದೆ. ನಗರ ಪ್ರದೇಶದಲ್ಲೂಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮಳೆಯಾಗಿದ್ದು ಮೋಡ ಕವಿದ ವಾತಾವರಣಮುಂದುವರಿದಿದ್ದು ಮತ್ತೆ ಮಳೆಯಾಗುವಸಾಧ್ಯತೆ ಇದೆ. ಒಟ್ಟಾರೆ ಜಿಲ್ಲಾದ್ಯಂತನಿರಂತರವಾಗಿ ಬಿಟ್ಟು ಬಿಡದೆ ಸುರಿಯುತ್ತಿದ್ದು ಜನಜೀವನಕ್ಕೆ ತೊಂದರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next