Advertisement

ಮೇಕೆದಾಟು ಯೋಜನೆ ಶೀಘ್ರ ಪ್ರಾರಂಭಿಸಿ

02:11 PM Sep 20, 2021 | Team Udayavani |

ಚಿಕ್ಕಬಳ್ಳಾಪುರ: ಮೇಕೆದಾಟು ಯೋಜನೆಸಾಕಾರಗೊಂಡಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆಕುಡಿಯುವ ನೀರು ದೊರೆಯ ಲಿದೆ. ಅಂತರ್ಜಲವೂವೃದ್ಧಿ ಆಗಲಿದೆ ಎಂದು ಪ್ರೊ.ನಂಜುಂಡಸ್ವಾಮಿ ಸ್ಥಾಪಿತರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷಜಿ.ಜಿ.ಹಳ್ಳಿ ನಾರಾಯಣಸ್ವಾಮಿ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಸೆ.23ರಂದು ಮೇಕೆದಾಟಿನಿಂದ ಹೊರಟು ಸೆ.28ಕ್ಕೆವಿಧಾನಸೌಧವರೆಗೆ ಬೃಹತ್‌ ಪಾದಯಾತ್ರೆಯನ್ನುಹೋರಾಟ ಸಮಿತಿಯಿಂದ ಆಯೋಜಿಸಲಾಗಿದೆ,ಸರ್ಕಾರದ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾದಕಾರಣ, ನಾವು ಈ ಬೃಹತ್‌ ಪಾದಯಾತ್ರೆಆಯೋಜಿಸಿದ್ದೇವೆ, ಈ ಹೋರಾಟದಲ್ಲಿ ಜಿಲ್ಲೆಯರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಡಿಯುವನೀರಿನ ಯೋಜನೆ ಸಾಕಾರಗೊಳಿಸಲು ನೆರವಾಗಬೇಕುಎಂದು ಮನವಿ ಮಾಡಿದರು.

ಕನ್ನಡಪರ ಸಂಘಟನೆಗಳಅಧ್ಯಕ್ಷ ಅಗಲಗುರ್ಕಿ ಚಲಪತಿ ಮಾತನಾಡಿ, ಕಾವೇರಿನದಿಯಿಂದ ವ್ಯರ್ಥವಾಗಿ ಹರಿದು ಸಮುದ್ರ ಸೇರುವನೀರನ್ನು ಉಳಿಸಿಕೊಳ್ಳಲು ರೂಪಿಸಿರುವ ಮೇಕೆದಾಟುಅಣೆಕಟ್ಟಿನ ಯೋಜನೆ ಹಲವು ವರ್ಷಗಳಿಂದರಾಜಕೀಯ ಇಚ್ಛಾಶಕ್ತಿಯ ಕಾರಣ ನನೆಗುದಿಗೆ ಬಿದ್ದಿದೆಎಂದು ಹೇಳಿದರು. ಮೇಕೆದಾಟು ಅಣೆಕಟ್ಟೆಪ್ರಾರಂಭಿಸಲು 12 ವರ್ಷಗಳಿಂದ ನಿರಂತರವಾಗಿಹೋರಾಟ ಮಾಡುತ್ತಲೇ ಬಂದಿದ್ದೇವೆ.

ಆದರೆ, ಈಸರ್ಕಾರಕ್ಕೆ ಕಾಳಜಿ ಅರ್ಥವೇ ಆಗುತ್ತಿಲ್ಲ. ಹೀಗಾಗಿಅನಿವಾರ್ಯವಾಗಿ ಪಾದಯಾತ್ರೆ ಪ್ರಾರಂಭಿಸುತ್ತಿದ್ದೇವೆ.ಇದಕ್ಕೂ ಸರಕಾರ ಮಣಿಯದಿದ್ದರೆ ರಾಜ್ಯಾದ್ಯಂತಉಗ್ರ ಹೋರಾಟ ರೂಪಿಸಲಾಗುವುದು ಎಂದುಎಚ್ಚರಿಸಿದರು. ರೈತಸಂಘದ ಜಿಲ್ಲಾ ಕಾರ್ಯದರ್ಶಿಯಣ್ಣೂರು ಬಸವರಾಜ್‌ ಮಾತನಾಡಿ, ಕಾವೇರಿನದಿಯಿಂದ ವ್ಯರ್ಥವಾಗಿ ಹರಿದು ನದಿ ಸೇರುವನೀರನ್ನು ಅಣೆಕಟ್ಟೆಯಲ್ಲಿ ಸಂಗ್ರಹಿಸಿದರೆ 60 ರಿಂದ 65ಟಿಎಂಸಿ ದೊರೆಯಲಿದೆ.

ಈ ನೀರನ್ನು ಬಳಸಿಕೊಂಡು 440 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೂ ಅವಕಾಶವಾಗಲಿದೆ ಎಂದು ಹೇಳಿದರು. ಬೆಂಗಳೂರು ಗ್ರಾಮಾಂತರ, ನಗರ, ಕೋಲಾರ,ಚಿಕ್ಕಬಳ್ಳಾಪುರ ಮೊದಲಾದ ಬಯಲು ಸೀಮೆಗಳಿಗೆಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಶಿಲ್ಪಾಗೌಡ, ಮುನಿರಾಜು,ಜಿ.ವಿ.ರಾಜಣ್ಣ, ಅಶ್ವತ್ಥನಾರಾಯಣಗೌಡ, ಪಾರಿಜಾತಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next