Advertisement

ಒಂದು ಯೂನಿಟ್‌ ರಕ್ತ ಮೂವರ ಪ್ರಾಣ ಉಳಿಸುತ್ತೆ

07:47 PM Jun 20, 2021 | Team Udayavani |

ಗೌರಿಬಿದನೂರು: ಒಬ್ಬ ಮನುಷ್ಯನಿಂದಸಂಗ್ರಹಿಸಿದ ಒಂದು ಯೂನಿಟ್‌ರಕ್ತದಿಂದ ಮೂವರ ಪ್ರಾಣ ಉಳಿಸಬಹುದು ಎಂದು ಭಾರತೀಯ ರೆಡ್‌ಕ್ರಾಸ್‌ ಅಧ್ಯಕ್ಷ ಹಾಗೂ ತಹಶೀಲ್ದಾರ್‌ ಶ್ರೀನಿವಾಸ್‌ ನುಡಿದರು.

Advertisement

ಪಟ್ಟಣದ ವೀರಶೈವ ಕಲ್ಯಾಣಮಂಟಪದಲ್ಲಿ ಸೇವಾಭಾರತಿ, ರೆಡ್‌ಕ್ರಾಸ್‌ನಿಂದ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಡೆದ ಶಿಬಿರಕ್ಕೆ ಚಾಲನೆನೀಡಿ ಮಾತನಾಡಿದರು. ರಕ್ತವುಕಾರ್ಖಾನೆಯಲ್ಲಿ ತಯಾರಿಸಲು ಸಾಧ್ಯವಿಲ್ಲ. ಕೇವಲ ಮನುಷ್ಯರಿಂದಮಾತ್ರ ಸಂಗ್ರಹಿಸಬೇಕು. ರೋಗಿಗಳು,ಅಪಾಘಾತಕ್ಕೀಡಾಗುವವರ ಪ್ರಾಣವನ್ನುಉಳಿಸಲು ರಕ್ತದ ಅವಶ್ಯಕತೆ ಇದೆ.

ಸೇವಾಭಾರತಿ, ರೆಡ್‌ಕ್ರಾಸ್‌ ಸಂಸ್ಥೆಮಾಡುತ್ತಿರುವ ಕಾರ್ಯ ಅಭಿನಂದನೀಯ.ಮುಂದಿನ ದಿನಗಳಲ್ಲಿ ಮೆಗಾ ಶಿಬಿರಏರ್ಪಡಿಸಲಾಗುವುದು ಎಂದುತಿಳಿಸಿದರು. ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್‌ಜಿಲ್ಲಾ ಕಾರ್ಯದರ್ಶಿ ರವಿಕುಮಾರ್‌, ಖಚಾಂಚಿ ಜಯರಾಂ, ತಾಲೂಕುಕಾರ್ಯದರ್ಶಿ ದಸ್ತಗಿರಿ ಸಾಬ್‌, ಖಚಾಂಚಿಎಸ್‌.ಎಸ್‌.ರೆಡ್ಡಿ, ಡಾ.ಹೇಮಂತ್‌ಸಾವಳಿಗಿ,ಶ್ರೀನಾಥ್‌,ಸೇವಾಭಾರತೀಯವೇಣುಗೋಪಾಲ್‌, ದಯಾನಂದ್‌,ಜಯಕುಮಾರ್‌, ರವಿ ಮುಂತಾದವರುಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next