Advertisement

ದಿವ್ಯಾಂಗ ಮಕ್ಕಳಿಗೆ ಕಲಿಕಾ, ಆಹಾರ ಸಾಮಗ್ರಿ ವಿತರಣೆ

08:18 PM Jul 10, 2021 | Team Udayavani |

ಗೌರಿಬಿದನೂರು: ದಿವ್ಯಾಂಗರಿಗೆವಿಶೇಷ ಸೌಲಭ್ಯ, ಕಾಳಜಿ, ಅಕ್ಕರೆನೀಡಬೇಕು ಎಂದು ನಗರಸಭೆ ಅಧ್ಯಕ್ಷೆಗಾಯತ್ರಿ ತಿಳಿಸಿದರು.ನಗರದ ಅರುಣೋದಯ ವಿಶೇಷಶಾಲಾ ಮಕ್ಕಳಿಗೆ ಕೇಂದ್ರ ಸರ್ಕಾರದನ್ಯಾಷನಲ್‌ ಟ್ರಸ್ಟ್‌ನಿಂದ ನೀಡಿದಕಲಿಕಾ ಸಾಮಗ್ರಿ, ಪ್ರಜ್ಞಾ ಟ್ರಸ್ಟ್‌ನಿಂದನೀಡಿರುವ ಆಹಾರದ ಸಾಮಗ್ರಿವಿತರಿಸಿ ಮಾತನಾಡಿದರು.

Advertisement

ದಿವ್ಯಾಂಗರಿಗೆ ಸಾಮಾನ್ಯ ಮಕ್ಕಳಿಗಿಂತಭಿನ್ನವಾದ ಆಟ, ಪಾಠಕ್ಕೆ ಸಂಬಂಧಿಸಿದಚಟುವಟಿಕೆ ಕೈಗೊಳ್ಳಬೇಕಾಗಿದೆಎಂದು ವಿವರಿಸಿದರು.ನಗರಸಭೆ ಆಯುಕ್ತ ಸತ್ಯನಾರಾಯಣ ಮಾತನಾಡಿ, ಇಂತಹ ಮಕ್ಕಳಆರೈಕೆ ತುಂಬಾ ಕಷ್ಟ, ಈ ಕಾರ್ಯಮಾಡುವ ಸ್ಥಳೀಯ ಸಂಸ್ಥೆಗಳಲ್ಲದೆ,ಸಮುದಾಯವೂಕೈ ಜೋಡಿಸಬೇಕು.

ನಗರಸಭೆಯಿಂದ ಸಾಧ್ಯವಾಗುವ ಎಲ್ಲಾ ಸಹಕಾರವನ್ನು ನೀಡಲುಪ್ರಯತ್ನಿಸುವುದಾಗಿ ತಿಳಿಸಿದರು.ಪ್ರಜ್ಞಾ ಟ್ರಸ್ಟಿನ ಸಂಸ್ಥಾಪಕಯೋಜನಾ ನಿರ್ದೇಶಕ ಎನ್‌.ನಾಗರಾಜ್‌ ಮಾತನಾಡಿ, 1 ರಿಂದ10 ವರ್ಷದ ಮಕ್ಕಳಿಗೆ, ಅವರವಯೋಗುಣದ ಆಧಾರದಲ್ಲಿ ವಿವಿಧರೀತಿಯ ಕಲಿಕಾ ಸಾಮಗ್ರಿಗಳನ್ನುವಿತರಿಸಲಾಗಿದೆ.

ಕೋವಿಡ್‌-19ನಕ್ಲಿಷ್ಟ ಸಂದರ್ಭದಲ್ಲಿ ಮಕ್ಕಳು ವಿಶೇಷಶಾಲೆಗೆ ಬರಲು ಸಾಧ್ಯವಿಲ್ಲದ ಈಸಂದರ್ಭದಲ್ಲಿ ಅವರ ಮನೆಗಳಲ್ಲಿಯೇ ಚಟುವಟಿಕೆಗಳನ್ನು ನಿರ್ವಹಿಸಲು ಈ ಸಾಮಗ್ರಿಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.ಆಗಿಂದಾಗ್ಗೆ ಮಕ್ಕಳ ಮನೆಗಳಿಗೆನಮ್ಮ ಸಿಬ್ಬಂದಿ ಭೇಟಿ ನೀಡಿ ಸಾಮಗ್ರಿಯನ್ನು ಬಳಸುವ ವಿಧಾನ ಮತ್ತುಅದರಿಂದಾಗುವಉಪಯೋಗಗಳನ್ನುತಿಳಿಸುವುದರ ಜೊತೆಗೆ ಫಿಸಿಯೋಥೆರಪಿ, ಆಪ್ತ ಸಮಾಲೋಚನೆ ಸೇವೆನೀಡುವುದಾಗಿ ತಿಳಿಸಿದರು.

ವೀರಂಡಹಳ್ಳಿ ವಾಪ್ತಿಯನಗರಸಭಾ ಸದಸ್ಯೆ ರಂಗಮ್ಮ ಮಕ್ಕಳಿಗೆಹಿತವಚನ ತಿಳಿಸಿದರು.ನಗರಸಭೆ ಕಂದಾಯ ನಿರೀಕ್ಷಕಸಂತೋಷ್‌, ಆರೋಗ್ಯ ನಿರೀಕ್ಷಕಸುರೇಶ್‌, ಮುಖಂಡರಾದ ಸುನಿಲ್‌,ಮಹೇಶ್‌, ಶಾಲೆಯ ಸಿಬ್ಬಂದಿಪೂಜಾ,ನವೀನಾ, ಶಾಂತಮ್ಮ, ಪೋಷಕರುಹಾಜರಿದ್ದರು. ಪ್ರಜ್ಞಾ ಟ್ರಸ್ಟಿನ ಅಧ್ಯಕ್ಷೆಎಸ್‌.ವಿಜಯಲಕ್ಷಿ ¾à ಅತಿಥಿಗಳಿಗೆವಂದನೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next