ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಜು.21ರಂದು ಬಕ್ರಿದ್‌ಹಬ್ಬ ಆಚರಿಸುವುದರಿಂದ ಅನಧಿಕೃತವಾಗಿ ಗೋವು,ಕರುಗಳು, ಒಂಟೆ ಮತ್ತು ಇತರೆ ಜಾನುವಾರುಅಕ್ರಮವಾಗಿ ಸಾಗಾಣಿಕೆ ಹಾಗೂ ವಧೆ ಮಾಡುವಸಾಧ್ಯತೆ ಇದೆ.
ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕುಎಂದುಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಪೊಲೀಸ್‌ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಸೂಚನೆನೀಡಿದರು.
ಜಿಲ್ಲಾಡಳಿತ ಭವನದ ಡೀಸಿ ಕಚೇರಿ ಸಭಾಂಗಣದಲ್ಲಿಬಕ್ರಿದ್ ಹಬ್ಬದ ಪ್ರಯುಕ್ತ ಜಾನುವಾರುಗಳ ಅಕ್ರಮಸಾಗಾಣಿಗೆ ಹಾಗೂ ವಧೆ ತಡೆಗಟ್ಟುವ ಸಂಬಂಧ ನಡೆದಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ರಾಜ್ಯದಲ್ಲಿ ಗೋಹತ್ಯೆ ಕಾಯ್ದೆಯು ಜಾರಿಯಾಗಿದ್ದು,ಜು.21ರಂದು ರಾಜ್ಯಾದ್ಯಂತ ಬಕ್ರಿದ್ ಆಚರಿಸುವುದರಿಂದ ಸಹಜವಾಗಿಯೇ ಮಾಂಸಕ್ಕೆ ಹೆಚ್ಚಿನ ಬೇಡಿಕೆಬರಲಿದೆ.
ಈ ನಿಟ್ಟಿನಲ್ಲಿ ಅಕ್ರಮವಾಗಿ ಜಾನುವಾರುಗಳಸಾಗಾಣಿಕೆ ಹಾಗೂ ವಧೆ ಹೆಚ್ಚಾಗಲಿದ್ದು, ಇದನ್ನುಕಟ್ಟುನಿಟ್ಟಾಗಿ ತಡೆಗಟ್ಟಬೇಕಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧವಾಗಿದ್ದು,ಎಮ್ಮೆ ಹಾಗೂ ಕೋಣಗಳಿಗೆ ಮಾತ್ರ13 ವರ್ಷದ ಬಳಿಕವಧೆ ಮಾಡಬಹುದು ಎಂಬ ಹೊಸ ವಿಧೇಯಕವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.ಇದರಿಂದಾಗಿ ಜಿಲ್ಲೆಯಲ್ಲಿ ಆಕ್ರಮವಾಗಿ ಸಾಕಾಣಿಕೆ ಹಾಗೂ ವಧೆಮಾಡುವವರನ್ನು ತಡೆಯುವ ನಿಟ್ಟಿನಲ್ಲಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಭದ್ರತಾ ಕ್ರಮ ಜರುಗಿಸಬೇಕುಎಂದು ತಿಳಿಸಿದರು.