Advertisement

ಎಚ್‌.ಎನ್‌.ವ್ಯಾಲಿ ನೀರು ಅಕ್ರಮ ಬಳಕೆ ಮಾಡಿದ್ರೆ ಕ್ರಮ

07:25 PM Jun 23, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸಲುಹೆಬ್ಟಾಳ-ನಾಗವಾರಕೆರೆಗಳ ತ್ಯಾಜ್ಯ ಸಂಸ್ಕರಿತ ನೀರನ್ನುಯೋಜನೆ (ಎಚ್‌.ಎನ್‌. ವ್ಯಾಲಿ) ವ್ಯಾಪ್ತಿಯ ಎಲ್ಲಾ ಕೆರೆಗಳುತುಂಬಿಸುವ ಅಗತ್ಯವಿದೆ. ಮಾರ್ಗ ಮಧ್ಯೆ ಎಲ್ಲಿಯೂ ನೀರು ಅಕ್ರಮವಾಗಿ ಬಳಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವಜೆ.ಸಿ.ಮಾಧುಸ್ವಾಮಿ ತಿಳಿಸಿದರು.

Advertisement

ಎಚ್‌.ಎನ್‌.ವ್ಯಾಲಿನೀರುಹರಿಯುತ್ತಿರುವ ಚಿಕ್ಕಬಳ್ಳಾಪುರನಗರದ ಕಂದವಾರ ಕೆರೆಯನ್ನು ವೀಕ್ಷಿಸಿ ನಂತರಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಹಲವು ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲಹೆಚ್ಚಿಸುವಲ್ಲಿ ಎಚ್‌.ಎನ್‌.ವ್ಯಾಲಿ ಯೋಜನೆ ಸಹಕಾರಿ ಆಗಿದೆ.ಯೋಜನೆ ವ್ಯಾಪ್ತಿಯ ಕೊನೆಯ ಕೆರೆಗೂ ನಿ ‌ àರುಹರಿಯಬೇಕು. ಆ ಮೂಲಕ ಯೋಜನೆಯ ನಿಜವಾದ ಉದ್ದೇಶ ಈಡೇರಬೇಕು ಎಂಬುದು ಸರ್ಕಾರದ ಗುರಿ ಎಂದುಹೇಳಿದರು.

ಅಕ್ರಮ ನೀರು ಬಳಕೆ ಮಾಡಿದ್ರೆ ಕ್ರಮ: ಆದರೆ, ಕೆಲವುರೈತರು ಕಾಲುವೆಗೆ ಅಕ್ರಮವಾಗಿ ಮೋಟರ್‌ಅಳವಡಿಸಿಕೊಂಡು ವ್ಯಾಲಿ ನೀರನ್ನು ಬಳಸುತ್ತಿದ್ದಾರೆ.ಇದರಿಂದ ಯೋಜನೆಯ ನಿಜವಾದ ಉದ್ದೇಶಕೆ R ಧಕ್ಕೆ ಆಗಿದೆ.ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ವೃಷಭಾವತಿ ವ್ಯಾಲಿ ಡಿಪಿಆರ್‌ ಸಿದ್ಧ: 1,400 ಕೋಟಿ ರೂ.ವೆಚ್ಚದ ವೃಷಭಾವತಿ ವ್ಯಾಲಿ ಯೋಜನೆಯ ಮೂಲಕನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ತುಮಕೂರಿನಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಯೋಜನೆಯಡಿಪಿಆರ್‌ ಆಗುತ್ತಿದೆ ಎಂದು ಮಾಹಿತಿ ನೀಡಿದರು.ಎರಡು ತಿಂಗಳಲ್ಲಿ ಬಾಕಿ ನೀರು: ಎಚ್‌.ಎನ್‌.ವ್ಯಾಲಿಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ 210 ಎಂಎಲ್‌ಡಿನೀರು ಕೊಡಬೇಕಾಗಿತ್ತು.ಅಷ್ಟು ಪ್ರಮಾಣದ ನೀರುದೊರೆಯುತ್ತಿಲ್ಲ. ಆದ್ದರಿಂದಎಲ್ಲಾ ಕೆರೆಗಳನ್ನು ತುಂಬಿಸಲುಸಾಧ್ಯವಾಗುತ್ತಿಲ್ಲ.

ಈಗ100ರಿಂದ 110 ಎಂಎಲ್‌ಡಿನೀರು ಹರಿಸಲಾಗುತ್ತಿದೆ. ಎರಡು ತಿಂಗಳ ಒಳಗೆ ಬಾಕಿನೀರನ್ನು Öರಿ‌ ಸಲಾಗುವುದು ಎಂದು ಹೇಳಿದರು.ಸಣ್ಣ ಕೆರೆ ಮೊದಲು ತುಂಬಿಸಿ: ಕಂದವಾರ ಕೆರೆ ತುಂಬಿದನಂತರ ಗೋಪಾಲಕೃಷ್ಣ ಕೆರೆಗೆ ನೀರು ಹರಿಸಬೇಕು. ಈಕೆರೆಯ ಸಾಮರ್ಥ್ಯ 140 ಎಂಸಿಎಫ್‌ಟಿ ಇದೆ. ದೊಡ್ಡಕೆರೆಗಳು ತುಂಬುವವರೆಗೆ ಕಾಯಬಾರದು.30ರಿಂದ 40 ಎಂಸಿಎಫ್‌ಟಿ ಸಾಮ¥Âì‌ ದಕೆÃಗ ೆ ಳನ್ನು ಮೊದಲು ತುಂಬಿಸಬೇಕು ಎಂದು‌ ಹೇಳಿದರು.

Advertisement

ಶಾಸಕ ವಿ.ಮುನಿಯಪ್ಪ, ಎಂಎಲ್ಸಿವೈ.ಎ.ನಾರಾಯಣಸ್ವಾಮಿ,ಬಿಜೆಪಿಜಿಲ್ಲಾಧ್ಯಕ್ಷರಾಮಲಿಂಗಪ್ಪ, ಮಾಜಿ ಅಧ್ಯಕ್ಷ ರವಿನಾರಾಯಣರೆಡ್ಡಿ, ಸಣ್ಣನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರನರೇಂದ್ರಬಾಬು, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಭಕ್ತÃಹಳಿ‌ Û ಬೈರೇಗೌಡ, ಡಿವೈಎಸ್‌ಪಿ ರವಿಶಂಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next