ಗೌರಿಬಿದನೂರು: ಕೊರೊನಾದಿಂದ ಶಾಲಾ ಕಾಲೇಜು ಸ್ಥಗಿತಗೊಂಡು,ಖಾಸಗಿ ಶಾಲಾ ಶಿಕ್ಷಕರ ಬದುಕು ಸಂಕಷ್ಟದಲ್ಲಿದ್ದು, ಅವರ ನೋವು ನಲಿವಿಗೆಸ್ಪಂದಿಸಲು ಬದ್ಧರಾಗಿದ್ದೇವೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಕೋಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಅನುದಾನ ರಹಿತ ಶಿಕ್ಷಣಸಂಸ್ಥೆಗಳ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆಆಹಾರದ ಕಿಟ್ ವಿತರಿಸಿ ಮಾತನಾಡಿ,ಬಹುತೇಕ ಖಾಸಗಿ ಶಾಲಾ ಮುಖ್ಯಸ್ಥರುತಮ್ಮ ಸಂಸ್ಥೆಯಲ್ಲಿ ಹಲವು ವರ್ಷಗಳಿಂದಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರನ್ನು ಏಕಾಏಕಿಕೆಲಸದಿಂದ ತೆಗೆದು ಹಾಕಿದ್ದಾರೆ.ಇದರಿಂದ ಅವರ ಬದುಕು ಬೀದಿಗೆಬಿದ್ದಿದೆ. ನಾನು ಮತ್ತು ಚಿದಾನಂದ್‌ಎಂ.ಗೌಡ ಸಿಎಂ ಅವರನ್ನು ಅನೇಕ ಬಾರಿ ಭೇಟಿ ಮಾಡಿ, ಮನವಿ ಮಾಡಿ, ಎಲ್ಲಾಶಿಕ್ಷಕರ ಬದುಕಿಗೆ ಆಸರೆ ಆಗುವಂತೆಮಾಡಿದ್ದೇವೆ ಎಂದು ಹೇಳಿದರು.
ಸರ್ಕಾರವು ಎಲ್ಲಾ ವರ್ಗದಕಾರ್ಮಿಕರಿಗೆ ಆರೋಗ್ಯ ಕಾರ್ಡ್ ನೀಡಿ ಅದರ ಮೂಲಕ ಉಚಿತ ಸೇವೆ ನೀಡುತ್ತಿದೆ. ಆದರೆ, ಶಿಕ್ಷಕ ವರ್ಗಕ್ಕೆ ಮಾತ್ರಇದರಿಂದ ವಂಚಿತವಾಗಿತ್ತು. ಮುಂದಿನದಿನಗಳಲ್ಲಿ ಎಲ್ಲಾ ಶಿಕ್ಷಕರಿಗೆ ಆರೋಗ್ಯಕಾರ್ಡ್ ಕೊಡಿಸುವ ಮೂಲಕ ಅವರಬದುಕಿಗೆ ಭದ್ರತೆ ನೀಡಲಾಗುವುದು ಎಂದು ಹೇಳಿದರು.
ಒಂದೂವರೆ ವರ್ಷದಿಂದ ಎಲ್ಲಾ ಅನುದಾನ ರಹಿತ ಶಾಲಾಶಿಕ್ಷಕರ ಬದುಕು ಮೋಡ ಮುಸುಕಿದಂತಾಗಿದ್ದು, ಶೀಘ್ರ ಶಾಲೆಗಳು ಆರಂಭವಾಗಿ ನಿಮ್ಮೆಲ್ಲರ ಮೊಗದಲ್ಲಿ ಮಂದಹಾಸಮೂಡುವಂತಾಗಬೇಕು ಎಂದು ಹೇಳಿದರು. ಸೋಂಕಿಗೆ ಒಳಗಾಗಿ ಸಾವನ್ನಪ್ಪಿರುವ ಶಿಕ್ಷಕರ ಕುಟುಂಬಗಳಿಗೆ ನಮ್ಮ ಕಡೆಯಿಂದ ತಲಾ 10 ಸಾವಿರ ರೂ.ಸಹಾಯಧನ ನೀಡಲು ನಿರ್ಧರಿಸಿದ್ದೇವೆಎಂದು ಹೇಳಿದರು.
ಆಗ್ನೇಯ ಪದವೀಧರ ಕ್ಷೇತ್ರದ ಸದಸ್ಯ ಚಿದಾನಂದಎಂ.ಗೌಡ ಮಾತನಾಡಿ, ಕ್ಷೇತ್ರದ 5 ಜಿಲ್ಲೆ,34 ತಾಲೂಕಿನ ಸಾವಿರಾರು ಅನುದಾನರಹಿತ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಸಹಾಯಧನ ಬಿಡುಗಡೆ ಮಾಡಿಸಲು ಪ್ರಯತ್ನಿಸಿದ್ದೇವೆ ಎಂದರು.ತಾಲೂಕಿನ ಎಲ್ಲಾ ಅನುದಾನ ರಹಿತಶಾಲಾ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆಅಗತ್ಯ ಆಹಾರದ ಕಿಟ್ ವಿತರಣೆ ಮಾಡಿದರು. ಮುಖಂಡರಾದ ಎನ್.ಎಂ.ರವಿನಾರಾಯಣರೆಡ್ಡಿ, ರಮೇಶ್‌ರಾವ್ ಶೆಲ್ಕೆ, ಮೋಹನ್, ಪುಣ್ಯಾವತಿ,ಮೃತ್ಯುಂಜಯ, ಶಿಕ್ಷಕರಾದ ವಿ.ಟಿ.ವೆಂಕಟೇಶ್, ಸಿ.ಎನ್.ಶಂಕರರೆಡ್ಡಿ, ಶಾಂತರಾಜು, ಚಂದ್ರಶೇಖರ್, ಗೋಪಿ,ಪ್ರವೀಣ್ ಭಾಗವಹಿಸಿದ್ದರು.