ಗುಡಿಬಂಡೆ: ಬಾಗೇಪಲ್ಲಿ-ಹಲಗೂರು ರಾಜ್ಯಹೆದ್ದಾರಿ -94ರ ಮುಖ್ಯರಸ್ತೆಯ ಅಗಲೀಕರಣಮಾಡಿ 6 ವರ್ಷ ಕಳೆದರೂ ಮನೆ ಮಠ ಕಳೆದುಕೊಂಡವರಿಗೆ ಯಾವುದೇ ಪರಿಹಾರ ನೀಡದೇ,ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ.ಗುಡಿಬಂಡೆ ತಾಲೂಕು ತೀರಾ ಹಿಂದುಳಿದಿದ್ದು,ಯಾವುದೇ ಅದಾಯ ಮೂಲ ಇಲ್ಲದೆ, ಕೇವಲಕೃಷಿಯನ್ನೇ ಅವಲಂಬಿಸಿದ್ದು, ಇಂದಿಗೂ ಇಲ್ಲಿನಜನರು ಬಡತನ, ನಿರುದ್ಯೋಗ, ಆರ್ಥಿಕ ಸಂಕಷ್ಟಹೀಗೆ ಹತ್ತು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ.
ರಸ್ತೆ ಅಗಲೀಕರಣದ ವೇಳೆ ಸೂರು, ನಿವೇಶನಕಳೆದುಕೊಂಡವರಿಗೆ ನಿವೇಶನ ನೀಡುತ್ತೇವೆ ಎಂದುಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅವರುಬದಲಾಗುತ್ತಿದ್ದಾರೆಯೇ ವಿನಃ ಸಂತ್ರಸ್ತರಿಗೆ ಮಾತ್ರಬಿಡಿಗಾಸು ಇಲ್ಲ.
ವಿಧಾನಸಭೆಯಲ್ಲೂ ಪ್ರಸ್ತಾಪ: ರಸ್ತೆ ಅಗಲೀಕರಣದವೇಳೆ ಸೂರು ಮತ್ತು ನಿವೇಶನ ಕಳೆದುಕೊಂಡಕುಟುಂಬಗಳಿಗೆ ನಿವೇಶನ ನೀಡಲು ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ವಿಧಾನಸಭೆಯಲ್ಲೂ ಪ್ರಸ್ತಾಪಮಾಡಿ, ಸರ್ಕಾರದ ಗಮನಕ್ಕೆ ತಂದು, ಜರೂರಾಗಿಸಂತ್ರÓರಿಗೆ ¤ ನಿವೇಶನ ನೀಡುವಂತೆ ಅಧಿಕಾರಿಗಳಿಗೆಒತ್ತಾಯಿಸಿದ್ದರು. ಅಧಿಕಾರಿಗಳು ಮಾತ್ರ ಜಾಣಕುರುಡುತನ ತೋರುತ್ತಿದ್ದಾರೆ.
6 ವರ್ಷವಾದ್ರೂ ಪರಿಹಾರವಿಲ್ಲ: 2015ರಲ್ಲಿತಾಲೂಕು ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರೀಯಹೆದ್ದಾರಿ 94ರ ಮುಖ್ಯರಸ್ತೆ ಅಗಲೀಕರಣಮಾಡಲಾಯಿತು. ಈ ವೇಳೆಯಲ್ಲಿ 300ಕ್ಕೂ ಹೆಚ್ಚುಜನ ಅಂಗಡಿ, ಮನೆ, ನಿವೇಶನ ಕಳೆದುಕೊಂಡುಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸರ್ಕಾರದಿಂದಬರಬೇಕಾದ ಬಿಡಿಗಾಸು ಪರಿಹಾರವಾಗಲಿ ಅಥವಾಸರ್ಕಾರದಿಂದ ನಿವೇಶನವಾಗಲಿ ನೀಡಿಲ್ಲ.
ಅಧಿಕಾರಿಗಳ ಬೇಜಾವಾಬ್ದಾರಿ ತನ: ದೇವರು ವರಕೊಟ್ಟರೂ, ಪೂಜಾರಿ ವರ ಕೊಟ್ಟಿಲ್ಲ ಎಂಬಂತೆ,ಸಂತ್ರಸ್ತರಿಗೆ ನಿವೇಶನ ನೀಡಲು ಶಾಸಕರು ಪ್ರಯತ್ನಮಾಡಿ, ಪಟ್ಟಣ ಸಮೀಪ ಸರ್ಕಾರಿ ಜಮೀನುಗುರುತಿಸಿ, ತಹಶೀಲ್ದಾರ್‌ಗೆ, ಪಪಂಗೆ ವರ್ಗಾಯಿಸಿನಿವೇಶನ ವಿಂಗಡಿಸಿ, ವಿತರಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಅಧಿಕಾರಿಗಳೂ ಮಾತ್ರ ಇದಕ್ಕೂನಮಗೂಯಾವುದೇ ಸಂಬಂಧಇಲ್ಲದಂತೆವರ್ತಿಸುತ್ತಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.