ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರುತಾಲೂಕಿನಲ್ಲಿ ವಿವಿಧ ಗ್ರಾಪಂನಿಂದನರೇಗಾದಡಿ ಕೈಗೊಂಡಿದ್ದ ಅಭಿವೃದ್ಧಿಕಾಮಗಾರಿಗಳನ್ನುರಾಜ್ಯಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್‌ರಾಜ್ ಇಲಾಖೆಯಆಯುಕ್ತ ಅನಿರುದ್ಧ್ ಶ್ರವಣ್ ಪರಿಶೀಲಿಸಿ ಮೆಚ್ಚುಗೆ ವ್ಯಕಪಡಿಸಿದರು.
ಈ ವೇಳೆ ಮಾತನಾಡಿದ ಅವರು,ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲುನರೇಗಾ ಯೋಜನೆ ಸಹಕಾರಿ ಆಗಿದ್ದು,ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲಿರುವ ಜಲಮೂಲ ಸಂರಕ್ಷಣೆ ಮಾಡುವಕಾಮಗಾರಿ ನಡೆಸಲು ಪ್ರಥಮ ಆದ್ಯತೆನೀಡಬೇಕು ಎಂದು ಸಲಹೆ ನೀಡಿದರು.ಈಗಾಗಲೇ ಕಾಮಗಾರಿ ಆರಂಭ:ಈಗಾಗಲೇ ಜಿಲ್ಲೆಯಲ್ಲಿ ಜಲಮೂಲಅಭಿವೃದ್ಧಿಗೊಳಿಸುವ ಕಾಮಗಾರಿ ನಡೆಸಲಾಗಿದೆ.
ವಿಶೇಷವಾಗಿ ಗೋಕುಂಟೆ,ಕಲ್ಯಾಣಿಗಳ ನಿರ್ಮಾಣ, ಕೆರೆಗಳ ಅಭಿವೃದ್ಧಿಮುಂತಾದ ಕಾಮಗಾರಿ ನಡೆಸಲಾಗಿದೆ.ಅಲ್ಲದೆ, ನರೇಗಾ ಯೋಜನೆಯಡಿ ಮಳೆನೀರು ಸಂರಕ್ಷಣೆ ಮಾಡಲು ಮಳೆಕೊಯ್ಲುಪದ್ಧತಿ ಅಳವಡಿಸಿ, ನೀರು ಪೋಲಾಗದಂತೆಎಚ್ಚರವಹಿಸಲಾಗಿದೆ ಎಂದು ಹೇಳಿದರು.ಬದುಗಳ ನಿರ್ಮಾಣ: ನರೇಗಾಯೋಜನೆಯಡಿ ಜಿಲ್ಲೆಯಲ್ಲಿ ಮಾದರಿಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರನಿರ್ಮಿಸಲಾಗಿದೆ.
ಮಳೆ ನೀರುಸಂರಕ್ಷಣೆಗಾಗಿ ಬಹುಕಮಾನ್ ಚೆಕ್‌ಡ್ಯಾಂನಿರ್ಮಿಸಲಾಗಿದೆ. ಇದರಿಂದ ಅಂರ್ತಜಲಮಟ್ಟ ವೃದ್ಧಿಯಾಗಿ ಬತ್ತಿಹೋಗಿದ್ದ ಕೊಳವೆಬಾವಿಗಳಿಗೆ ಮರುಜೀವ ಬಂದಿದೆ. ರೈತರಿಗೆಅನುಕೂಲ ಕಲ್ಪಿಸಲು ಕೃಷಿಹೊಂಡ ಮತ್ತುಬದುಗಳ ನಿರ್ಮಿಸಲು ಅನುಕೂಲಕಲ್ಪಿಸಲಾಗಿದೆ ಎಂದು ವಿವರಿಸಿದರು.
ಮೆಚ್ಚುಗೆ: ನರೇಗಾದಡಿ ಗೌರಿಬಿದನೂರುತಾಲೂಕಿನ ಅಲೀಪುರ ಗ್ರಾಮದಲ್ಲಿ ಮರಾಠಿಪಾಳ್ಯ ನೀರಿನ ಹೊಂಡ, ಬಹುಕಮಾನ್‌ಚೆಕ್‌ಡ್ಯಾಂ ಕಾಮಗಾರಿ, ಕಲ್ಲಿನಾಯಕನಹಳ್ಳಿಯಲ್ಲಿ ಎನ್‌ಆರ್‌ಎಲ್‌ಎಂ ಕಟ್ಟಡ, ಗೆದ್ದರೆಗ್ರಾಪಂನ ಬಂದಾರ‌್ಲಹಳ್ಳಿ ಗ್ರಾಮದಲ್ಲಿ ಎನ್‌ಆರ್‌ಎಲ್‌ಎಂ ಕಟ್ಟಡ, ಗೆದರೆ ಗ್ರಾಪಂವ್ಯಾಪ್ತಿಯಲ್ಲಿಬಾಳೆತೋಟವನ್ನುಆಯುಕ್ತರು ವೀಕ್ಷಿಸಿದರು.
ಬಳಿಕ ಮಂಚೇನಹಳ್ಳಿಯರಾಯನಕಲ್ಲು ಗ್ರಾಮದಲ್ಲಿ ಬುಡಕಟ್ಟುಜನಾಂಗದವರಿಗೆ ಉದ್ಯೋಗ ಚೀಟಿ ನೀಡಿಆ ಪ್ರದೇಶ ಅಭಿವೃದ್ಧಿಗೊಳಿಸಲು ಸೂಚನೆನೀಡಿ, ನರೇಗಾ ಯೋಜನೆಯಡಿನಿರ್ಮಿಸಿರುವ ಕಾÊು ಗಾರಿ ಪರಿಶೀಲಿಸಿಮೆಚ್ಚುಗೆ ವ್ಯಕ್ತಪಡಿಸಿದರು. ನಂತರಗೌರಿಬಿದನೂರು ನಗರದಲ್ಲಿ ಸರ್ಕಾರಿಪ್ರಥಮ ದರ್ಜೆ ಕಾಲೇಜಿಗೆ, ಬಳಿಕ ರಂಗಸ್ಥಳದೇವಾಲಯಕ್ಕೆ ಭೇಟಿ ನೀಡಿ ವಾಪಸ್ಸಾದರು.ಜಿಪಂ ಸಿಇಒ ಪಿ.ಶಿವಶಂಕರ್, ಉಪಕಾರ್ಯದರ್ಶಿ ಶಿವಕುಮಾರ್, ಗೌರಿಬಿದೂರುತಾಪಂ ಇಒ ಮುನಿರಾಜು, ಅಲೀಪುರಗ್ರಾಪಂ ಅಧ್ಯಕ್ಷೆ ಎನ್.ಸರೋಜಮ್ಮ,ಉಪಾಧ್ಯಕ್ಷ ಮೊಹ್ಮದ್ ಗಝಿ°àಫರ್(ಬಾಬು), ಪಿಡಿಒ ಆರ್.ಎನ್.ಸಿದ್ದರಾಮಯ್ಯ, ನರೇಗಾ ಎಂಜಿನಿಯರ್‌ಜಿ.ಕೆ.ಪ್ರಶಾಂತ್, ಪಿಡಿಒ ಬಸವರಾಜ್‌ಮತ್ತಿತರರು ಉಪಸ್ಥಿತರಿದ್ದರು.